ನವದೆಹಲಿ:ಮಹಿಳಾ ಮೀಸಲಾತಿ ಮಸೂದೆ ಕುರಿತು ಆಡಳಿತ ಹಾಗೂ ವಿಪಕ್ಷಗಳ ಸದಸ್ಯರ ಗದ್ದಲದ ನಡುವೆಯೇ ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ ಅವರು 2012ರಲ್ಲಿ ಸಮಾಜವಾದಿ ಪಕ್ಷದ ಸಂಸದನ ಶರ್ಟ್​ ಕಾಲರ್​ ಹಿಡಿಯಲು ಯತ್ನಿಸಿದ್ದರು ಎಂದು ಬಿಜೆಪಿ ಸಂಸದ ನಿಶಿಕಾಂತ್​ ದುಬೆ ಆರೋಪಿಸಿದ್ದಾರೆ.
ಜಾರ್ಖಂಡ್​ನ ಗೊಡ್ಡಾ ಲೋಕಸಭಾ ಕ್ಷೇತ್ರದ ಸಂಸದ ನಿಶಿಕಾಂತ್​ ದುಬೆ ಅವರ ಹೇಳಿಕೆಯನ್ನು ಖಂಡಿಸಿ ವಿಪಕ್ಷಗಳ ಸದಸ್ಯರ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರು. ದುಬೆ ಅವರು ಈ ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದರು. ಈ ವೇಳೆ ಮದ್ಯಪ್ರವೇಶಿಸಿದ ಗೃಹ ಸಚಿವ ಅಮಿತ್​ ಷಾ ಪುರುಷರು ಏಕೆ ಮಹಿಳೆಯರ ಕುರಿತಾದ ಸಮಸ್ಯೆಗಳನ್ನು ಪ್ರಶ್ನಿಸಬಾರದು ಎಂದಿದ್ದಾರೆ.
2012ರಲ್ಲಿ ಲೋಕಸಭೆಯಲ್ಲಿ ಅಂದಿನ ದಿನ ಸಚಿವರಾಗಿದ್ದ ವಿ. ನಾರಾಯಣಸ್ವಾಮಿ ಅವರು ಮಸೂದೆ ಒಂದನ್ನು ಮಂಡಿಸುತ್ತಿದ್ದರು. ಈ ವೇಳೆ ಸಮಾಜವಾದಿ ಪಕ್ಷದ ಸಂಸದ ಯಶ್​ವೀರ್​ ಸಿಂಗ್​ ಅವರು ನಾರಾಯಣಸ್ವಾಮಿ ಅವರ ಕೈಯಲ್ಲಿದ್ದ ಹಾಳೆಗಳನ್ನು ಕಸಿದು ಎಸೆಯಲು ಯತ್ನಿಸಿದ್ದರು. ಈ ವೇಳೆ ಮದ್ಯಪ್ರವೇಶಿಸಿದ ಸೋನಿಯಾ ಗಾಂಧಿ ಅವರು ಸಂಸದನ ಶರ್ಟ್ ಕಾಲರ್​ ಹಿಡಿಯಲು ಯತ್ನಿಸಿದ್ದರು.
ಇದನ್ನೂ ಓದಿ:ಸಂಕಷ್ಟ ಸೂತ್ರ ಇಲ್ಲವೆಂದ ಮೇಲೆ ತಮಿಳುನಾಡಿಗೆ ಯಾವ ಆಧಾರದ ಮೇಲೆ ನೀರು ಬಿಟ್ಟರು: ಮಾಜಿ ಸಿಎಂ ಎಚ್​ಡಿಕೆ
ಕೂಡಲೇ ಮದ್ಯಪ್ರವೇಶಸಿದ ನಾವು (ಬಿಜೆಪಿ ಸಂಸದರು) ಯಶ್​ವೀರ್​ ಸಿಂಗ್​ ಅವರನ್ನು ರಕ್ಷಿಸಿದ್ದೆವು. ನಾನು ಸೋನಿಯಾ ಅವರಿಗೆ ನೀವು ಡಿಕ್ಟೆಟರ್ ಅಥವಾ ರಾಣಿ​ ಅಲ್ಲ ಈ ರೀತಿ ನಡೆದುಕೊಳ್ಳುವುದಕ್ಕೆ ಎಂದು ಹೇಳಿದ್ದೆ. ಸಮಾಜವಾದಿ ಪಕ್ಷದ ಹಿರಿಯ ನಾಯಕ ಮುಲಾಯಂ ಸಿಂಗ್​ ಸಹ ಸೋನಿಯಾ ಗಾಂಧಿ ಅವರ ನಡೆಯನ್ನು ಖಂಡಿಸಿದ್ದರು. ಈಗ ನೋಡಿದರೆ ಇಂಡಿಯಾ ಎಂಬ ಮೈತ್ರಿಕೂಟದಲ್ಲಿ ಅವರ ಜೊತೆ ಕೈ ಜೋಡಿಸಿರುವುದು ಯಾವ ರೀತಿಯ ನಡೆ ಎಂದು ಸದನದಲ್ಲಿ ಪ್ರಶ್ನಿಸಿದ್ದಾರೆ.
ಇತ್ತ ಸಂಸದ ನಿಶಿಕಾಂತ್​ ದುಬೆ ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಈ ಕೂಡಲೇ ಬಿಜೆಪಿಯ ಮಹಿಳಾ ಸಂಸದರೊಬ್ಬರು ಇದರ ಉಸ್ತುವಾರಿಯನ್ನು ಹೊರಬೇಕು ಎಂದು ಆಗ್ರಹಿಸಿ ಆಡಳಿತ ಪಕ್ಷದ ವಿರುದ್ಧ ಧಿಕ್ಕಾರ ಕೂಗಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
