ನವದೆಹಲಿ:ಝೊಮ್ಯಾಟೋ, ಸ್ವಿಗ್ಗಿ ಸೇರಿದಂತೆ ಹಲವು ಫುಡ್ ಡೆಲಿವರಿ ಆ್ಯಪ್‌ಗಳಿಗೆ ಕಾರ್ಯ ನಿರ್ವಹಿಸುವ ಏಜೆಂಟ್‌ಗಳು ಪಡುವ ಕಷ್ಟಗಳು ಒಂದೆರಡರಲ್ಲ. ದಕ್ಷಿಣ ದೆಹಲಿಯ ಗುರುಗ್ರಾಮದಲ್ಲಿ ಫುಡ್ ಡೆಲಿವರಿ ಏಜೆಂಟ್‌ ಒಬ್ಬರು ಮಾಡಿದ ತಪ್ಪಿಗೆ ಎಲ್ಲಾ ಡೆಲಿವರಿ ಬಾಯ್ಸ್​ಗಳ ಮೇಲೆ ಅನುಮಾನ ಹುಟ್ಟುವಂತೆ ಮಾಡಿದೆ.
ಇದನ್ನೂ ಓದಿ:ಪಂಜಾಬ್ ಪ್ರಾಂತ್ಯದ ಪೊಲೀಸರ ಮೇಲೆ ಪಾಕ್ ಸೇನಾಯಿಂದ ತೀವ್ರ ಹಲ್ಲೆ! ಅಷ್ಟಕ್ಕೂ ಆಗಿದ್ದೇನು..?
ದಕ್ಷಿಣ ದೆಹಲಿಯ ಗುರುಗ್ರಾಮದ ಪ್ರದೇಶದಲ್ಲಿ ಅಪಾರ್ಟ್‌ಮೆಂಟ್ ಒಂದರಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ ಒಬ್ಬ ಆಹಾರವನ್ನು ಕೊಟ್ಟು ಮರಳಿ ಹೋಗುವ ಸಮಯದಲ್ಲಿ ಮನೆಯೊಂದರಿಂದ ದುಬಾರಿ ಶೂಗಳನ್ನು ಕಳ್ಳತನ ಮಾಡಿ ಈ ವಿಡಿಯೋ ಬಾರೀ ವೈರಲ್ ಆಗಿತ್ತು. ಈ ಘಟನೆ ಕುರಿತು ರಿಯಲ್ ಹೀರೋ ಸೋನುಸೂದ್ ಪ್ರತಿಕ್ರಿಯಿಸಿದ್ದಾರೆ. ಏಪ್ರಿಲ್ 9 ರಂದು ಗುರುಗ್ರಾಮ್‌ನ ಫ್ಲಾಟ್‌ನ ಹೊರಗೆ ಇರಿಸಲಾಗಿದ್ದ ಜೋಡಿ ಶೂಗಳನ್ನು ಕದ್ದ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಡೆಲಿವರಿ ಮ್ಯಾನ್‌ಗೆ ನಟ ಸೋನು ಸೂದ್ ಬೆಂಬಲ ವ್ಯಕ್ತಪಡಿಸಿದ್ದಾರೆ.
If Swiggy’s delivery boy stole a pair of shoes while delivering food at someone’s house. Don’t take any action against him. In fact buy him a new pair of shoes. He might be really in need. Be kind ❤️🙏
— sonu sood (@SonuSood)April 12, 2024

ಫುಡ್ ಡೆಲಿವರಿ ಏಜೆಂಟ್‌ ಒಬ್ಬರು ಅಪಾರ್ಟ್​ಮೆಂಟ್​ನಲ್ಲಿ ಅಹಾರವನ್ನು ಕೊಟ್ಟು ಹಿಂತಿರುಗುವಾಗ ಶೂ ಕದ್ದಿದ್ದು ಆತನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬೇಡಿ ಎಂದು ಕಂಪನಿ ಮತ್ತು ಪೊಲೀಸರಿಗೆ ಸೋನುಸೂದ್​ ಮನವಿ ಮಾಡಿಕೊಂಡಿದ್ದಾರೆ. ವಾಸ್ತವವಾಗಿ ಆತನಿಗೆ ಆ ಹೊಸ ಜೋಡಿ ಶೂಗಳನ್ನು ಖರೀದಿಸಿಕೊಡಿ, ಏಕೆಂದರೆ ಆತನಿಗೆ ಆ ಶೂಗಳು ಅಗತ್ಯವಿರಬಹುದು ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಪೋಸ್ಟ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ನಟ ಸೋನುಸೂದ್​ ಅವರ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ. ಕಳ್ಳತನ ಮಾಡಿದ ವ್ಯಕ್ತಿಯನ್ನು ಬೆಂಬಲಿಸುವುದು ಎಂದರೆ ಏನು ಎಂದು ಕೆಲವರು ಪ್ರಶ್ನಿಸಿದ್ದಾರೆ. ಅವರಲ್ಲಿ ಹೆಚ್ಚಿನವರು “ಕಳ್ಳತನವನ್ನು ಪ್ರೋತ್ಸಾಹಿಸುವುದಕ್ಕಾಗಿ” ನಟನನ್ನು ಟ್ರೋಲ್ ಮಾಡಿದರು. ಇದು “ನಾನು ಓದಿದ ಅತ್ಯಂತ ವಿಚಿತ್ರವಾದ ಪೋಸ್ಟ್‌ಗಳಲ್ಲಿ ಒಂದಾಗಿದೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದಾರೆ.
ಎಐಸಿಸಿ ಅಧ್ಯಕ್ಷ ಖರ್ಗೆ ಅಳಿಯ ಕಲಬುರಗಿ ಕಾಂಗ್ರೆಸ್ ಅಭ್ಯರ್ಥಿ ‘ರಾಧಾಕೃಷ್ಣ ದೊಡ್ಡಮನಿ’ ಆಸ್ತಿ ಎಷ್ಟು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − fourteen =
Remember me
