ನವದೆಹಲಿ:ಚಿತ್ರನಟರ ಮಾತು ಬಂದಾಗ ಈಗ ಎಲ್ಲೆಲ್ಲೂ ನಟ ಸೋನು ಸೂದ್ ಅವರದ್ದೇ ಮಾತು. ಏಕೆಂದರೆ ಲಾಕ್​ಡೌನ್​ ಶುರುವಾದಾಗಿನಿಂದ ಅವರು ಲಾಕ್​ಡೌನ್​ ಸಂತ್ರಸ್ತರಿಗೆ ನೀಡಿರುವ ನೆರವು ಅಷ್ಟಿಷ್ಟಲ್ಲ. ಈಗಾಗಲೇ ಸಹಸ್ರಾರು ಮಂದಿಗೆ ನೆರವು ನೀಡುವ ಮೂಲಕ ಸೋನು ಮನೆಮಾತಾಗಿದ್ದಾರೆ.
ಆರಂಭದ ದಿನದಿಂದಲೂ ವಲಸೆ ಕಾರ್ಮಿಕರಿಗೆ ಇವರು ಮಾಡಿರುವ ಸಹಾಯ ಅಪಾರವಾದುದು. ತಮ್ಮದೇ ಹೋಟೆಲ್‌ಗಳಲ್ಲಿ ಉಳಿದುಕೊಳ್ಳಲು ಸಂತ್ರಸ್ತರಿಗೆ ಜಾಗ ನೀಡಿದ್ದಾರೆ. ಅದೆಷ್ಟೋ ಕಾರ್ಮಿಕರಿಗೆ ಅವರವರ ಊರು ತೆರಳಲು ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ. ಜಾರ್ಖಾಂಡ್‌ ಮುಂತಾದ ರಾಜ್ಯಗಳ ವಲಸೆ ಕಾರ್ಮಿಕರಿಗಾಗಿ ಸೋನು ಹಗಲಿರುಳೂ ಶ್ರಮ ವಹಿಸಿ ದುಡಿದಿದ್ದಾರೆ.
ಇದನ್ನೂ ಓದಿ:‘ಭವಿಷ್ಯದ ಅಮಿತಾಭ್​’ಗೆ ಬಿರುದುಗಳ ಮಹಾಪೂರ: ಆತ್ಮಕಥೆ ಬಿಚ್ಚಿಟ್ಟು ಕಣ್ಣೀರಾದ ನಟ ಸೋನು
ವಲಸೆ ಕಾರ್ಮಿಕರಿಗಾಗಿಯೇ ಸಹಾಯವಾಣಿ ಶುರು ಮಾಡುವ ಮೂಲಕ ದಿನದ 24 ಗಂಟೆಯೂ ಅವರ ನೆರವಿಗೆ ಧಾವಿಸುತ್ತಿದ್ದಾರೆ. ಇವರ ಈ ನೆರವಿಗೆ ಪತ್ನಿ, ಮಗಳೂ ಸಾಥ್​ ನೀಡುತ್ತಿದ್ದಾರೆ.
ಇಷ್ಟೆಲ್ಲಾ ದೇಶವಾಸಿಗಳ ಮನ ಗೆದ್ದಿರುವ ಸೋನು ಸೂದ್​ ಅವರಿಗೆ ಈಗ ಪುಟ್ಟಪುಟಾಣಿಯೊಬ್ಬಳು ವಿಡಿಯೋ ಮೂಲಕ ನೆರವು ಕೋರಿದ್ದಾಳೆ. ಈಕೆಯ ಪ್ರಶ್ನೆಗೆ ಸೋನು ಸೂದ್​ ಕಂಗಾಲಾಗಿ ಹೋಗಿದ್ದಾರೆ. ಮಾತ್ರವಲ್ಲದೇ ನೆಟ್ಟಿಗರು ಕೂಡ ಈ ಸವಾಲನ್ನು ಹೇಗೆ ಸ್ವೀಕರಿಸುತ್ತೀಯಾ ಎಂದು ಸೋನು ಅವರ ಕಾಲೆಳೆದಿದ್ದಾರೆ.
ಇದನ್ನೂ ಓದಿ:ಪಾಲಕರನ್ನು ಕರೆದೊಯ್ದರೂ ಶರಣಾಗದ ಉಗ್ರರನ್ನು ಹೊಡೆದುರುಳಿಸಿದ ಸೇನೆ
ಅಷ್ಟಕ್ಕೂ ಈ ಬಾಲಕಿ ಹೇಳಿರುವುದು ಏನೆಂದರೆ, ‘ಸೋನು ಅಂಕಲ್, ನೀವು ಅನೇಕ ಮಂದಿಯನ್ನು ಮನೆಗೆ ಕಳುಹಿಸುತ್ತಿದ್ದೀರಿ ಎಂದು ಕೇಳಿದ್ದೇನಿ. ಹಾಗಾಗಿ ಅಪ್ಪ ಕೇಳುತ್ತಿದ್ದಾರೆ, ಅಮ್ಮನನ್ನು ಅಜ್ಜಿ ಮನೆಗೆ ಕಳುಹಿಸಬೇಕು ಎಂದು. ನೀವು ಅಮ್ಮನನ್ನು ಅಜ್ಜಿಯ ಮನೆಗೆ ಕಳಿಸುತ್ತೀರಾ ಎಂದು ಕೇಳಿದ್ದಾಳೆ!
ಈಕೆಯ ಈ ಭಯಂಕರ ಪ್ರಶ್ನೆಗೆ ಉತ್ತರಿಸಲಾಗದ ಸೋನು, ಇದು ಬಹಳ ಕಷ್ಟದ ಕೆಲಸ. ಪ್ರಯತ್ನಿಸುತ್ತೇನೆ ಎಂದು ತಮಾಷೆಯಾಗಿ ಉತ್ತರಿಸಿದ್ದಾರೆ. ಆದರೆ ಈ ಪುಟಾಣಿಯ ವಿಡಿಯೋ ನೋಡಿದ ನೆಟ್ಟಿಗರು ಮಾತ್ರ ಸಿಕ್ಕಾಪಟ್ಟೆ ಸೋನು ಅವರ ಕಾಲೆಳೆದಿದ್ದಾರೆ. ಸಹಸ್ರಾರು ಮಂದಿಗೆ ನೆರವು ನೀಡಿರುವ ನೀವು, ಈಗ ಈ ಪುಟಾಣಿ ಅಸೆ ಈಡೇರಿಸುತ್ತೀರಾ ಎಂದು ತಮಾಷೆ ಮಾಡಿದ್ದಾರೆ.(ಏಜೆನ್ಸೀಸ್​)
Very Very Urgent Demand@SonuSood,So Kindly Notice And Please Fulfill The Same !!!!pic.twitter.com/xtDGfE3Kkx
— Chintan Desai (@chintandesai)May 30, 2020

ಇಂಥವರೂ ಇದ್ದಾರೆ: ಲಾಕ್​ಡೌನ್​ ಸಂತ್ರಸ್ತರ ನೆರವಿಗಾಗಿ ಚಿನ್ನ ಮಾರಿದ ದಂಪತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + twenty =
Remember me
