ಭೋಪಾಲ್​:ಮಧ್ಯಪ್ರದೇಶ ಕಾಂಗ್ರೆಸ್​ ಸರ್ಕಾರ ಅಸ್ಥಿರಗೊಂಡಿದೆ. 114 ಇದ್ದ ಶಾಸಕರ ಸಂಖ್ಯಾಬಲ 92ಕ್ಕೆ ಕುಸಿದು ಆಗಲೋ, ಈಗಲೋ ಪತನವಾಗುವಂತಿದೆ. ಉಳಿದ ಶಾಸಕರನ್ನು ಉಳಿಸಿಕೊಳ್ಳುವ ಪ್ರಯತ್ನ ಜಾರಿಯಲ್ಲಿದೆ.ಹೀಗಿರುವಾಗ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್​ ಅವರ ಪುತ್ರ ನಮ್ಮ ಸರ್ಕಾರ ಉಳಿಯುತ್ತದೆ. ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ರೆಬಲ್​ ಆಗಿ ಕರ್ನಾಟಕ ಸೇರಿಕೊಂಡಿರುವ ಶಾಸಕರೆಲ್ಲರೂ ಖಂಡಿತ ವಾಪಸ್ ಬರುತ್ತಾರೆ. 22 ಶಾಸಕರೂ ಮತ್ತೆ ಕಾಂಗ್ರೆಸ್​ಗೆ ಸೇರ್ಪಡೆಯಾಗುತ್ತಾರೆ ಎಂದು ಸಂಸದ ನಕುಲ್​ ನಾಥ್​ ತಿಳಿಸಿದ್ದಾರೆ.
ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ಕಮಲನಾಥ್​ ನೇತೃತ್ವದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಖಂಡಿತ ಅಧಿಕಾರದಲ್ಲಿ ಮುಂದುವರಿಯುತ್ತದೆ ಎಂಬ ಭರವಸೆ ನನಗೆ ಇದೆ ಎಂದಿದ್ದಾರೆ.ಯಾವ ಶಾಸಕರೂ ಖುದ್ದಾಗಿ ಬಂದು ಸ್ಪೀಕರ್​ಗೆ ರಾಜೀನಾಮೆ ಸಲ್ಲಿಸಿಲ್ಲ. ಹಾಗಾಗಿ ಯಾವುದೂ ಇನ್ನೂ ಅಂಗೀಕಾರ ಆಗಿಲ್ಲ ಎಂದು ತಿಳಿಸಿದ್ದಾರೆ.
ಈ ಮಧ್ಯೆ ಕಾಂಗ್ರೆಸ್​ ಹಿರಿಯ ನಾಯಕರೋರ್ವರು ಮಾತನಾಡಿ, ನಾವು ಉಳಿದ 92 ಶಾಸಕರನ್ನು ಹಾಗೂ ಮಧ್ಯಪ್ರದೇಶ ಸರ್ಕಾರ ಉಳಿಯಲು ಬೆಂಬಲ ನೀಡುವವರನ್ನು ರಾಜಸ್ಥಾನದ ಹೋಟೆಲ್​ಗಳಿಗೆ ಸ್ಥಳಾಂತರಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಸದ್ಯ ವಿಧಾನಸಭೆಯಲ್ಲಿ ಬಿಜೆಪಿಗೆ 107 ಶಾಸಕರ ಸಂಖ್ಯಾಬಲ ಇದೆ.(ಏಜೆನ್ಸೀಸ್​)
ಟ್ರಾಫಿಕ್​ ಪೊಲೀಸರಿಗೆ ದೊಡ್ಡ ತಲೆನೋವು ತಂದಿಟ್ಟ ಕರೊನಾ ವೈರಸ್​; ಅಂಥದ್ದೇನಾಗ್ತಿದೆ ಗೊತ್ತಾ?

ಸಿಂಧಿಯಾ ಪಕ್ಷ ಬಿಟ್ಟು ಹೋದ ಬೆನ್ನಲ್ಲೇ ಆರ್ಥಿಕತೆ ವಿಚಾರವಿಟ್ಟುಕೊಂಡು ಮೋದಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 1 =
Remember me
