ಮೇರಠ್:ಪಬ್​ಜಿ ಆಡಬೇಡ, ಅದು ಒಳ್ಳೆಯದಲ್ಲ ಎಂದು ಬುದ್ಧಿವಾದ ಹೇಳಿದ್ರು ಅಪ್ಪ. ಅದನ್ನು ಕೇಳಿ ಕೇಳಿ ಕೆದರಿದ ಮಗ ಪಕ್ಕದಲ್ಲೇ ಇದ್ದ ಚೂರಿ ತಗೊಂಡು ಅಪ್ಪನ ಕತ್ತು ಸೀಳಿಯೇ ಬಿಟ್ಟ! ಇಂಥದ್ದೊಂದು ವಿಲಕ್ಷಣ ಕೃತ್ಯ ಮೇರಠ್ ಜಿಲ್ಲೆಯ ಖಾರ್​ಖೋಡ ಪಟ್ಟಣದ ಜಾಮ್​ನಗರ ಎಂಬಲ್ಲಿ ನಡೆದಿತ್ತು.
ಪೊಲೀಸರು ಸೋಮವಾರ ನೀಡಿರುವ ಮಾಹಿತಿ ಪ್ರಕಾರ, ಆರೋಪಿಯನ್ನು ಆಮಿರ್ ಎಂದು ಗುರುತಿಸಲಾಗಿದೆ. ಆತನ ತಂದೆಯ ಹೆಸರು ಇರ್ಫಾನ್​. ಈ ಕೃತ್ಯ ಗುರುವಾರವೇ ನಡೆದಿದೆ. ಆದರೆ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ಸುದೀರ್ಘ ಹೊತ್ತು ಗೇಮ್​ನಲ್ಲೇ ಕಾಲಕಳೆಯುತ್ತಿದ್ದ ಆಮಿರ್​ಗೆ ಈ ಬಗ್ಗೆ ಅಪ್ಪ ಇರ್ಫಾನ್​ ತಾಕೀತು ಮಾಡಿದ್ದು ಕೆರಳಿಸಿತ್ತು. ಪದೇಪದೆ ಟೀಕೆಯಿಂದ ಬೇಸತ್ತಿದ್ದ ಆಮಿರ್​, ಸಮೀಪದಲ್ಲೇ ಚೂರಿ ಎತ್ತಿಕೊಂಡು ಇರ್ಫಾನ್ ನ ಕತ್ತಿನ ಮೇಲೆ ಹಲವು ಬಾರಿ ಚುಚ್ಚಿದ್ದಾನೆ. ಬಳಿಕ ತನ್ನ ಕತ್ತನ್ನೂ ಕುಯ್ದುಕೊಂಡಿದ್ದಾನೆ.
ಇದನ್ನೂ ಓದಿ:ಆರ್​ಆರ್​ ನಗರ ಬೈ ಎಲೆಕ್ಷನ್​: ಮೂರು ಪಕ್ಷಗಳ ಅಭ್ಯರ್ಥಿ ಬೆನ್ನಿಗೆ ನಿಂತಿದ್ದಾರೆ ಆ ನಾಯಕರು
ಇಬ್ಬರ ಸ್ಥಿತಿಯೂ ಗಂಭೀರವಾಗಿದ್ದು ಮೇರಠ್ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ. ಆಮಿರ್ ಮಾದಕ ವ್ಯಸನಿಯಾಗಿದ್ದ. ಅದಕ್ಕೆ ಚಿಕಿತ್ಸೆಯೂ ನಡೆಯುತ್ತಿದ್ದು, ಅದರ ನಡುವೆ ಹೀಗಾಗಿದೆ ಎಂಬ ವಿವರಣೆಯನ್ನು ಕುಟುಂಬ ಸದಸ್ಯರು ಪೊಲೀಸರಿಗೆ ನೀಡಿದ್ದಾರೆ. (ಏಜೆನ್ಸೀಸ್)
VIDEO| ದೊಡ್ಡ ಗಾತ್ರದ ಹೆಬ್ಬಾವೊಂದು ಕಾಲಿಗೆ ಸುತ್ತು ಹಾಕಿದಾಗ ಆಕೆ ಫೋನ್​ ಮಾಡಿದ್ದು ಪೊಲೀಸರಿಗೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
