ಮುಂಬೈ:ಸಿನಿ ಪರದೆಯ ಮೇಲೆ ವಿಲನ್​ ಆಗಿ ಕಾಣಿಸಿಕೊಂಡು, ನಿಜ ಜೀವನದಲ್ಲಿ ಹೀರೋ ಆದ ಸೋನು ಸೂದ್​ ಇದೀಗ ಹೊಸದೊಂದು ಪ್ರತಿಜ್ಞೆ ಮಾಡಿದ್ದಾರೆ. ಕೆಲಸವಿಲ್ಲದೆ ನಿರುದ್ಯೋಗಿಗಳಾಗಿರುವ ಜನರನ್ನು ಗುರುತಿಸಿ, ಅವರು ಮಾಡುತ್ತಿರುವ ಸಹಾಯಕ್ಕೆ ಜನರು ಕೈ ಮುಗಿದು ನಮಸ್ಕರಿಸಲಾರಂಭಿಸಿದ್ದಾರೆ.
ಕೆಲಸವಿಲ್ಲದವರು ಸ್ವಾವಲಂಭಿಯಾಗಿ ಬದುಕು ಆರಂಭಿಸಬೇಕು ಎನ್ನುವ ಕಾರಣಕ್ಕೆ ಸೋನು ಸೂದ್​ ಇ ರಿಕ್ಷಾಗಳನ್ನು ಖರೀದಿಸಿದ್ದಾರೆ. 100 ಇ ರಿಕ್ಷಾಗಳನ್ನು ಖರೀದಿಸಿ ಅದನ್ನು ಕೆಲಸವಿಲ್ಲದವರಿಗೆ ಕೊಟ್ಟಿದ್ದಾರೆ. ಇಷ್ಟು ದಿನ ಖಾಲಿ ಕುಳಿತಿದ್ದ ಜನರು ಇದೀಗ ಈ ಇ-ಆಟೋರಿಕ್ಷಾಗಳಿಂದ ತಮ್ಮ ಜೀವನವನ್ನು ನಿರ್ಮಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಬದುಕಲ್ಲಿ ಏನೂ ಉಳಿದಿಲ್ಲ ಎಂದುಕೊಂಡಿದ್ದಾಗಿ ಸೋನು ಸೂದ್​ ದೇವರ ರೂಪದಲ್ಲಿ ಬಂದಿದ್ದಾರೆ ಎಂದು ತುಂಬು ಮನಸ್ಸಿನಿಂದ ಧನ್ಯವಾದ ಅರ್ಪಿಸಿದ್ದಾರೆ.
ಇ ರಿಕ್ಷಾಗಳನ್ನು ಪಡೆದ ಜನರ ಕಣ್ಣಲ್ಲಿನ ಸಂತೋಷವನ್ನು ತೋರುವ ಒಂದು ವಿಡಿಯೋವನ್ನು ಸೋನು ಸೂದ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ನನ್ನ ಪ್ರಯಾಣವನ್ನು ವಿಶೇಷವಾಗಿಸಿದೆ ಎಂದು ಹೇಳಿದ್ದಾರೆ.


A post shared by Sonu Sood (@sonu_sood)
ಸಿನಿಮಾಗಳಲ್ಲಿ ವಿಲನ್​ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದ ಸೋನು ಸೂದ್​ ಲಾಕ್​ಡೌನ್​ ಸಮಯದಿಂದ ಹೆಚ್ಚು ಸುದ್ದಿಯಲ್ಲಿದ್ದಾರೆ. ಲಾಕ್​ಡೌನ್​ ಸಮಯದಲ್ಲಿ ದೂರದ ಊರಿಗೆ ನಡೆದು ಹೋಗುತ್ತಿದ್ದ ಜನರಿಗೆ ಅವರು ಮಾಡಿದ ಸಹಾಯ ದೇಶದ ಚಿತ್ರರಂಗವನ್ನು ಬಡಿದೆಬ್ಬಿಸಿತ್ತು. ಸಾವಿರಾರು ಜನರು ಸೂದ್​ ಸಹಾಯದಿಂದಾಗಿ ನಿಟ್ಟುಸಿರು ಬಿಡುವಂತಾಗಿತ್ತು. (ಏಜೆನ್ಸೀಸ್​)
ಮಷಿನ್​ಗೆ ಸಿಕ್ಕಿ ಎರಡು ತುಂಡಾದ ಕೈ! ದೇವರ ರೂಪದಲ್ಲಿ ಬಂದು ಕಾಪಾಡಿದ ವೈದ್ಯರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 14 =
Remember me
