ಹುಬ್ಬಳ್ಳಿ:ರಾಜ್ಯ ವಿಧಾನಸಭೆ ಚುನಾವಣೆಯ ಕಾವು ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಹೆಚ್ಚಾಗುತ್ತಿದ್ದು ಕಾಂಗ್ರೆಸ್​ ಹಾಗೂ ಬಿಜೆಪಿ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿವೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯಕ್ಕೆ ಕರೆಸಿ ಸರಣಿ ರೋಡ್​ ಶೋ ಹಾಗೂ ಸಮಾವೇಶಗಳನ್ನು ನಡೆಸುತ್ತಿದ್ದು ಬಿಜೆಪಿಯವರಿಗೆ ಟಕ್ಕರ್​ ಕೊಡಲೆಂದು ಕಾಂಗ್ರೆಸ್​ನವರು ತಮ್ಮ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಕರೆಸಿದ್ದಾರೆ.
ಇನ್ನು ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಸೋನಿಯಾ ಗಾಂಧಿ ಬಿಜೆಪಿ ವಿರುದ್ಧ ಗುಡುಗಿದ್ದು ಸರಣಿ ಆರೋಪಗಳನ್ನು ಮಾಡಿದ್ದಾರೆ.
ರಾಜ್ಯದ ಭವಿಷ್ಯ ಇನ್ನುಮುಂದೆ ಬದಲಾಗಲಿದೆ ಎಂಬ ವಿಶ್ವಾಸವಿದೆ ಕರ್ನಾಟಕದ ಜನರು ವಿವಿಧ ಕ್ಷೇತ್ರಗಳಲ್ಲಿ ದೇಶದ ಹೆಸರನ್ನು ಬೆಳಗಿಸಿದ್ದೀರಿ.
ಇಂದಿರಾ ಗಾಂಧಿಯವರು ರಾಜಕೀಯ ಜೀವನದಲ್ಲಿ ಹೋರಾಡುತ್ತಿದ್ದಾಗ ಚಿಕ್ಕಮಗಳೂರು ಜನರು ಕೈಹಿಡಿದಿದ್ದರು. 24 ವರ್ಷಗಳ ಹಿಂದೆ ನನಗೂ ಬಳ್ಳಾರಿ ಜನರು ಬೆಂಬಲಿಸಿದ್ದರು ಎಂದು ಸ್ಮರಿಸಿದ್ದರು.
ದ್ವೇಷ ಹರಡುವವರ ವಿರುದ್ಧ ಭಾರತ್ ಜೋಡೋ ಯಾತ್ರೆ ಮಾಡಲಾಗಿತ್ತು. ಕೇಂದ್ರ ಸರ್ಕಾರದ ದ್ವೇಷದ ರಾಜಕಾರಣ ತೊಲಗಿಸುವವರೆಗೆ ಅಭಿವೃದ್ಧಿ ಸಾಧ್ಯವಿಲ್ಲ. ಬಿಜೆಪಿಯವರು ದರೋಡೆಯನ್ನೇ ದಂಧೆಯಾಗಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
40 ಪರ್ಸೆಂಟ್ ಸರ್ಕಾರ ಜನರನ್ನು ಲೂಟಿ ಮಾಡುತ್ತಿದೆ ಸರ್ಕಾರಕ್ಕೆ ಸೊಕ್ಕು ಬಂದಿದ್ದು ಜನರ ಪ್ರಶ್ನೆಗಳಿಗೆ ಉತ್ತರಿಸಿಲ್ಲ. ಸಂವಿಧಾನಾತ್ಮಕ ಸಂಸ್ಥೆಗಳನ್ನು ತಮ್ಮ ಜೇಬಲ್ಲಿವೆ ಎಂದು ಭಾವಿಸುತ್ತಾರೆ ಪ್ರಜಾಪ್ರಭುತ್ವ ಹೀಗೆ ನಡೆಯುತ್ತಾ‌‌ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ನಾಳೆಯೂ ಪ್ರಧಾನಿ ರೋಡ್​ ಶೋ; ಟ್ವೀಟ್​ ಮಾಡಿ ಕಿಡಿಕಾರಿದ ಸಿದ್ದರಾಮಯ್ಯ
ಇವರು ಧಮ್ಕಿ ಹಾಕುತ್ತಾರೆ, ಬಿಜೆಪಿ ಸೋತರೆ ಜಗಳವಾಗುತ್ತೆ ಅಂತಾರೆ ಮೋದಿ ಆಶೀರ್ವಾದ ಸಿಗಲ್ಲಾ ಅಂತಾರೆ. ಕರ್ನಾಟಕದ ಜನರನ್ನು ಇಷ್ಟೊಂದು ಕೇವಲವಾಗಿ ಭಾವಿಸಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದ ಜನರು ಯಾರದ್ದೋ ಆಶಿರ್ವಾದ ಬಯಸಲ್ಲಾ ಇಲ್ಲಿನ ಜನರಿಗೆ ತಮ್ಮ ಶಕ್ತಿ, ಪರಿಶ್ರಮದ ಮೇಲೆ ವಿಶ್ವಾಸವಿದೆ. ಕರ್ನಾಟಕದ ಜನರು ಯಾರಿಗೂ ಹೆದರಲ್ಲಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ವಿರುದ್ಧ ಗುಡುಗಿದ್ದಾರೆ.
ಕರ್ನಾಟಕ ಬಸವೇಶ್ವರರ ಪುಣ್ಯ ಭೂಮಿ ಎಲ್ಲರಿಗೂ ಸಮಾನತೆಯ ಸಂದೇಶ ಸಾರಿದ್ದರು ಮಹಾನ್ ಕವಿ ಕುವೆಂಪು ಅವರ ಜನ್ಮ ಭೂಮಿ, ಅವರ ಭಾವನೆಯನ್ನು ಪ್ರತಿನಿತ್ಯ ಬಿಜೆಪಿ ಕದಡುತ್ತಿದೆ.
ನಿಮ್ಮ ಸ್ವಾರ್ಥಕ್ಕಾಗಿ ಕರ್ನಾಟಕವನ್ನು ಬಲಿ ಕೊಡಬೇಡಿ ಲೂಟಿ, ಕಮೀಷನ್ ಮುಕ್ತವಾದ ಸರ್ಕಾರಕ್ಕಾಗಿ ಕಾಂಗ್ರೆಸ್ ಮೇಲೆ ಭರವಸೆ ಇಡಿ. ರಾಜಸ್ಥಾನ, ಹಿಮಾಚಲ, ಛತ್ತೀಸಘಡದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಎಲ್ಲಾ ಭರವಸೆ ಈಡೇರಿಸಿದೆ ಎಂದು ಹೇಳಿದ್ದಾರೆ.
ಯಾವುದೇ ಸನ್ನಿವೇಶದಲ್ಲೂ ನಿಮ್ಮ ವಿಶ್ವಾಸವನ್ನು ಕಾಂಗ್ರೆಸ್​ ಉಳಿಸಿಕೊಳ್ಳಲಿದೆ. ಎಲ್ಲಾ ಭಾಗ್ಯಗಳನ್ನು ಈಡೇರಿಸುತ್ತೇವೆ. ಬಿಜೆಪಿಯಿಂದ ಕರ್ನಾಟಕದ ಲೂಟಿ ತಡೆಯಲು ಕಾಂಗ್ರೆಸ್‌ನ ಅಭ್ಯರ್ಥಿಗಳನ್ನು ಗೆಲ್ಲಿಸಿ ಪ್ರಗತಿಯ ಗ್ಯಾರಂಟಿ ಕೊಡುವ ಸರ್ಕಾರ ತರಲು ಆಶೀರ್ವದಿಸಿ ಎಂದು ವಿನಂತಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
