ಹೈದರಾಬಾದ್​:ಎಂಟನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಇಂದು ಭಾರತದಾದ್ಯಂತ ಮಾತ್ರವಲ್ಲದೆ ವಿಶ್ವದ ಹಲವೆಡೆ ವಿಶೇಷವಾಗಿ ಆಚರಿಸಲಾಗಿದೆ. ಅಲ್ಲದೆ ಅಪಾರ ಸಂಖ್ಯೆಯ ಯೋಗಪಟುಗಳು ತಮ್ಮ ಯೋಗಪಟುತ್ವವನ್ನು ಪ್ರದರ್ಶಿಸಿದ್ದಾರೆ.
ಮೈಸೂರಿನಲ್ಲಿ ನಡೆದ ಅದ್ಧೂರಿ ಯೋಗ ದಿನಾಚರಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸಿದ್ದು, ಅವರೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯ ಸಂಪುಟದ ಅನೇಕ ಸಚಿವರು, ಶಾಸಕರು ಪಾಲ್ಗೊಂಡಿದ್ದರು. ಅಲ್ಲದೆ ಸುಮಾರು 15 ಸಾವಿರ ಯೋಗಪಟುಗಳನ್ನು ಆಸನಗಳನ್ನು ಪ್ರದರ್ಶಿಸಿದ್ದರು.
ಇದನ್ನೂ ಓದಿ:ರಾಷ್ಟ್ರಪತಿ ಅಭ್ಯರ್ಥಿ ಘೋಷಣೆ: ಎನ್​ಡಿಎಯಿಂದ ದ್ರೌಪದಿ, ಯುಪಿಎ ಕಡೆಯಿಂದ ಸಿನ್ಹಾ…
ಆದರೆ ಹೈದರಾಬಾದ್​ನಲ್ಲೊಬ್ಬ ಶೀರ್ಷಾಸನ ಹಾಕಿಯೇ ದಾಖಲೆ ಮಾಡಿದ್ದಾನೆ. ಇಲ್ಲಿನ ಚಾರ್​ಮಿನಾರ್ ಮುಂದೆ ಶೀರ್ಷಾಸನ ಹಾಕಿದ ಈತ 3 ಗಂಟೆ, 33 ನಿಮಿಷ, 3 ಸೆಕೆಂಡುಗಳ ಕಾಲ ತಲೆ ಕೆಳಗಾಗಿಯೇ ಇದ್ದು ದಾಖಲೆ ಮಾಡಿದ್ದಾನೆ. ಯೋಗಪಟು, ಬಿಹಾರ ಮೂಲದ ಸೋನು ಕುಮಾರ್​ ಅವರ ಈ ಸಾಧನೆಯನ್ನು ವಿಶ್ವದಾಖಲೆ ಎನ್ನಲಾಗುತ್ತಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − eight =
Remember me
