ಮುಂಬೈ:ಆದಾಯ ತೆರಿಗೆ(ಐಟಿ) ಇಲಾಖೆಯ ಪರಿಶೀಲನೆಗೆ ಒಳಗಾಗಿ 20 ಕೋಟಿ ರೂ.ಗಳಿಗೂ ಹೆಚ್ಚು ತೆರಿಗೆ ವಂಚನೆಯ ಆರೋಪ ಎದುರಿಸುತ್ತಿರುವ ನಟ ಸೋನು ಸೂದ್​ ಮೌನ ಮುರಿದಿದ್ದಾರೆ. ಐಟಿ ಅಧಿಕಾರಿಗಳ ಸಮೀಕ್ಷೆ ಮತ್ತು ಹೇಳಿಕೆ ಬಗ್ಗೆ ಇದೀಗ ಟ್ವಿಟರ್​ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
‘ಕಠಿಣ ಮಾರ್ಗದಲ್ಲೂ ಪ್ರಯಾಣ ಸುಲಭವೆನಿಸುತ್ತಿದೆ, ಇದು ಪ್ರತಿ ಹಿಂದೂಸ್ತಾನಿಯ ಶುಭ ಹಾರೈಕೆಗಳ ಪ್ರಭಾವ ಎನಿಸುತ್ತದೆ’ ಎಂದು ಹಿಂದಿಯಲ್ಲಿ ಕಾವ್ಯಮಯವಾಗಿ  ಟ್ವೀಟ್​ ಮಾಡಿರುವ ಸೂದ್​, ಸುದೀರ್ಘ ಸಂದೇಶವೊಂದರಲ್ಲಿ “ನೀವು ಪ್ರತಿ ಬಾರಿ ನಿಮ್ಮ ಕಡೆಯ ಕಥೆ ಹೇಳಬೇಕಿಲ್ಲ, ಸಮಯ ಹೇಳುತ್ತದೆ” ಎಂದು ತಾವು ಸದ್ಯಕ್ಕೆ ಐಟಿ ಆರೋಪಗಳ ಬಗ್ಗೆ ಯಾವುದೇ ಸ್ಪಷ್ಟನೆ ನೀಡುವುದಿಲ್ಲ ಎಂದು ಸೂಚ್ಯವಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ನಟ ಸೋನು ಸೂದ್ ಮನೆಗೆ ಐಟಿ ಅಧಿಕಾರಿಗಳು!
ಭಾರತದ ಜನರ ಸೇವೆಗಾಗಿ ತಮ್ಮನ್ನು ತಾವೇ ಮುಡಿಪಾಗಿಡಬೇಕೆಂದು ಪಣ ತೊಟ್ಟಿರುವುದಾಗಿ ಹೇಳಿರುವ ಸೂದ್​, ಕೋವಿಡ್​ ಸಮಯದಲ್ಲಿ ವಲಸೆ ಕಾರ್ಮಿಕರಿಗೆ ಆಶ್ರಯ ನೀಡುವುದೂ ಸೇರಿದಂತೆ ಹತ್ತುಹಲವು ಜನಸೇವೆಯ ಕಾರ್ಯಗಳಿಂದ ಜನಪ್ರಿಯತೆ ಗಳಿಸಿದ್ದಾರೆ. ಇದೀಗ ಅವರ ಮೇಲೆ ಐಟಿ ಇಲಾಖೆ ಕಣ್ಣು ಬಿದ್ದಿದ್ದು, ಐಟಿ ಅಧಿಕಾರಿಗಳು ಸತತ ಮೂರು ದಿನಗಳ ಕಾಲ ಸೂದ್​ರ ನಿವಾಸ ಮತ್ತು ಇತರ ಸ್ಥಳಗಳ ಸಮೀಕ್ಷೆ ನಡೆಸಿದ್ದರು. 20 ಕೋಟಿ ರೂ.ಗಳ ತೆರಿಗೆ ವಂಚನೆ ಆರೋಪದೊಂದಿಗೆ, ಸೂದ್​ರ ಚಾರಿಟಿ ಫೌಂಡೇಶನ್​ನ ಬ್ಯಾಂಕ್​ ಖಾತೆಯಲ್ಲಿ ಸುಮಾರು 17 ಕೋಟಿ ರೂ. ಹಣ ಸುಮ್ಮನೆ ಕುಳಿತಿದೆ ಎಂದಿದ್ದರು.
“सख्त राहों में भी आसान सफर लगता है,हर हिंदुस्तानी की दुआओं का असर लगता है” 💕pic.twitter.com/0HRhnpf0sY— sonu sood (@SonuSood)September 20, 2021
“सख्त राहों में भी आसान सफर लगता है,हर हिंदुस्तानी की दुआओं का असर लगता है” 💕pic.twitter.com/0HRhnpf0sY
ಇದಕ್ಕೆ ಉತ್ತರವೆಂಬಂತೆ, “ನನ್ನ ಫೌಂಡೇಶನ್​ನಲ್ಲಿರುವ ಪ್ರತಿಯೊಂದು ರೂಪಾಯಿ ಕೂಡ ಒಂದು ಅಮೂಲ್ಯ ಜೀವವನ್ನು ಉಳಿಸಲು ಮತ್ತು ಅಗತ್ಯ ಇರುವವರನ್ನು ತಲುಪಲು ಅದರ ಸರತಿಗಾಗಿ ಕಾಯುತ್ತಿದೆ” ಎಂದು ಸೂದ್​ ಬರೆದಿದ್ದಾರೆ. ಜೊತೆಗೆ, ಐಟಿ ಅಧಿಕಾರಿಗಳ ಪರಿಶೀಲನೆ ಕುರಿತು, “ನಾನು ಕೆಲವು ಅತಿಥಿಗಳನ್ನು ನೋಡಿಕೊಳ್ಳುವುದರಲ್ಲಿ ಬ್ಯುಸಿ ಆಗಿದ್ದೆ. ಆದ್ದರಿಂದ ಕಳೆದ ನಾಲ್ಕು ದಿನ ನಿಮ್ಮ ಸೇವೆಯಲ್ಲಿ ತೊಡಗಲು ಸಾಧ್ಯವಾಗಲಿಲ್ಲ. ಈಗ ಮತ್ತೆ ನಿಮ್ಮ ಸೇವೆಗೆ ಹಾಜರಾಗಿದ್ದೇನೆ. ನನ್ನ ಪ್ರಯಾಣ ಮುಂದುವರಿಯುತ್ತದೆ” ಎಂದಿದ್ದಾರೆ.
ಇದನ್ನೂ ಓದಿ:ನಟ ಸೋನು ಸೂದ್​​ಗೆ ಐಟಿ ಕಂಟಕ: 20 ಕೋಟಿ ರೂ. ತೆರಿಗೆ ವಂಚನೆ ಆರೋಪ
ಐಟಿ ಇಲಾಖೆ ಹೇಳಿಕೆ: ಲೆಕ್ಕ ಹೊಂದಿಲ್ಲದ ಆದಾಯಗಳನ್ನು ಸೂದ್​​ ಬೋಗಸ್​​ ಅನ್​ಸೆಕ್ಯೂರ್ಡ್​ ಲೋನ್​ಗಳ ಹೆಸರಲ್ಲಿ ತೋರಿಸಿ 20 ಕೋಟಿ ರೂ.ಗಿಂತ ಹೆಚ್ಚು ತೆರಿಗೆ ವಂಚಿಸಿದ್ದಾರೆ; ಅವರ ನಾನ್​ಪ್ರಾಫಿಟ್​ ಸಂಸ್ಥೆ, ಸೂದ್​ ಚ್ಯಾರಿಟಿ ಫೌಂಡೇಶನ್​​, ಕಾನೂನುಬಾಹಿರವಾಗಿ ವಿದೇಶೀಯರಿಂದ 2.1 ಕೋಟಿ ರೂ. ಹಣ ಸಂಗ್ರಹಿಸಿದೆ; ಸೂದ್​ ಫೌಂಡೇಶನ್​ ಈವರೆಗೆ 18 ಕೋಟಿ ರೂ.ಗೂ ಹೆಚ್ಚು ದೇಣಿಗೆ ಸಂಗ್ರಹಿಸಿದ್ದರೂ, ಕೇವಲ 1.9 ಕೋಟಿ ರೂ.ಗಳನ್ನು ಮಾತ್ರ ಖರ್ಚು ಮಾಡಿದೆ ಎಂದು ಐಟಿ ಅಧಿಕಾರಿಗಳು ಶನಿವಾರ ಹೇಳಿಕೆ ನೀಡಿದ್ದರು.(ಏಜೆನ್ಸೀಸ್)
“ಪ್ರತಿ ಮನೆಗೂ ಉದ್ಯೋಗ ಇಲ್ಲವೇ ತಿಂಗಳಿಗೆ 5,000 ರೂಪಾಯಿ”
ನೀರು ತುಂಬಿದ್ದ ಅಂಡರ್​ಪಾಸಲ್ಲಿ ಸಿಲುಕಿದ ಕಾರು: ರಜೆಗೆ ಊರಿಗೆ ಹೋಗಿದ್ದ ವೈದ್ಯೆ ದುರ್ಮರಣ
ಕಾಲೇಜುಗಳಿಗೆ ಹಿಂಬಾಗಿಲ ಪ್ರವೇಶಾತಿ ನಿಲ್ಲಬೇಕು: ದೆಹಲಿ ಹೈಕೋರ್ಟ್​


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + seventeen =
Remember me
