ಕನೌಜ್:ಹೆಂಡತಿಯನ್ನು ತನ್ನ ಜತೆಗೆ ಕಳುಹಿಸಲು ನಿರಾಕರಿಸಿ ಕಾರಣಕ್ಕೆ ಅತ್ತೆಯ ಕುಟುಂಬಸ್ಥರ ಮೇಲೆ ಅಳಿಯನೊಬ್ಬ ಹಲ್ಲೆ ನಡೆಸಿ, ಆತನು 2ನೇ ಅಂತಸ್ತಿನಿಂದ ಜಿಗಿದಿರುವ ಘಟನೆ ಉತ್ತರಪ್ರದೇಶದ ಕನೌಜ್ ಜಿಲ್ಲೆಯಲ್ಲಿ ನಡೆದಿದೆ.
ಇದನ್ನೂ ಓದಿ:ಆಕೆ ಅವನನ್ನು ರಾತ್ರಿಯಿಡೀ ಮಾತನಾಡಿಸುತ್ತಲೇ ಇದ್ದಳು: ಬೆಳಿಗ್ಗೆ ಎದ್ದಾಗ ಗೊತ್ತಾಯ್ತ ಆತ ಮೃತಪಟ್ಟಿದ್ದಾನೆಂದು..
ಜಿಲ್ಲೆಯ ರಾಮ್‌ಪುರ ಮಜಿಲಾ ನಿವಾಸಿಯಾಗಿರುವ ಪಿಂಟು ಎಂಬಾತನ ಅತ್ತೆಯ ಮನೆ ಸದರ್ ಕೊತ್ವಾಲಿ ಪ್ರದೇಶದ ದೇವಧರಪುರ ಗ್ರಾಮದಲ್ಲಿದೆ. ಆತನ ಹೆಂಡತಿ ಸೀಮಾ ರಕ್ಷಾಬಂಧನದ ಮೊದಲು ತನ್ನ ತಾಯಿಯ ಮನೆಗೆ ಹೋಗಿದ್ದಳು. ರಕ್ಷಾಬಂಧನದ ಹಬ್ಬದ ನಂತರ, ಪಿಂಟು ತನ್ನ ಹೆಂಡತಿ ಸೀಮಾಳನ್ನು ಅವಳ ಅತ್ತೆಯ ಮನೆಯಿಂದ ಕರೆದುಕೊಂಡು ಹೋಗಲು ಹೋಗಿದ್ದಾನೆ.
ಆದರೆ ಸೀಮಾಳ ತಾಯಿ ಮಮತಾ ಆಕೆಯನ್ನು ಕಳುಹಿಸಲು ನಿರಾಕರಿಸಿದ್ದಾಳೆ. ಇದಾದ ಬಳಿಕ ಪಿಂಟು ತನ್ನ ಮನೆಗೆ ಬರುವಂತೆ ಪತ್ನಿ ಬಳಿ ಹೇಳಿದ್ದ, ಆಕೆಯೂ ಕೂಡ ಪತಿಯೊಂದಿಗೆ ಹೋಗಲು ನಿರಾಕರಿಸಿದ್ದಾಳೆ. ಇದರಿಂದ ಕುಪಿತಗೊಂಡ ಪಿಂಟು ಮೊದಲು ಇಟ್ಟಿಗೆಯಿಂದ ಪತ್ನಿಗೆ ಹೊಡೆದಿದ್ದು, ಬಳಿಕ ಮನೆಯಲ್ಲಿಟ್ಟಿದ್ದ ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಆಕೆಯ ರಕ್ಷಣೆಗೆ ಬಂದ ಅತ್ತೆ ಹಾಗೂ ಪತ್ನಿಯ ಸಹೋದರನ ಮೇಲೆಯೂ ಬರ್ಬರವಾಗಿ ಹಲ್ಲೆ ನಡೆಸಿದ್ದಾನೆ.
ಇದನ್ನೂ ಓದಿ:ಕಿಡ್ನಿಸ್ಟೋನ್​ ಆಪರೇಷನ್​ ಬಳಿಕ ಕಿಡ್ನಿಯೇ ನಾಪತ್ತೆ: ವೈದ್ಯರ ವಿರುದ್ಧ ದೂರು
ಈ ವೇಳೆ ಮನೆಯವರು ಕಿರುಚಾಟ ನಡೆಸಿದ್ದು, ಪಿಂಟು ದಿಕ್ಕುತೋಚದೆ ಮನೆಯ ಎರಡನೇ ಅಂತಸ್ತಿನಿಂದ ಜಿಗಿದಿದ್ದು ಆತನ ಸ್ಥಿತಿ ಚಿಂತಾಜನಕವಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ನಾಲ್ವರು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:15 + 6 =
Remember me
