ನವದೆಹಲಿ:ಹಲವಾರು ಅಮಾಯಕ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆಗೆ ತಳ್ಳಿ, ಇದೀಗ 12ರ ಬಾಲೆಯ ಕೇಸ್‌ನಲ್ಲಿ ಸಿಕ್ಕುಬಿದ್ದು 24 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಸೋನು ಪಂಜಾಬನ್‌ ಇತಿಹಾಸವೇ ಭಯಾನಕವಾಗಿದೆ.‘ಈಕೆಯ ಅಸಲಿ ಹೆಸರು ಗೀತಾ ಅರೋರಾ. ಹರಿಯಾಣ ಮೂಲದವಳು ಈಕೆ. ದಿನಗೂಲಿ ನೌಕರರಾಗಿದ್ದ ತಂದೆ, ಕೆಲಸ ಹುಡುಕಿಕೊಂಡು ದೆಹಲಿಗೆ ಬಂದಿದ್ದರು. ಕೂಲಿ ಮಾಡುವ ಜತೆಗೆ ಆಟೋ ಚಲಾಯಿಸಿಕೊಂಡು ಜೀವನ ನಡೆಸುತ್ತಿದ್ದರು.
ನೋಡಲು ಸುಂದರಿಯಾಗಿದ್ದ ಗೀತಾ ಅಲಿಯಾಸ್‌ ಸೋನು, 10ನೇ ಕ್ಲಾಸ್‌ ಅಂತೂ ಇಂತೂ ಪಾಸ್‌ ಆಗಿ ನಂತರ ಬ್ಯೂಟಿ ಪಾರ್ಲರ್‌ ಓಪನ್‌ ಮಾಡಿದಳು. ಅಷ್ಟಾಗಿ ವ್ಯವಹಾರ ಏನೂ ಆಗುತ್ತಿರಲಿಲ್ಲ. ಬ್ಯೂಟಿ ಪಾರ್ಲರ್‌ ಹೆಸರಿನಲ್ಲಿ ದೇಹ ವ್ಯಾಪಾರವನ್ನು ಕ್ರಮೇಣ ಕಲಿಯುತ್ತಾ ಹೋದಳು.
ತಿನ್ನಲು ಹೊತ್ತಿನ ಊಟಕ್ಕೆ ಗತಿಯಿಲ್ಲದಿದ್ದ ಗೀತಾ ಯಾವಾಗ ದೇಹ ಮಾರಾಟವನ್ನು ಶುರುವಿಟ್ಟುಕೊಂಡಳೋ ಆಗಲೇ ಹಣ ಹರಿದುಬಂತು. ನೋಡಲು ಸುಂದರಿ ಬೇರೆ… ಕೇಳಬೇಕೆ? ತನ್ನ ದೇಹದ ಸೌಂದರ್ಯವನ್ನೇ ಬಂಡವಾಳ ಮಾಡಿಕೊಂಡಳೀಕೆ.
ಇದನ್ನೂ ಓದಿ:ದೆಹಲಿ ಮಾಂಸದಡ್ಡೆಯ ಕರಾಳತೆ; 12ರ ಬಾಲೆಗೆ ಡ್ರಗ್ಸ್​ ನೀಡಿ ವೇಶ್ಯಾವಾಟಿಕೆ; 6 ವರ್ಷಗಳ ನರಕದ ಬಳಿಕ ಸಿಕ್ತು ನ್ಯಾಯ
ನಂತರ ಶ್ರೀಮಂತ ವ್ಯಕ್ತಿ, ದೊಡ್ಡ ಕ್ರಿಮಿನಲ್‌ ಒಬ್ಬನನ್ನು ಮದುವೆಯಾದಳು. ಆಗ ಈಕೆಗಿನ್ನೂ 17 ವರ್ಷ ವಯಸ್ಸು. ಗಂಡ ರೌಡಿ ಶೀಟರ್‌. ಈತ ಪೊಲೀಸ್ ಎನ್‌ಕೌಂಟರ್‌ನಲ್ಲಿ ಸತ್ತುಹೋದ. ನಂತರ ಇನ್ನೊಬ್ಬ ರೌಡಿ ದೀಪಕ್ ಜತೆ ಮದುವೆಯಾದಳು. ಆನಂತರ ಅವನ ತಮ್ಮದ ಜತೆ ಮದುವೆಯಾಯಿತು… ಅಚ್ಚರಿ ಎಂದರೆ ಯಾರನ್ನೆಲ್ಲಾ ಮದುವೆಯಾಗುತ್ತಿದ್ದಳೋ ಎಲ್ಲರೂ ಎನ್‌ಕೌಂಟರ್‌ನಲ್ಲಿ ಹತ್ಯೆಯಾದರು! ಮೂರೂ ಗಂಡಂದಿರೂ ಎನ್‌ಕೌಂಟರ್‌ನಲ್ಲಿಯೇ ಸತ್ತುಹೋದರು.
ಮೂರು ಮದುವೆ ನಂತರ ಸುಸ್ತಾಗಿ, ತನ್ನ ದಂಧೆಯನ್ನೇ ಮುಂದುವರೆಸುವ ಯೋಚನೆ ಮಾಡಿದಳು ಗೀತಾ. ಅದಾಗಲೇ ಮೂರನೆಯ ಪತಿ ಹೇಮಂತ್‌ನ ಸ್ನೇಹಿತನಾಗಿದ್ದ ಅಶೋಕ್ ಎಂಬಾತನ ಸ್ನೇಹ ಸಂಪಾದಿಸಿದ್ದ ಗೀತಾಳಿಗೆ ದೊಡ್ಡ ಮಟ್ಟದಲ್ಲಿ ಸೆಕ್ಸ್‌ ರಾಕೆಟ್ ನಡೆಸಲು ಐಡಿಯಾ ಕೊಟ್ಟಿದ್ದು ಇವನೇ.ಮದುವೆಯಾದ ಮೂವರಿಂದಲೂ ಸಾಕಷ್ಟು ಆಸ್ತಿ ಸಂಪಾದನೆ ಮಾಡಿದ್ದ ಇವಳು ತನ್ನ ವೈಶ್ಯಾವಾಟಿಕೆಯ ಜಾಲವನ್ನು ವಿಸ್ತರಿಸುತ್ತಾ ಹೋದಳು.
ಈಕೆಯ ವಿರುದ್ಧ ಹಲವಾರು ದೂರುಗಳು ಹೋದ ಹಿನ್ನೆಲೆಯಲ್ಲಿ, ಮಹಾರಾಷ್ಟ್ರ ಕಂಟ್ರೋಲ್ ಆಫ್ ಆರ್ಗನೈಸ್ಡ್‌ ಕ್ರೈಂ ಆಕ್ಟ್‌ 1999 ಅಡಿಯಲ್ಲಿ ದೂರು ದಾಖಲಾಯ್ತು. ಆದರೆ ಗೀತಾ ಮಾತ್ರ ಪೊಲೀಸರ ಕೈಗೆ ಸಿಗಲಿಲ್ಲ. ಬದಲಿಗೆ ತನ್ನ ಜಾಲವನ್ನು ವಿಸ್ತರಿಸುತ್ತಾ ಸಾಗಿ. ಅನೇಕ ದಲ್ಲಾಳಿಗಳನ್ನು ಇಟ್ಟುಕೊಂಡಳು.ಚಿಕ್ಕ ವಯಸ್ಸಿನ ಹುಡುಗಿಯರನ್ನು ಕರೆತರುವುದು ಈ ದಲ್ಲಾಳಿಗಳ ಕೆಲಸವಾಯಿತು. ಮಾಡೆಲಿಂಗ್‌ ಆಸೆ ಹೊತ್ತ ಯುವತಿಯರನ್ನೂ ಟಾರ್ಗೆಟ್‌ ಮಾಡಿಕೊಂಡ ಗೀತಾ, ಅವರನ್ನೂ ಸಪ್ಲೈ ಮಾಡುವುದಕ್ಕೆ ಶುರುಮಾಡಿದಳು. ದೊಡ್ಡದೊಡ್ಡ ಹೋಟೆಲ್‌ಗಳ ‘ದೊಡ್ಡ ಜನರಿಗೆ’ ಹುಡುಗಿಯರ ಸಪ್ಲೈ ಕೂಡ ಇವಳೇ ಮಾಡತೊಡಗಿದಳು.ಇಷ್ಟಾದರೂ ಪೊಲೀಸರಿಗೆ ಯಾವುದೇ ಸುಳಿವು ನೀಡುತ್ತಿರಲಿಲ್ಲ. ಈಕೆ ವಿರುದ್ಧ ಅನೇಕ ಕೊಲೆ ಕೇಸ್‌ಗಳೂ ಇದ್ದರೂ, ಸಾಕ್ಷ್ಯಾಧಾರಗಳು ಇರಲಿಲ್ಲ. ಇದೇ ಮೊದಲ ಬಾರಿಗೆ 12 ವರ್ಷದ ಬಾಲಕಿಯ ಕೇಸ್‌ನಲ್ಲಿ ಸಿಕ್ಕಿಬಿದ್ದಿದ್ದಾಳೆ ಗೀತಾ!
ಸೋನು ಪಂಜಾಬನ್ ಹೆಣ್ಣುಕುಲಕ್ಕೇ ಅವಮಾನವೆಂದಿತು ಕೋರ್ಟ್​​; ಯಾಕೆ ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
