ಹೈದರಾಬಾದ್​:ಮದುವೆಯಾದ ಆರೇ ತಿಂಗಳಲ್ಲಿ ಮಗಳು ಆತ್ಮಹತ್ಯೆಗೆ ಶರಣು. ಇದಾದ ಕೆಲವೇ ತಿಂಗಳಲ್ಲಿ ಮಹಿಳೆಯೊಬ್ಬಳು ಅಳಿಯನನ್ನೇ ಕೊಲೆ ಮಾಡಿರುವ ಘಟನೆ ಹೈದರಾಬಾದ್​ನ ಉಪ್ಪಾಳ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿರುವ ರಾಮನಾಥಪುರದಲ್ಲಿ ಗುರುವಾರ (ಅ.29) ನಡೆದಿದೆ.
ಮೃತನನ್ನು ನವೀನ್​ ಎಂದು ಗುರುತಿಸಲಾಗಿದೆ. ಈತನಿಗೆ ವಂದನಾ ಜತೆ ಈ ಹಿಂದೆ ಮದುವೆಯಾಗಿತ್ತು. ಆದರೆ, ಗಂಡನ ವರ್ತನೆಯಿಂದ ಬೇಸತ್ತಿದ್ದ ವಂದನಾ ಮಾರ್ಚ್​ 14ರಂದು ಆತ್ಮಹತ್ಯೆಗೆ ಶರಣಾಗಿದ್ದಳು. ಸೂಸೈಡ್​ ಕೇಸ್​ ದಾಖಲಿಸಿಕೊಂಡಿದ್ದ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿರುವಾಗಲೇ ವಂದನಾ ತಾಯಿ ಅನಿತಾ, ಅಳಿಯ ನವೀನ್​ನನ್ನು ಮನೆಗೆ ಕರೆದು ಚಾಕು ಇರಿದು ಕೊಲೆ ಮಾಡಿದ್ದಾಳೆ.
ಇದನ್ನೂ ಓದಿ:ಉಡುಪಿ ಯುವತಿ ಅನುಮಾನಾಸ್ಪದ ಸಾವು ಪ್ರಕರಣ: ರೋಚಕ ಮಾಹಿತಿ ಬಿಚ್ಚಿಟ್ಟ ಪ್ರಿಯಕರ ಪ್ರಶಾಂತ್​!
ಇನ್ನು ಮದುವೆಗೂ ಮುಂಚೆಯೇ ಅತ್ತೆ ಅನಿತಾ ಮತ್ತು ಅಳಿಯ ನವೀನ್​ ನಡುವೆ ವಿವಾಹೇತರ ಸಂಬಂಧ ಇತ್ತು ಎಂದು ಶಂಕಿಸಲಾಗಿದೆ. ಒಂದೆಡೆ ಅತ್ತೆ ಮತ್ತು ಗಂಡನ ಕಿರುಕುಳ ಹಾಗೂ ತಾಯಿಯೊಂದಿಗೆ ಗಂಡನ ಅಕ್ರಮ ಸಂಬಂಧದಿಂದ ಮನನೊಂದು ವಂದನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಹೇಳಲಾಗಿದೆ.
ಆತ್ಮಹತ್ಯೆ ಪ್ರಕರಣದಲ್ಲಿ ನವೀನ್​ ಬಿಡುಗಡೆಯಾದ ಬಳಿಕವೂ ಅತ್ತೆಯೊಂದಿಗೆ ನವೀನ್​ ತನ್ನ ಸಂಬಂಧ ಮುಂದುವರಿಸಿದ್ದ ಎನ್ನಲಾಗಿದೆ. ಇದರ ನಡುವೆ ಅನಿತಾಗೆ ಕಿರುಕುಳ ಕೊಡಲು ನವೀನ್​ ಶುರು ಮಾಡಿದ್ದನಂತೆ. ಹೀಗಾಗಿ ಕಿರುಕುಳದಿಂದ ತಪ್ಪಿಸಿಕೊಳ್ಳಲು ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದಾಗಿ ಆರೋಪಿ ಅನಿತಾ ಬಾಯ್ಬಿಟ್ಟಿದ್ದಾಳೆ.
ಸದ್ಯ ಅನಿತಾಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಮೃತ ನವೀನ ಶವವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ತನಿಖೆ ಮುಂದುವರಿದಿದೆ.(ಏಜೆನ್ಸೀಸ್​)
VIDEO| ಪವಿತ್ರ ಸ್ಥಳದಲ್ಲಿ ಅರೆಬೆತ್ತಲೆ ಫೋಟೋಶೂಟ್: ಮಾಡೆಲ್ ಬೃಂದಾ ಅರಸ್ ಹೇಳಿದ್ದೇನು?!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + eleven =
Remember me
