ಲಖನೌ:ಅತ್ತೆಯ ಜತೆಗೆ ಅಳಿಯ ಓಡಿಹೋಗಿರುವ ಮುಜುಗರದ ಘಟನೆ ಉತ್ತರ ಪ್ರದೇಶದ ಲಖನೌದ ರಹೀಮಾಬಾದ್​ನಲ್ಲಿ ನಡೆದಿದೆ.ಇದನ್ನೂ ಓದಿ:ಉಲ್ಟಾ ಹೊಡೆದ ನಳಿನ್ ಕುಮಾರ್ ಕಟೀಲ್; ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲವೆಂದು ಸ್ಪಷ್ಟನೆಈ ಕುರಿತು ಹರ್ದೋಯ್ ಜಿಲ್ಲೆಯ ಅಲಿ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯಲ್ಲಿ ವಾಸಿಸುವ ರಿತೇಶ್ ಎಂಬುವರು ತನ್ನ ಸೋದರ ಮಾವ ತನ್ನ ತಾಯಿಯನ್ನು ಕರೆದುಕೊಂಡು ಓಡಿಹೋಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಇಬ್ಬರ ಹೆಸರನ್ನು ಬಹಿರಂಗಗೊಳಿಸದೇ ಶೋಧನೆ ನಡೆಸುತ್ತಿದ್ದಾರೆ.ರಹೀಮಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯಲ್ಲಿ ವಾಸಿಸುವ ರಿತೇಶ್​ನ ಸೋದರ ಮಾವ ಹತ್ತು ವರ್ಷಗಳ ಹಿಂದೆ ಆತನ ಸಹೋದರಿಯನ್ನು ಮದುವೆಯಾಗಿದ್ದ. ಇವರಿಗೆ ಎರಡು ಹೆಣ್ಣು ಮಕ್ಕಳು ಮತ್ತು ಸುಮಾರು ನಾಲ್ಕು ವರ್ಷದ ಮಗನಿದ್ದು, ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ರಿತೇಶ್​​ನ ಸಹೋದರಿ ಎರಡು ವರ್ಷಗಳ ಹಿಂದೆ ಲಖನೌದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದನ್ನೂ ಓದಿ:ಕೊಟ್ಟ ಮಾತು ಉಳಿಸಿಕೊಳ್ಳಲು ಪರದಾಟ: ಮಾಜಿ ಸಿಎಂ ಡಿ.ವಿ.ಸದಾನಂದಗೌಡ ವ್ಯಂಗ್ಯ
ಅಂದಿನಿಂದ ಸೋದರ ಮಾವ ಹಾಗೂ ಆತನ ಮಕ್ಕಳು, ರಿತೇಶ್​ ಹಾಗೂ ಆತನ ತಾಯಿ ಜತೆಗೆ ವಾಸಿಸುತ್ತಿದ್ದರು, ಸುಮಾರು ಎರಡು ವರ್ಷಗಳ ಹಿಂದೆ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿದ್ದು, ಸೋದರಮಾವ ಹಾಗೂ ರಿತೇಶ್​​ನ ತಾಯಿ ಪರಸ್ಪರ ಪ್ರೀತಿಸಲು ಪ್ರಾರಂಭಿಸಿದ್ದರು. ಭಾನುವಾರ ರಾತ್ರಿ ಎಂಟು ಗಂಟೆ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಮನೆಗೆ ಬಂದ ಸೋದರ ಮಾವ, ರಿತೇಶ್​​ನ ತಾಯಿಯೊಂದಿಗೆ ನಗದು ಮತ್ತು ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾನೆ.(ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:7 + 13 =
Remember me
