ಲಖನೌ :ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯನ್ನು ಬೆಳೆಸಿ, ಆ ಮೂಲಕ ಅಭಿವೃದ್ಧಿ ಸಾಧಿಸುವ ಕನಸು ಹೊತ್ತ ಉತ್ತರ ಪ್ರದೇಶ ಇದೀಗ ರಾಜ್ಯದಲ್ಲಿ ಹೆಚ್ಚು ಯುವ ಉದ್ಯಮಿಗಳನ್ನು ಸಿದ್ಧಗೊಳಿಸಲು ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಸ್ಟಾರ್ಟ್ಅಪ್​​​ಅನ್ನು ಒಂದು ವಿಷಯವಾಗಿ ಪರಿಚಯಿಸಲಾಗುವುದು ಎಂದು ಶನಿವಾರ ಹೇಳಿದೆ.ಈ ಕುರಿತು ಸರ್ಕಾರ ಹೇಳಿಕೆ ನೀಡಿದ್ದು, ಯುವಜನತೆ ಕೇವಲ ಉದ್ಯೋಗಾಕಾಂಕ್ಷಿಗಳಾಗಿ ಉಳಿಯದೆ ಅವರನ್ನು ಉದ್ಯೋಗದಾತರನ್ನಾಗಿಯೂ ಮಾಡುವುದು ಸರ್ಕಾರದ ಗುರಿಯಾಗಿದೆ ಎಂದು ತಿಳಿಸಿದೆ.ಅಷ್ಟೇ ಅಲ್ಲದೆ ಸರ್ಕಾರ ಹೊಸ ನೀತಿಯನ್ನು ರೂಪಿಸಲಿದ್ದು, ಅದರ ಅಡಿ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಒಂದು ವರ್ಷದ ಅಧ್ಯಯನ ರಜೆ ಸಿಗುತ್ತದೆ. ವಿದ್ಯಾರ್ಥಿಗಳು ಈ ರಜೆ ಅವಧಿಯಲ್ಲಿ ಇಂಟರ್ನ್‌ಶಿಪ್ ತೆಗೆದುಕೊಳ್ಳಬಹುದು ಎಂದು ತಿಳಿಸಿದೆ.
ಇದನ್ನೂ ಓದಿ:VIDEO | ಅಳಿದ ಸಂತತಿಯ ಉಳಿದ ನೆನಪುಗಳು…
ವಿದ್ಯಾರ್ಥಿಗಳು ತಮ್ಮದೇ ಆದ ಉದ್ಯಮಗಳನ್ನು ಸ್ಥಾಪಿಸಲು ಸರ್ಕಾರ ಪ್ರೋತ್ಸಾಹಿಸುತ್ತದೆ.ಮೊದಲ ವರ್ಷದಲ್ಲಿ ಒಂದು ಲಕ್ಷ ವಿದ್ಯಾರ್ಥಿಗಳನ್ನು ಯೋಜನೆಯಡಿ ಸೇರಿಸಲಾಗುವುದು.”ಇಂಟರ್ನ್‌ಶಿಪ್ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ತಿಂಗಳಿಗೆ 2,500 ರೂ. ಭತ್ಯೆ ನೀಡಲಾಗುತ್ತದೆ” ಎಂದು ಹೇಳಿಕೆ ತಿಳಿಸಿದೆ.ಎಸ್‌ಐಡಿಬಿಐ ಸಹಾಯದಿಂದ ಸರ್ಕಾರ ಇದಕ್ಕಾಗಿ ಮೀಸಲು ನಿಧಿಯನ್ನು ಸಹ ಪ್ರಾರಂಭಿಸಿದೆ. “ಉತ್ತರ ಪ್ರದೇಶ ಸ್ಟಾರ್ಟ್ ಅಪ್ ನಿಧಿ”ಗೆ ಮೊದಲ ಕಂತಿನ 15 ಕೋಟಿ ರೂ.ಗಳನ್ನು ಸಿಎಂ ಹಸ್ತಾಂತರಿಸಿದರು. ರಾಜ್ಯ ಮತ್ತು ಎಸ್‌ಐಡಿಬಿಐ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ”ಎಂದು ಸರ್ಕಾರ ಹೇಳಿಕೆ ತಿಳಿಸಿದೆ.
36 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಸಾಗಿಸಲು ಸಜ್ಜಾಗಿದೆ ರೈಲ್ವೆ ಮಂಡಳಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seven + fourteen =
Remember me
