ಡೆಹ್ರಡೂನ್​:ಈ ತಿಂಗಳ ಮೊದಲ ವಾರದಲ್ಲಿ ಉತ್ತರಾಖಂಡದಲ್ಲಿ ನಡೆದ ಹಿಮ ಪ್ರವಾಹದಿಂದಾಗಿ ಅನೇಕರು ಪ್ರಾಣ ಬಿಟ್ಟಿದ್ದರು. ಲಾಕ್​ಡೌನ್​ ಸಮಯದಲ್ಲಿ ಸಂಕಷ್ಟದಲ್ಲಿದ್ದ ಜನರಿಗೆ ಸಹಾಯ ಮಾಡಿ ದೇವರೆನಿಸಿಕೊಂಡ ನಟ ಸೋನು ಸೂದ್​ ಇದೀಗ ಹಿಮಪಾತದಲ್ಲಿ ಮೃತರಾದವರ ಕುಟುಂಬಕ್ಕೂ ಗಾಡ್​ ಫಾದರ್​ ಆಗಿದ್ದಾರೆ.
ಅಲಾಂ ಸಿಂಗ್​ ಪುಂದಿರ್​ (45) ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್​ ಆಗಿದ್ದು, ತಪೋವನ್​ ಜನ ವಿದ್ಯುತ್​ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಆ ಯೋಜನೆಯೇ ನೀರಿನಲ್ಲಿ ಕೊಚ್ಚಿಕೊ0ಡು ಹೋದ ಹಿನ್ನೆಲೆಯಲ್ಲಿ ಅವರೂ ನೀರಿನ ಪಾಲಾಗಿದ್ದರು. ಅವರ ಪತ್ನಿ ಹಾಗೂ ನಾಲ್ಕು ಹೆಣ್ಣು ಮಕ್ಕಳು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿತ್ತು.
ಈ ಕುಟುಂಬದ ನೋವನ್ನು ಅರಿತ ಸೋನು ಸೂದ್​ ಅವರ ಸಹಾಯಕ್ಕೆ ಮುಂದಾಗಿದ್ದಾರೆ. ಆ ನಾಲ್ಕು ಹೆಣ್ಣು ಮಕ್ಕಳನ್ನು ದತ್ತು ಪಡೆಯುವುದಾಗಿ ತಿಳಿಸಿದ್ದಾರೆ. ಅಂಚಲಾ (14) ಅಂತರ (11) ಕಾಜಲ್ (8) ಮತ್ತು ಅನಾನ್ಯ ಹೆಸರಿನ ನಾಲ್ಕು ಹೆಣ್ಣು ಮಕ್ಕಳ ಶಿಕ್ಷಣ ವೆಚ್ಚವನ್ನು ಅವರೇ ಭರಿಸಲಿದ್ದಾರೆ ಎಂದು ತಿಳಿಸಲಾಗಿದೆ. ಆ ಕುಟುಂಬದ ಸಂಪೂರ್ಣ ಜೀವನ ನಿರ್ವಹಣೆ ಹಣವನ್ನು ಸೋನು ಸೂದ್​ ನೀಡಲಿದ್ದಾರೆ.
ಹಿಮ ಪ್ರವಾಹದಿಂದಾಗಿ ನನ್ನ ಕುಟುಂಬದ ಯಜಮಾನನೇ ನಮ್ಮನ್ನು ಬಿಟ್ಟು ಹೋದರು. ಸಂಕಷ್ಟದಲ್ಲಿದ್ದ ನಮ್ಮ ಕುಟುಂಬಕ್ಕೆ ಸೋನು ಸೂದ್​ ಅವರು ಗಾಡ್​ ಫಾದರ್​ ರೂಪದಲ್ಲಿ ಬಂದಿದ್ದಾರೆ ಎಂದು ಸರೋಜಿನಿ ದೇವಿ ಧನ್ಯವಾದ ಅರ್ಪಿಸಿದ್ದಾರೆ. (ಏಜೆನ್ಸೀಸ್​)
यह परिवार अब हमारा है भाई ।https://t.co/PIumFwdCDJ
— sonu sood (@SonuSood)February 19, 2021

ಮದುವೆ ದಿನವೇ ನಾಪತ್ತೆಯಾದ ವಧು! ಅಕ್ಕನ ಬದಲು ತಂಗಿಗೆ ತಾಳಿ ಕಟ್ಟಿದ ವರ!

ಗಂಡನ ಮರ್ಮಾಂಗವನ್ನೇ ಚಾಕುವಿನಿಂದ ಚುಚ್ಚಿದ ಹೆಂಡತಿ! ಇಬ್ಬರಲ್ಲಿ ಅಕ್ರಮ ಸಂಬಂಧ ಇದ್ದಿದ್ದು ಯಾರಿಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
