ನವದೆಹಲಿ:ಮುಂದಿನ ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಈಗಾಗಲೇ ರಾಜಕೀಯ ಪಕ್ಷಗಳು ಸಿದ್ದತೆ ಆರಂಭಿಸಿದ್ದು, ಹೊಸಬರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಹಿರಿಯರು ಕಣದಿಂದ ಹಿಂದೆ ಸರಿಯುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ ತಮ್ಮ ಪುತ್ರಿ ಪ್ರಿಯಾಂಕಗೆ ದಾರಿ ಮಾಡಿಕೊಡುವ ನಿಟ್ಟಿನಲ್ಲಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಫರ್ಧಿಸದಿರಲು ನಿರ್ಧರಿಸಿದ್ದಾರೆ.
ರಾಜಸ್ಥಾನದಿಂದ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿರುವ ಸೋನಿಯಾ ಈ ಒಂದು ಕಾರಣದಿಂದಾಗಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಫರ್ಧಿಸದಿರಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಇದಲ್ಲದೆ ಅವರು ರಾಯ್​ಬರೇಲಿ ಕ್ಷೇತ್ರದ ಮತದಾರರನ್ನು ಉದ್ಧೇಶಿಸಿ ಭಾವನಾತ್ಮಕ ಪತ್ರ ಒಂದನ್ನು ಬರೆದಿದ್ದಾರೆ.
ನಮ್ಮ ಸಂಬಂಧವು ತೀರಾ ಹಳೆಯದಾಗಿದೆ. ನನ್ನ ಅತ್ತೆಯಿಂದ ನಾನು ಇದನ್ನು ಅದೃಷ್ಟವಾಗಿ ಪಡೆದಿದ್ದೇನೆ. ರಾಯ್​​ಬರೇಲಿಯೊಂದಿಗೆ ನಮ್ಮ ಕುಟುಂಬದ ಸಂಬಂಧಗಳು ತುಂಬಾ ಆಳವಾಗಿವೆ. ಸ್ವಾತಂತ್ರ್ಯ ನಂತರ ನಡೆದ ಮೊದಲ ಲೋಕಸಭೆ ಚುನಾವಣೆಯಲ್ಲಿ ನನ್ನ ಮಾವ ಫಿರೋಜ್ ಗಾಂಧಿ ಅವರನ್ನು ಇಲ್ಲಿಂದ ಗೆಲ್ಲಿಸಿ ದೆಹಲಿಗೆ ಕಳುಹಿಸಿದ್ದೀರಿ. ಅವರ ನಂತರ ನೀವು ನನ್ನ ಅತ್ತೆ ಇಂದಿರಾಗಾಂಧಿ ಅವರನ್ನು ಗೆಲ್ಲಿಸಿದ್ದೀರಿ. ಅಲ್ಲಿಂದ ಇಲ್ಲಿಯವರೆಗೂ ಬದುಕಿನ ಏರಿಳಿತ, ಕಷ್ಟದ ಹಾದಿಗಳಲ್ಲಿ ಪ್ರೀತಿ, ಉತ್ಸಾಹದಿಂದ ಈ ಸರಣಿ ಮುಂದುವರಿದಿದ್ದು, ನಮ್ಮ ನಂಬಿಕೆ ಗಟ್ಟಿಯಾಗಿದೆ.
CPP चेयरपर्सन श्रीमती सोनिया गांधी जी का रायबरेली की जनता के नाम संदेश-pic.twitter.com/6zlJkWjwvi
ಇದನ್ನೂ ಓದಿ:‘ಕರಿಮಣಿ ಮಾಲೀಕ’ ನೀನಲ್ಲ ಎಂದು ರೀಲ್ಸ್​ ಮಾಡಿದ ಪತ್ನಿ; ಪ್ರಾಣಬಿಟ್ಟ ಪತಿ
ನನ್ನ ಅತ್ತೆಯನ್ನು ಮತ್ತು ನನ್ನ ಜೀವನ ಸಂಗಾತಿಯನ್ನು ಶಾಶ್ವತವಾಗಿ ಕಳೆದುಕೊಂಡ ನಂತರ, ನಾನು ನಿಮ್ಮ ಬಳಿಗೆ ಬಂದೆ ಮತ್ತು ನೀವು ನನಗೆ ನಿಮ್ಮ ತೋಳುಗಳಲ್ಲಿ ನನ್ನನ್ನು ಭದ್ರ ಮಾಡಿದ್ದೀರಿ. ಕಳೆದೆರಡು ಚುನಾವಣೆಗಳಲ್ಲಿ ಕಷ್ಟದ ಸಂದರ್ಭದಲ್ಲೂ ನನ್ನ ಬೆಂಬಲಕ್ಕೆ ನಿಂತಿದ್ದೀರಿ, ಇದನ್ನು ಮರೆಯಲು ಸಾಧ್ಯವೇ ಇಲ್ಲ. ನಾನು ಇಂದು ಏನಾಗಿದ್ದರೂ ನಿಮ್ಮಿಂದಾಗಿ ಎಂದು ಹೇಳಲು ನಾನು ಹೆಮ್ಮೆಪಡುತ್ತೇನೆ ಮತ್ತು ನಾನು ಯಾವಾಗಲೂ ಈ ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ.
ಈಗ ವಯಸ್ಸು ಕಳೆಯುತ್ತಿದ್ದಂತೆ ಆರೋಗ್ಯ ಸಮಸ್ಯೆ ಹೆಚ್ಚುತ್ತಿದೆ, ನಾನು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಈ ನಿರ್ಧಾರದ ನಂತರ ನನಗೆ ನೇರವಾಗಿ ನಿಮ್ಮ ಸೇವೆ ಮಾಡುವ ಅವಕಾಶ ಸಿಗುವುದಿಲ್ಲ, ಆದರೆ ನನ್ನ ಹೃದಯ ಮತ್ತು ಆತ್ಮ ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ. ಇಲ್ಲಿಯವರೆಗೆ ನೀವು ನನ್ನನ್ನು ನೋಡಿಕೊಂಡಂತೆ ನನ್ನ ಕುಟುಂಬವನ್ನು ಪ್ರತಿಯೊಂದು ಕಷ್ಟದಲ್ಲಿಯೂ ನೋಡಿಕೊಳ್ಳುವಿರಿ ಎಂದು ರಾಯ್​ಬರೇಲಿ ಜನತೆಯನ್ನು ಉದ್ದೇಶಿಸಿ ಸೋನಿಯಾ ಗಾಂಧಿ ಭಾವನಾತ್ಮಕ ಪತ್ರ ಬರೆದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 2 =
Remember me
