ಮುಂಬೈ:ಬಾಲಿವುಡ್​ ನಟಿ ಸೋನಾಕ್ಷಿ ಸಿನ್ಹಾ ಅವರು ಬಾಂದ್ರಾದಲ್ಲಿ 11 ಕೋಟಿ ರೂಪಾಯಿ ಬೆಲೆ ಬಾಳುವ ಐಶಾರಾಮಿ  ಅಪಾರ್ಟ್‌ಮೆಂಟ್​​​ನಲ್ಲಿ ಫ್ಲ್ಯಾಟ್​​​ವೊಂದನ್ನು ಖರೀದಿಸಿದ್ದಾರೆ. ಮುಂಬೈನಲ್ಲಿರುವ ಈ ಅಪಾರ್ಟ್‌ಮೆಂಟ್ ಹಲವು ವಿಶೇಷತೆಗಳೊಂದಿಗೆ ಸುದ್ದಿಯಲ್ಲಿದೆ.

ಬಾಂದ್ರಾದ ಐಶಾರಾಮಿ ಅಪಾರ್ಟ್​ಮೆಂಟ್​ನ 26ನೇ ಮಹಡಿಯಲ್ಲಿ ದೊಡ್ಡ ಫ್ಲ್ಯಾಟ್ ಒಂದನ್ನು ಸೊನಾಕ್ಷಿ ಖರೀದಿ ಮಾಡಿದ್ದಾರೆ. ಈ ಫ್ಲ್ಯಾಟ್ ಖರೀದಿಗೆ ಸೊನಾಕ್ಷಿ ಬರೊಬ್ಬರಿ 11 ಕೋಟಿ ರೂಪಾಯಿ ವ್ಯಯಿಸಿದ್ದಾರೆ.

ಲಭ್ಯವಿರುವ ಮಾಹಿತಿಯ ಪ್ರಕಾರ, ಸಿನ್ಹಾ ಅವರು ಬಾಂದ್ರಾದ ಕೆಸಿ ರಸ್ತೆಯಲ್ಲಿರುವ ಪ್ರೀಮಿಯಮ್ ರೆಸೆಡೆನ್ಷಿಯಲ್ ಟವರ್​ ಅಪಾರ್ಟ್​ಮೆಂಟ್ ಸಮುಚ್ಛಯದಲ್ಲಿ 26 ನೇ ಮಹಡಿಯಲ್ಲಿರುವ ಫ್ಲ್ಯಾಟ್ ಕಟ್ಟಡದ ಮೇಲಿನ ಮಹಡಿ – 2,208.77 ಚದರ ಅಡಿ ಕಾರ್ಪೆಟ್ ಪ್ರದೇಶದಲ್ಲಿ ವ್ಯಾಪಿಸಿದೆ.ಈ ಫ್ಲ್ಯಾಟ್​​ನ್ನು 11 ಕೋಟಿ ರೂ.ಗೆ ಖರೀದಿಸಿದ್ದಾರೆ. ನಾಲ್ಕು ಕಾರ್ ಪಾರ್ಕಿಂಗ್ ಸೌಲಭ್ಯಗಳನ್ನು ಸಹ ಒದಗಿಸಲಾಗಿದೆ. ಆಸ್ತಿಯ ನೋಂದಣಿ ಆಗಸ್ಟ್ 2023 ರಲ್ಲಿ ನಡೆಯಿತು. ಈ ಐಷಾರಾಮಿ ಆಸ್ತಿಗಾಗಿ, ಸಿನ್ಹಾ ಅವರು 55 ಲಕ್ಷ ರೂಪಾಯಿ ಸ್ಟ್ಯಾಂಪ್ ಶುಲ್ಕವನ್ನು ಮತ್ತು 30,000 ರೂಪಾಯಿ ನೋಂದಣಿ ಶುಲ್ಕವನ್ನು ಪಾವತಿಸಿದ್ದಾರೆ. ಈ ಫ್ಲ್ಯಾಟ್​​ನ್ನು ವಿಶೇಷವಾಗಿ ಡಿಸೈನ್​ ಮಾಡಿಸಿದ್ದಾರೆ ಎನ್ನಲಾಗಿದೆ.

ಪಿರಮಡ್ ಡೆವೆಲಪರ್ಸ್​ ಮತ್ತು ಅಲ್ಟ್ರಾ ಲೈಫ್​ಸ್ಪೇಸ್ ಸಂಸ್ಥೆ ನಿರ್ಮಾಣ ಮಾಡಿದ್ದು, ಸೊನಾಕ್ಷಿ, ನೇರವಾಗಿ ಡೆವೆಲಪರ್​ಗಳಿಂದಲೇ ಪ್ಲ್ಯಾಟ್ ಅನ್ನು ಖರೀದಿಸಿ ಒಪ್ಪಂದಕ್ಕ ಸಹಿ ಹಾಕಿದ್ದಾರೆ ಎನ್ನಲಾಗಿದೆ.  ಈ ಹಿಂದೆ 2020ರ ಮಾರ್ಚ್ ತಿಂಗಳಲ್ಲಿ ಇದೇ ಅಪಾರ್ಟ್​ಮೆಂಟ್​ನಲ್ಲಿ 4632 ಚದರ ಅಡಿಯ ಫ್ಲ್ಯಾಟ್ ಒಂದನ್ನು ಖರೀದಿ ಮಾಡಿದ್ದರು. ಈ ಫ್ಲ್ಯಾಟ್​ 16ನೇ ಮಹಡಿಯಲ್ಲಿದೆ. ಈ ಫ್ಲ್ಯಾಟ್​ಗೆ ಆಗ 14 ಕೋಟಿ ರೂಪಾಯಿಗಳನ್ನು ಸೊನಾಕ್ಷಿ ಸಿನ್ಹ ವ್ಯಯಿಸಿದ್ದರು.

ಬಾಲಿವುಡ್​ನ ಹಲವು ನಟ-ನಟಿಯರು ರಿಯಲ್ ಎಸ್ಟೇಟ್​ ಮೇಲೆ ಬಂಡವಾಳ ಹೂಡುತ್ತಿದ್ದಾರೆ. ಅಮಿತಾಬ್ ಬಚ್ಚನ್, ಸಾರಾ ಅಲಿ ಖಾನ್, ಕಿಯಾರಾ ಅಡ್ವಾಣಿ ಅವರುಗಳ ಬಳಿಕ ಈಗ ಭಾರಿ ಮೊತ್ತ ತೆತ್ತು ಮುಂಬೈನಲ್ಲಿ ಫ್ಲ್ಯಾಟ್ ಖರೀದಿಸಿದ್ದಾರೆ.
ಫ್ಲ್ಯಾಟ್​​​ ಕೊಡಿಸುವುದಾಗಿ ವಂಚನೆ; ಇಡಿ ವಿಚಾರಣೆಗೆ ಹಾಜರಾದ ನಟಿ, ಸಂಸದೆ ನುಸ್ರತ್ ಜಹಾನ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 9 =
Remember me
