ತಿರುಪತಿ:ಆಂಧ್ರ ಪ್ರದೇಶದ ಚಿತ್ತೂರು(ತಿರುಪತಿ) ಶಾಸಕ ಬಿ. ಕರುಣಾಕರ ರೆಡ್ಡಿ ಪುತ್ರ ಅಭಿನಯ್ ರೆಡ್ಡಿ ತಿರುಪತಿ ವಿಮಾನ ನಿಲ್ದಾಣದ ನೀರು ಪೂರೈಕೆ ವ್ಯವಸ್ಥೆಗೆ ತಡೆಯೊಡ್ಡಿ ವಿಲಕ್ಷಣ ರೀತಿಯಲ್ಲಿ ದೇಶದ ಗಮನಸೆಳೆದಿದ್ದಾರೆ.
ಅಭಿನಯ್ ರೆಡ್ಡಿ ತಿರುಪತಿಯ ಡೆಪ್ಯುಟಿ ಮೇಯರ್. ರೇಣಿಗುಂಟ ಏರ್​ಪೋರ್ಟ್ ಮ್ಯಾನೇಜರ್ ಸುನಿಲ್ ಮತ್ತು ಅಭಿನಯ್ ರೆಡ್ಡಿ ನಡುವಿನ ಸಂಘರ್ಷದ ಪರಿಣಾಮ ಇದು. ಈ ವಾರ ಆರಂಭದಲ್ಲಿ ರಾಷ್ಟ್ರೀಯ ಕಬಡ್ಡಿ ಸ್ಪರ್ಧೆಯ ಸಮಾರೋಪದಲ್ಲಿ ಭಾಗಿಯಾಗಲು ಬಂದ ಆಂಧ್ರ ಸಚಿವ ಬೋತ್ಸಾ ಸತ್ಯನಾರಾಯಣ ಮತ್ತು ಟಿಟಿಡಿ ಚೇರ್​ವುನ್ ವೈ.ವಿ ಸುಬ್ಬಾ ರೆಡ್ಡಿ ಅವರನ್ನು ಬರಮಾಡಿಕೊಳ್ಳಲು ಅಭಿನಯ್ ರೆಡ್ಡಿ ಏರ್​ಪೋರ್ಟ್​ಗೆ ಹೋಗಿದ್ದರು.
ಆದರೆ, ಏರ್​ಪೋರ್ಟ್ ಮ್ಯಾನೇಜರ್ ಸುನಿಲ್ ಅವರು ಅಭಿನಯ್ ರೆಡ್ಡಿ ಮತ್ತು ಅವರ ಸಹಾಯರಿಗೆ ವಿಮಾನ ನಿಲ್ದಾಣ ಪ್ರವೇಶಿಸಲು ಅನುಮತಿ ನಿರಾಕರಿಸಿದರು. ಪರಿಣಾಮ ತೀವ್ರ ವಾಗ್ವಾದ ನಡೆಯಿತು. ಇದರ ಬೆನ್ನಿಗೆ, ಪ್ರತೀಕಾರ ಕ್ರಮವೆಂಬಂತೆ ಏರ್​ಪೋರ್ಟ್ ಮತ್ತು ಅಲ್ಲಿನ ವಸತಿ ಸಂಕೀರ್ಣಕ್ಕೆ ನೀರು ಪೂರೈಕೆಯನ್ನು ಸ್ಥಗಿತಗೊಳಿಸಿದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nineteen − three =
Remember me
