ಜಮುಯಿ: ಮಗನೊಬ್ಬ ತನ್ನ ತಂದೆಯನ್ನು ಇಟ್ಟಿಗೆ ಮತ್ತು ಕಲ್ಲುಗಳಿಂದ ಹೊಡೆದು ಸಾಯಿಸಿ ನಂತರ ಆತನ ಕಿವಿ ಮತ್ತು ಬೆರಳನ್ನು ಜಗಿದು ತಿಂದಿರುವ ಘಟನೆ ಬಿಹಾರದ ಜಮುಯಿ ಎಂಬಲ್ಲಿ ನಡೆದಿದ್ದು, ಸಾಕಷ್ಟು ಜನರು ಸುದ್ದಿ ಕೇಳಿ ಆಘಾತಕ್ಕೊಳಗಾಗಿದ್ದಾರೆ.ಇದನ್ನೂ ಓದಿ:ಪತಿಯನ್ನು ಫಂಕ್ಷನ್​ಗೆ ಕಳುಹಿಸಿ, ಆತನ ಗೆಳೆಯನ ಜೊತೆ ಪರಾರಿಯಾದ ಪತ್ನಿ..!
ಜಮುಯಿಯ ಚರ್ಕಪಥರ್ ಪೊಲೀಸ್ ಠಾಣಾ ವ್ಯಾಪ್ತಿಯ ಲಾಲಿಲಾಬಾದ್ ಪಂಚಾಯತ್‌ನ ದೋಮಸರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತನನ್ನು ಗೋಲಾ ಯಾದವ್​ ಎಂದು ಗುರುತಿಸಲಾಗಿದೆ. ಇನ್ನು ಆರೋಪಿ ಮಗ ನರೇಶ್​ ಯಾದವ್​ ಆಗಿದ್ದು, ಆತ ಮಾನಸಿಕ ಅಸ್ವಸ್ಥನಾಗಿದ್ದ ಎಂದು ಹೇಳಲಾಗಿದೆ.
ರಾಂಚಿಯ ಮಾನಸಿಕ ಆಸ್ಪತ್ರೆಯಲ್ಲಿ ಈತನ ಚಿಕಿತ್ಸೆ ನಡೆಯುತ್ತಿದ್ದು, ಐದು ದಿನಗಳ ಹಿಂದೆ ಔಷಧಿ ಖಾಲಿಯಾಗಿತ್ತು. ಸಮಯಕ್ಕೆ ಸರಿಯಾಗಿ ಔಷಧಿ ತೆಗೆದುಕೊಳ್ಳದ ಕಾರಣ ಆತನ ಮಾನಸಿಕ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಆತ ಮಂಗಳವಾರ ರಾತ್ರಿ ಏಕಾಏಕಿ ಮನೆಯಿಂದ ಓಡಿ ಕಾಡಿನ ಕಡೆಗೆ ಹೋಗಿದ್ದಾನೆ. ಇದಾದ ನಂತರ ಅವನ ತಂದೆಯೂ ಅವನನ್ನು ಹುಡುಕುತ್ತಾ ಕಾಡಿನ ಕಡೆಗೆ ಹೋಗಿದ್ದಾನೆ.ಇದನ್ನೂ ಓದಿ:ಮಹಿಳೆಯ ಗಂಟಲು ಕೊಯ್ದು, ದೇಹದಿಂದ ಕಾಲು ಬೇರ್ಪಡಿಸಿದ ದುರುಳರು..
ಬಹಳ ಹೊತ್ತಿನ ನಂತರ ಆತನನ್ನು ಹುಡುಕಿದ ತಂದೆ, ಅವನೊಂದಿಗೆ ಮನೆಗೆ ಹಿಂದಿರುಗುತ್ತಿದ್ದನು. ಈ ವೇಳೆ ಏಕಾಏಕಿ ನರೇಶ್ ತಂದೆಯ ಮೇಲೆ ಹಲ್ಲೆ ನಡೆಸಿದ್ದು, ಕಲ್ಲು ಮತ್ತು ಇಟ್ಟಿಗೆಯಿಂದ ಹೊಡೆದು ಕೊಂದಿದ್ದಾನೆ. ಅಷ್ಟೇ ಅಲ್ಲ, ಕೊಂದ ಬಳಿಕ ತಂದೆಯ ಕಿವಿ, ಬೆರಳನ್ನು ಜಗಿದು ತಿಂದಿದ್ದಾನೆ. ಬಳಿಕ ಮನೆಗೆ ಹಿಂದಿರುಗಿದ ಮಗ, ತಂದೆಯನ್ನು ಕೊಂದು ಶವವನ್ನು ನದಿಗೆ ಎಸೆದಿರುವುದಾಗಿ ಕುಟುಂಬಸ್ಥರಿಗೆ ತಿಳಿಸಿದ್ದಾನೆ.ಆತನ ಮಾತು ಕೇಳಿ ಆಶ್ಚರ್ಯಚಕಿತರಾದ ಕುಟುಂಬಸ್ಥರು ನದಿಯತ್ತ ಓಡಿ ಹೋಗಿ ನೋಡಿದಾಗ ಅಲ್ಲಿ ಶವ ಬಿದ್ದಿರುವುದು ಕಂಡು ಬಂದಿದ್ದು, ಈ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇದರೊಂದಿಗೆ ಪೊಲೀಸರು ಆರೋಪಿ ಮಗನನ್ನೂ ಬಂಧಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
