ಮುಂಬೈ:ತೊಂಬತ್ತರ ದಶಕದಲ್ಲಿ ಟಾಪ್​ ನಟಿಯರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಸೋನಾಲಿ ಬೇಂದ್ರೆ ಅಪ್ರತಿಮ ಸೌಂದರ್ಯ ಹಾಗೂ ನಟನಾ ಕೌಶಲ್ಯವಿದ್ದರೂ ಬೆರಳಣಿಕೆ ಚಿತ್ರದಲ್ಲಷ್ಟೇ ಕಾಣಿಸಿಕೊಂಡಿದ್ದಾರೆ. ತಾವು ಬಹುಬೇಡಿಕೆ ನಟಿಯಾಗಿದ್ದರು, ಚಿತ್ರಗಳ ಸಂಖ್ಯೆ ಕಡಿಮೆ ಹೇಗಾಯಿತು ಎಂಬುದನ್ನು ಈಗ ಬಹಿರಂಗಪಡಿಸಿದ್ದಾರೆ.
ಬಾಲಿವುಡ್​ನಲ್ಲಿ ತಮಗೇಕೆ ದೊಡ್ಡ ಹೆಸರು ಮಾಡಲು ಸಾಧ್ಯವಾಗಲಿಲ್ಲ, ಅಲ್ಲದೇ ಬಾಲಿವುಡ್​ನಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸಲು ಸಾಧ್ಯವಾಗಲಿಲ್ಲ ಎಂಬ ಬಗ್ಗೆಯೂ ಹೇಳಿರುವ ನಟಿ ಸೋನಾಲಿ, ಬಾಲಿವುಡ್​ನ ಕರಾಳತೆಯ ಬಗ್ಗೆ ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ.
ಬಾಲಿವುಡ್​ಗೆ ಭೂಗತ ಜಗತ್ತಿನ ನಂಟಿತ್ತು, ಎಂಬ ವಿಷಯವನ್ನು ಧೈರ್ಯವಾಗಿಯೇ ಹೇಳಿದ್ದಾರೆ. ಈ ಹಿಂದೆ ಬಾಲಿವುಡ್​ನ ಬಗ್ಗೆ ಟೀಕಿಸುತ್ತಿದ್ದ ಕಂಗನಾ ನಂತರ ಇದೀಗ ನಟಿ ಸೋನಾಲಿ ಬೇಂದ್ರೆ ಕೂಡ ಬಾಲಿವುಡ್​ನಲ್ಲಿ ಒಳರಾಜಕೀಯಗಳು ಯಾವ ರೀತಿ ಇತ್ತು ಎಂಬುದನ್ನು ತಿಳಿಸಿದ್ದಾರೆ.
90 ರದಶಕದಲ್ಲಿ ಸಾಕಷ್ಟು ಸಿನಿಮಾಗಳ ಅವಕಾಶವಿತ್ತು, ಆ ಸಮಯದಲ್ಲಿ ಬಾಲಿವುಡ್ ಮೇಲಿದ್ದ ಭೂಗತ ಲೋಕದ ಪ್ರಭಾವದಿಂದ ಹೆಚ್ಚು ಅವಕಾಶಗಳು ಸಿಗಲಿಲ್ಲ, ಸಿಕ್ಕ ಅವಕಾಶಗಳು ಬೇರೆಯವರ ಪಾಲಾದವು ಎಂದು ನಟಿ ಸೋನಾಲಿ ಹೇಳಿದ್ದಾರೆ. ಕೆಟ್ಟ ಸಮಯದಲ್ಲಿ ತಮ್ಮ ತಮ್ಮ ಪತಿ ನಿರ್ಮಾಪಕ ಗೋಲ್ಡಿ ಬೇಲ್​ ಸಹಾಯ ಮಾಡಿದರು ಆದ್ದರಿಂದ ಇಂದಿನವರೆಗೂ ಹೀಗೆಯೇ ಇರಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.
ಅಪರಾಧಿ ಹಿನ್ನೆಲೆಯುಳ್ಳವರು ಹಣ ಹೂಡಿದ ಸಿನಿಮಾಗಳಲ್ಲಿ ನಟಿಸುವುದರಿಂದ ನಾನು ಹಿಂದೆ ಸರಿದೆ. ಆ ಸಮಯದಲ್ಲಿ ನನ್ನ ಬಾಯ್​ಫ್ರೆಂಡ್​ ಆಗಿದ್ದ ನನ್ನ ಪತಿ ಆ ವಿಷಯದಲ್ಲಿ ಸಹಾಯ ಮಾಡಿದರು. ನಾನು ಒಂದೇ ಪಾತ್ರಕ್ಕೆ ಫಿಕ್ಸ್​ ಆಗಿರುತ್ತಿದ್ದೆ, ನಂತರ ಯಾರದ್ದೋ ಒತ್ತಾಯಕ್ಕೆ ಮಣಿದು ಆ ಪಾತ್ರವನ್ನೂ ನನ್ನಿಂದ ಪಡೆದು ಬೇರೆಯವರಿಗೆ ನೀಡಿದ್ದೂ ಇದೆ. ಆ ವೇಳೆ ನಿರ್ದೇಶಕರೋ, ಸಹ ನಟರು ಕ್ಷಮೆ ಕೇಳುವುದು ನಾನು ಪರವಾಗಿಲ್ಲ ಎನ್ನುವುದು ಸಾಮಾನ್ಯವಾಗಿತ್ತು. ಇದೇ ಕಾರಣದಿಂದ ಹೆಚ್ಚು ಸಿನಿಮಾಗಳಲ್ಲಿ ನಟಿಸಲು ಆಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 + one =
Remember me
