ನವದೆಹಲಿ:ಮುಂಬರುವ ಲೋಕಸಭಾ ಚುನಾವಣೆ ಅಖಾಡಕ್ಕೆ ಭರ್ಜರಿ ಸಿದ್ಧತೆಯಲ್ಲಿ ತೊಡಗಿಕೊಂಡಿರುವ ಕಾಂಗ್ರೆಸ್​, ಇಂದು (ಮಾರ್ಚ್​ 12) 43 ಅಭ್ಯರ್ಥಿಗಳನ್ನು ಒಳಗೊಂಡ ತನ್ನ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೂವರು ಮಾಜಿ ಸಿಎಂ ಪುತ್ರರಿಗೆ ಸ್ಥಾನ ನೀಡಲಾಗಿದೆ.
ಪಟ್ಟಿಯಲ್ಲಿ ಕಮಲ್​ ನಾಥ್​ ಮತ್ತು ಅಶೋಕ್​ ಗೆಹ್ಲೋಟ್​ ಒಳಗೊಂಡಂತೆ ಪಕ್ಷದ ಹಿರಿಯ ನಾಯಕರ ಮಕ್ಕಳಿಗೂ ಸ್ಥಾನ ನೀಡಲಾಗಿದೆ. ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್​ ನಾಥ್​ ಪುತ್ರ ನಕುಲ್​ ನಾಥ್​ಗೆ ಮಧ್ಯಪ್ರದೇಶದ ಚಿಂದ್ವಾರ ಲೋಕಸಭಾ ಕ್ಷೇತ್ರದ ಟಿಕೆಟ್​ ನೀಡಲಾಗಿದೆ. ಇವರು ಕ್ಷೇತ್ರದ ಹಾಲಿ ಸಂಸದರು ಸಹ ಆಗಿದ್ದಾರೆ.
ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಅವರ ಪುತ್ರ ವೈಭವ್​ ಗೆಹ್ಲೋಟ್​ಗೆ ರಾಜಸ್ಥಾನದ ಜಲೋರ್​ ಕ್ಷೇತ್ರದ ಟಿಕೆಟ್​ ನೀಡಲಾಗಿದೆ. ಎರಡನೇ ಪಟ್ಟಿಯಲ್ಲಿ ಕರ್ನಾಟಕದ ಯಾವೊಬ್ಬ ಅಭ್ಯರ್ಥಿಯ ಹೆಸರೂ ಕೂಡ ಇಲ್ಲ. ಅಸ್ಸಾಂ, ಗುಜರಾತ್​, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಾಖಂಡ ಹಾಗೂ ದಮನ್​ ಮತ್ತು ದಿಯು ಪ್ರದೇಶಗಳ ಕೆಲವು ಕ್ಷೇತ್ರಗಳನ್ನು ಮಾತ್ರ ಪರಿಗಣಿಸಲಾಗಿದೆ.
ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರ ಪುತ್ರ ಗೌರವ್ ಗೊಗೊಯ್ ಅವರನ್ನು ಜೋರ್ಹತ್​ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಗೊಗೊಯ್ ಅವರು ಕಲಿಯಾಬೋರ್ ಕ್ಷೇತ್ರದ ಹಾಲಿ ಸಂಸದರು ಆಗಿದ್ದಾರೆ.
ಕಾಂಗ್ರೆಸ್‌ನ ಎರಡನೇ ಪಟ್ಟಿಯಲ್ಲಿ ಅಸ್ಸಾಂನಿಂದ 12, ಗುಜರಾತ್‌ನಿಂದ 7, ಮಧ್ಯಪ್ರದೇಶದಿಂದ 10, ರಾಜಸ್ಥಾನದಿಂದ 10 ಮತ್ತು ದಮನ್ ಮತ್ತು ದಿಯುನಿಂದ 1 ಅಭ್ಯರ್ಥಿಗಳು ಇದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪ್ರಕಾರ, ಪಟ್ಟಿಯಲ್ಲಿ ಶೇ.76.7ರಷ್ಟು ಅಭ್ಯರ್ಥಿಗಳು ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ್ದಾರೆ.


ಕಾಂಗ್ರೆಸ್​ ತನ್ನ 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಹಾ ಶಿವರಾತ್ರಿ ಶುಭದಿನದಂದು ಬಿಡುಗಡೆ ಮಾಡಿತು. ಕರ್ನಾಟಕದ 7, ತೆಲಂಗಾಣದ 4, ಛತ್ತೀಸ್​ಗಡದ 6, ಕೇರಳದ 15, ಮೇಘಾಲಯದ 2, ನಾಗಲ್ಯಾಂಡ್, ಸಕ್ಕಿಂ​ ಹಾಗೂ ತ್ರಿಪುರದ ತಲಾ ಒಂದು ಕ್ಷೇತ್ರಕ್ಕೆ ಅಭ್ಯರ್ಥಿಯನ್ನ ಘೋಷಿಸಿದೆ. ಈ ಮೂಲಕ ಒಟ್ಟು 39 ಅಭ್ಯರ್ಥಿಗಳ ಪಟ್ಟಿಯನ್ನು ಬಿಡಗಡೆ ಮಾಡಿದೆ.
ಕರ್ನಾಟಕದ 7 ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರು ಪ್ರಕಟ:* ವಿಜಯಪುರ: ಎಚ್​.ಆರ್.ಅಲಗೂರು* ಶಿವಮೊಗ್ಗ: ಗೀತಾ ಶಿವರಾಜ್​ಕುಮಾರ್​* ಹಾಸನ: ಶ್ರೇಯಸ್​ ಪಾಟೀಲ್* ತುಮಕೂರು: ಎಸ್​ಪಿ ಮುದ್ದಹನುಮೇಗೌಡ* ಬೆಂಗಳೂರು ಗ್ರಾಮಾಂತರ: ಡಿಕೆ ಸುರೇಶ್* ಹಾವೇರಿ: ಆನಂದ್​ಸ್ವಾಮಿ ಗಡ್ಡ ದೇವರಮಠ* ಮಂಡ್ಯ: ವೆಂಕಟರಾಮೇಗೌಡ (ಸ್ಟಾರ್ ಚಂದ್ರು)
ಲೋಕಸಮರಕ್ಕೆ ಕರ್ನಾಟಕ ಸೇರಿದಂತೆ 39 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

ಸುಧಾಕರ್ ಟಿಕೆಟ್​​​ಗಾಗಿ ಕಾಂಗ್ರೆಸ್​ ನಾಯಕರ ಕಾಲಿಗೆ ಬೀಳ್ತಿದ್ದಾನೆ: ಪ್ರದೀಪ್ ಈಶ್ವರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
