ಮುಂಬೈ:ತನ್ನ ಕಂಪೆನಿಯ ಉತ್ಪನ್ನವನ್ನು ವಿಭಿನ್ನ ಜಾಹೀತಾತು ಮೂಲಕ ಪ್ರಚಾರ ಮಾಡಲು ಹೋದ ಮುಂಬೈ ಮೂಲದ ಸ್ಟೋರಿಯಾ ಪುಡ್ಸ್​ ಆ್ಯಂಡ್ ಬ್ರಿವರೇಜ್ (ಪಾನೀಯ)​ ಸಂಸ್ಥೆ ಎಡವಟ್ಟು ಮಾಡಿಕೊಂಡಿದೆ. ಈ ಕಂಪನಿಯ ವಿವಾದಾತ್ಮಕ ಜಾಹೀರಾತೊಂದರಲ್ಲಿ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಅಣುಕಿಸಲಾಗಿದೆ.
ಈ ಕುರಿತು ಮುಂಬೈನ ಅಂದೇರಿಯಲ್ಲಿರುವ ಸ್ಟೋರಿಯಾ ಕಚೇರಿಗೆ ನುಗ್ಗಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.
#WATCHCongress workers held a protest today at the#Mumbaioffice of Storia Foods over the company's recent advertisement allegedly mocking Congress leaders Sonia Gandhi and Rahul Gandhi
(Video source: Mobile footage)pic.twitter.com/LOi48quAD1
— ANI (@ANI)April 27, 2021

ಜಾಹೀರಾತಿನಲ್ಲಿ ಏನಿದೆ?: ವಿವಾದಾತ್ಮಕ 45 ಸೆಕೆಂಡ್​ನ ವಿಡಿಯೋ ಜಾಹೀರಾತಿನಲ್ಲಿ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರನ್ನು ಅಣುಕಿಸಲಾಗಿದೆ. ಮಿಲ್ಕ್ ಶೇಕ್​ವೊಂದರ ಬಗ್ಗೆ ವಿಷಯ ಪ್ರಸ್ತಾಪಿಸಲಾಗಿದೆ. ನನಗೆ ಹಸಿವಾಗಿದೆ ಏನೂ ಇಲ್ಲವಾ ಎಂದು ಸೋನಿಯಾ ಗಾಂಧಿ ಹೋಲುವ ನಟಿ ಪ್ರಶ್ನಿಸುತ್ತಾಳೆ. ಆಗ ರಾಹುಲ್ ಗಾಂಧಿ ಅವರು ಎಲ್ಲಾ ಖತಂ ಖತಂ ಎಂದು ಹೇಳಿ, ಹಸುವಿನಿಂದ ಹಾಲು ಕರೆದು ತರುತ್ತೇನೆ ಎನ್ನುತ್ತಾರೆ. ಇದನ್ನು ರಾಹುಲ್ ಗಾಂಧಿ ಆಂಗೀಕ ಅಭಿನಯದಲ್ಲಿ ನಟ ಹೇಳುತ್ತಾನೆ.

ಕಳೆದ ನಾಲ್ಕು ದಿನಗಳ ಹಿಂದೆ ಯೂಟ್ಯೂಬ್​ನಲ್ಲಿ ಈ ವಿಡಿಯೋ ಬಿಡುಗಡೆಯಾಗಿದೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಸ್ಟೋರಿಯಾ ಕಂಪೆನಿ ಹೇಳಿಕೆಗಳನ್ನು ಬಿಡುಗಡೆ ಮಾಡಿಲ್ಲ.
ಹನುಮ ಜಯಂತಿ: ಕೋವಿಡ್​ ವಿಘ್ನ ಪರಿಹಾರಿಕ್ಕೆ ಹನುಮಾನ್ ಚಾಲೀಸ ಪಠಿಸಲು ವೆಂಕಟೇಶ್​ ಪ್ರಸಾದ್ ಸಲಹೆ​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 7 =
Remember me
