ನವದೆಹಲಿ:ವಾಹನ ಚಲಾಯಿಸಲು ಬಹುಮುಖ್ಯವಾಗಿ ಡ್ರೈವಿಂಗ್​ ಲೈಸೆನ್ಸ್ ಬೇಕು. ಅದನ್ನು ಪಡೆಯಬೇಕಾದರೆ ಅನೇಕ ಹಂತಗಳನ್ನು ಸಹ ಪೂರ್ಣಗೊಳಿಸಬೇಕಿದೆ. ಅದರಲ್ಲಿ ಡ್ರೈವಿಂಗ್​ ಟೆಸ್ಟ್​ ಸಹ ತುಂಬಾ ಮುಖ್ಯ. ಆದರೆ, ಇಂದು ಮಧ್ಯವರ್ತಿಗಳ ಅಬ್ಬರ ಮತ್ತು ಸರ್ಕಾರಿ ಅಧಿಕಾರಿಗಳ ಬೇಜವಾಬ್ದಾರಿ ಅಥವಾ ದುರಾಡಳಿತದ ಪರಿಣಾಮವಾಗಿ ಲೈಸೆನ್ಸ್​ ಸುಲಭವಾಗಿ ಪಡೆಯುವುದು ದುಸ್ತರವಾಗಿದೆ.
ಒಂದಲ್ಲ ಒಂದು ನೆಪ ಹೇಳಿ ಸಾರ್ವಜನಿಕರನ್ನು ಅಲೆದಾಡಿಸುತ್ತಾರೆ. ಅಲ್ಲದೆ, ಹಣ ಖರ್ಚು ಮಾಡಿದರೆ ಟೆಸ್ಟ್​ ಇಲ್ಲದೆ ಪಾಸ್​ ಮಾಡುತ್ತಾರೆ. ಆದಷ್ಟು ಬೇಗ ಡಿಎಲ್​ ಸಹ ಕೈಗೆ ಸಿಗುತ್ತದೆ. ಮಧ್ಯವರ್ತಿಗಳಂತೂ ಆರ್​ಟಿಒ ಕಚೇರಿಯಲ್ಲಿ ದಂಡು-ದಂಡಾಗಿ ನಿಂತಿರುತ್ತಾರೆ. ಇಷ್ಟೆಲ್ಲ ಅಡೆ-ತಡೆಗಳ ಮಧ್ಯೆ ಡಿಎಲ್ ಅನ್ನು ಸರ್ಕಾರಿ ದರದಲ್ಲೇ​ ಸುಲಭವಾಗಿ ಪಡೆಯುವುದು ಹೇಗೆ? ಎಂಬ ಪ್ರಶ್ನೆ ಅನೇಕರಲ್ಲಿ ಕಾಡುತ್ತಿದೆ. ಇನ್ನು ಮುಂದೆ ಈ ಪ್ರಶ್ನೆಗೆ ಉತ್ತರ ಸಿಗಲಿದೆ. ಅದಕ್ಕಾಗಿ ಹೊಸ ಕಾರ್ಯಯೋಜನೆಯೊಂದು ತಯಾರಾಗುತ್ತಿದೆ. ಡ್ರೈವಿಂಗ್​ ಟೆಸ್ಟ್​ ಇಲ್ಲದೆಯೇ ಸುಲಭವಾಗಿ ಡಿಎಲ್​ ಪಡೆಯಬಹುದಾಗಿದೆ.
ಇದನ್ನೂ ಓದಿರಿ:ಮದ್ವೆಯಾದ ಎರಡೇ ತಿಂಗಳಲ್ಲಿ ಪತಿಯಿಂದಲೇ ಬಿ.ಟೆಕ್​ ವಿದ್ಯಾರ್ಥಿನಿಯ ಬರ್ಬರ ಹತ್ಯೆ..!
ಹೌದು. ದೇಶದಲ್ಲಿ ರಸ್ತೆ ಅಪಘಾತಗಳನ್ನು ತಗ್ಗಿಸಲು ನಾಗರಿಕರಿಗೆ ಉತ್ತಮ ಗುಣಮಟ್ಟದ ಡ್ರೈವಿಂಗ್​ ತರಬೇತಿ ನೀಡುವ ಸಲುವಾಗಿ ಕೇಂದ್ರಾಡಳಿತ ಪ್ರದೇಶದ ಸೇರಿದಂತೆ ದೇಶದ ಎಲ್ಲ ರಾಜ್ಯಗಳ ಡ್ರೈವಿಂಗ್​ ತರಬೇತಿ ಕೇಂದ್ರಗಳಿಗೆ ಮಾನ್ಯತೆ ಪ್ರಮಾಣಪತ್ರಗಳನ್ನು ಒದಗಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸುತ್ತಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಈ ವರ್ಷದ ಅಂತ್ಯದಲ್ಲಿ ಯೋಜನೆ ಕಾರ್ಯರೂಪಕ್ಕೆ ಬರಲಿದೆ.
ತರಬೇತಿ ಕೇಂದ್ರಗಳಲ್ಲಿ ಯಶಸ್ವಿ ತರಬೇತಿ ಪಡೆಯುವ ಚಾಲಕರು ಡ್ರೈವಿಂಗ್​ ಲೈಸೆನ್ಸ್​ ಪಡೆಯುವಾಗ ಎದುರಿಸಬೇಕಾದ ಡ್ರೈವಿಂಗ್​ ಟೆಸ್ಟ್​ನಿಂದ ವಿನಾಯಿತಿಯನ್ನು ಪಡೆದುಕೊಳ್ಳಲಿದ್ದಾರೆ. ಕೆಲವೊಂದು ಗುಣಮಟ್ಟಗಳನ್ನು ತರಬೇತಿ ಪಡೆಯುವ ಚಾಲಕರು ಸಾಧಿಸಿದ ಬಳಿಕ ತರಬೇತಿ ಕೇಂದ್ರಗಳು ಪ್ರಮಾಣಪತ್ರಗಳನ್ನು ನೀಡಲಿವೆ.
ಪ್ರತಿ ವರ್ಷ ದೇಶಾದ್ಯಂತ ರಸ್ತೆ ಅಪಘಾತಗಳಲ್ಲಿ ಸಾವಿರಾರು ಮಂದಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಇಂತಹ ದುರ್ಘಟನೆಗಳನ್ನು ಕುಗ್ಗಿಸುವ ಉದ್ದೇಶದಿಂದ ಚಾಲನಾ ಶ್ರೇಷ್ಠತೆಯನ್ನು ಸುಧಾರಿಸಲು ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಹೊಸ ಯೋಜನೆಯನ್ನು ತರಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಸಚಿವಾಲಯವು ಚಾಲಕ ತರಬೇತಿ ಕೇಂದ್ರಗಳ ಮಾನ್ಯತೆಗೆ ಸಂಬಂಧಿಸಿದಂತೆ ಕರಡು ಅಧಿಸೂಚನೆಯನ್ನು ಹೊರಡಿಸಿದೆ.
ಇದನ್ನೂ ಓದಿರಿ:ತಾಲೂಕು ಪಂಚಾಯಿತಿಯನ್ನೇ ರದ್ದು ಮಾಡಲು ಸಿದ್ಧತೆ! ಕರ್ನಾಟಕದಲ್ಲಿ ಜಿಪಂ, ಗ್ರಾಪಂ ಮಾತ್ರ ಇರುತ್ತೆ…
ಚಾಲಕರಿಗೆ ಪ್ರಮಾಣ ಪತ್ರಗಳನ್ನು ನೀಡುವ ಮುನ್ನ ತರಬೇತಿ ಕೇಂದ್ರಗಳು ಅನುಸರಿಸಬೇಕಾದ ಕ್ರಮಗಳು ಮತ್ತು ಪ್ರಕ್ರಿಯೆಗಳನ್ನು ಅಧಿಸೂಚನೆಯಲ್ಲಿ ತಿಳಿಸಿದೆ. ಡ್ರೈವಿಂಗ್​ ಕೇಂದ್ರಗಳಲ್ಲಿ ಯಶಸ್ವಿಯಾಗಿ ಚಾಲಕನೊಬ್ಬ ತರಬೇತಿ ಪಡೆದು ಪಾಸ್​ ಆದರೆ, ಅಂತವರಿಗೆ ಡ್ರೈವಿಂಗ್​ ಲೈಸೆನ್ಸ್​ ಪಡೆಯುವಾಗ ಡ್ರೈವಿಂಗ್​ ಟೆಸ್ಟ್​ನಿಂದ ವಿನಾಯಿತಿಯನ್ನು ನೀಡಲಾಗುತ್ತದೆ.
ಸಾರ್ವಜನಿಕ ಜಾಗೃತಿಗಾಗಿ, ಸಾರ್ವಜನಿಕ ಸಮಾಲೋಚನೆಯನ್ನು ಸುಧಾರಿಸಲು ಸಚಿವಾಲಯವು ತನ್ನ ವೆಬ್​ಸೈಟ್‌ನಲ್ಲಿ ಕರಡು ಅಧಿಸೂಚನೆಯನ್ನು ಜನವರಿ 29ರಂದು ಅಪ್‌ಲೋಡ್ ಮಾಡಿದೆ. ಮಾರ್ಚ್, ಏಪ್ರಿಲ್​ ಅಥವಾ ನಿರೀಕ್ಷಿತ ಮುಂಬರುವ ತಿಂಗಳುಗಳಲ್ಲಿ ಸಚಿವಾಲಯವು ತನ್ನ ಔಪಚಾರಿಕ ಅಧಿಸೂಚನೆಯನ್ನು ಬಿಡುಗಡೆ ಮಾಡಲಿದೆ. ಸಾರಿಗೆ ಸಚಿವಾಲಯದ ಈ ಕ್ರಮವು ಸಾರಿಗೆ ಉದ್ಯಮಕ್ಕೆ ವಿಶೇಷವಾಗಿ ತರಬೇತಿ ಪಡೆದ ಚಾಲಕರನ್ನು ಹೊಂದಲು ಸಹಾಯ ಮಾಡುತ್ತದೆ. ಇದು ಅವರ ದಕ್ಷತೆಯನ್ನು ಸುಧಾರಿಸುತ್ತದೆ ಮತ್ತು ರಸ್ತೆ ಅಪಘಾತಗಳನ್ನು ಕಡಿಮೆ ಮಾಡುತ್ತದೆ.(ಏಜೆನ್ಸೀಸ್​)
ಇದನ್ನೂ ಓದಿರಿ:ಇದಪ್ಪಾ ಅದೃಷ್ಟ ಅಂದ್ರೆ! ರಾತ್ರೋರಾತ್ರಿ 7 ಕೋಟಿ ರೂ. ಒಡೆಯನಾದ ಕೇರಳಿಗ..!
ಒಂದೇ ದಿನ ಮೂವರು ಯುವತಿಯರು ನಾಪತ್ತೆ: ಒಂದೊಂದು ಪ್ರಕರಣವೂ ವಿಚಿತ್ರ, ಪಾಲಕರಲ್ಲಿ ಆತಂಕ!

ಸತತ ಐದು ದಿನಗಳಿಂದ ಇಳಿಯುತ್ತಲೇ ಇದೆ ಚಿನ್ನದ ದರ; ಇಂದು ಎಷ್ಟಿದೆ ಗೊತ್ತಾ?

20 ಲಕ್ಷ ರೂ. ಲಂಚ ಸ್ವೀಕರಿಸುತ್ತಲೇ ರೆಡ್​ಹ್ಯಾಂಡ್​ ಆಗಿ ಎಸಿಬಿ ಬಲೆಗೆ ಬಿದ್ದ ಅಧಿಕಾರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − thirteen =
Remember me
