ಮುಂಬೈ:ಕೋವಿಡ್​-19 ದಾಳಿ ಇಟ್ಟಾಗಿನಿಂದ ರೀಲ್ ಜಗತ್ತಿನ ಸೋನು ಸೂದ್ ರಿಯಲ್​ ಜಗತ್ತಿನ ಹೀರೋ ಎನಿಸಿಕೊಂಡಿದ್ದಾರೆ. ತಮ್ಮ ಪರೋಪಕಾರದ ಕೆಲಸಗಳಿಂದಾಗಿಯೇ ಜನರಿಗೆ ಹತ್ತಿರವಾಗಿರುವ ಅವರು ಈಗ ಸಾಲಕ್ಕೆ ಕೈಯೊಡ್ಡಿದ್ದಾರೆ. ಮಾತ್ರವಲ್ಲ ಅದಕ್ಕಾಗಿ ತಮ್ಮ ಆಸ್ತಿಗಳನ್ನೂ ಅಡವಿಟ್ಟಿದ್ದಾರೆ.
ಸಿಂಗ್ ಈಸ್ ಕಿಂಗ್​, ಸಿಂಬಾ, ಹ್ಯಾಪಿ ನ್ಯೂ ಇಯರ್​ ಸಿನಿಮಾಗಳಿಂದ ಜನಪ್ರಿಯರಾಗಿರುವ ನಟ ಸೋನು ಸೂದ್​ ಅದಕ್ಕೂ ಮೀರಿದ ಜನಪ್ರಿಯತೆ ಪಡೆದಿದ್ದು ತಾವು ಲಾಕ್​ಡೌನ್​ ಅವಧಿ ಹಾಗೂ ಆ ನಂತರದಲ್ಲಿ ಮಾಡಿದ ಕೆಲಸಗಳಿಂದ. ಅದೆಷ್ಟೋ ಜನರಿಗೆ ಲಾಕ್​ಡೌನ್ ಅವಧಿಯಲ್ಲಿ ಊರು ತಲುಪಲು ಸ್ವಂತ ಖರ್ಚಿನಲ್ಲಿ ಬಸ್​-ರೈಲು ವ್ಯವಸ್ಥೆ ಮಾಡಿ ಕಳಿಸಿದ್ದರು ಸೋನು ಸೂದ್​.
ಇದೀಗ ಮತ್ತಷ್ಟು ಅಂಥದ್ದೇ ಕೆಲಸಗಳನ್ನು ಮಾಡಲು ಮುಂದಾಗಿರುವ ಸೋನು ಸೂದ್ ಅದಕ್ಕಾಗಿ ತಮ್ಮ ಆಸ್ತಿಗಳನ್ನು ಅಡವು ಇರಿಸಿದ್ದಾರೆ. ತಮ್ಮ ಯೋಜನೆಯಂತೆ ಜನೋಪಕಾರ ಮಾಡಲು ಸದ್ಯ 10 ಕೋಟಿ ರೂ. ಅಗತ್ಯ ಇರುವುದನ್ನು ಮನಗಂಡಿರುವ ಅವರು ಜುಹುನಲ್ಲಿರುವ ತಮ್ಮ ಪ್ರಾಪರ್ಟಿಗಳನ್ನು ಅಡವಿಟ್ಟಿದ್ದಾರೆ.
ಜುಹುನ ಶಿವ್​ ಸಾಗರ್ ಸಿಜಿಎಚ್​ಎಸ್​ನಲ್ಲಿ ಇರುವ ತಮ್ಮ ಎರಡು ಶಾಪ್​, 8 ಫ್ಲ್ಯಾಟ್ಸ್​ , ಮುಂಬೈ ಇಸ್ಕಾನ್​ ದೇವಸ್ಥಾನದ ಬಳಿಯ ಕಟ್ಟಡ ಇತ್ಯಾದಿಗಳನ್ನು ಸ್ಟ್ಯಾಂಡರ್ಡ್​ ಚಾಟರ್ಡ್ ಬ್ಯಾಂಕ್​ನಲ್ಲಿ ಅಡವಿಟ್ಟಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಬಗ್ಗೆ ಸೆಪ್ಟೆಂಬರ್ 15ರಂದು ಒಪ್ಪಂದ ಏರ್ಪಟ್ಟಿದ್ದು, ನ. 24ರಂದು ನೋಂದಣಿ ಆಗಿರುವುದು Zapkey.com ಮೂಲಕ ಸಿಕ್ಕ ದಾಖಲೆಗಳು ತಿಳಿಸಿವೆ. ಆ ಪ್ರಕಾರ 10 ಕೋಟಿ ರೂ. ಸಾಲ ಪಡೆಯುವ ಸಲುವಾಗಿ 5 ಲಕ್ಷ ರೂ. ನೋಂದಣಿ ಶುಲ್ಕ ಪಾವತಿಸಿರುವುದು ಕೂಡ ಬಹಿರಂಗಗೊಂಡಿದೆ. ಈ ಆಸ್ತಿಗಳು ಸೋನು ಸೂದ್​ ಹಾಗೂ ಅವರ ಪತ್ನಿ ಸೋನಾಲಿ ಅವರ ಜಂಟಿ ಮಾಲೀಕತ್ವದಲ್ಲಿವೆ. (ಏಜೆನ್ಸೀಸ್​)
ನಾನು ದೇವದೂತನಲ್ಲ; ನಟ ಸೋನು ಸೂದ್

ಸ್ನಾನ ಮಾಡುವುದನ್ನು ವಿಡಿಯೋ ಮಾಡಿ, ರೇಪ್​ ಮಾಡಿದ ಕೌನ್ಸಿಲರ್​! ಸ್ನೇಹಿತನಿಂದಲೂ ರೇಪ್​ ಮಾಡಿಸಿದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − fifteen =
Remember me
