ಚೆನ್ನೈ:ಸೂಪರ್ ಸ್ಟಾರ್ ರಜನಿಕಾಂತ್ ಮಗಳು ಸೌಂದರ್ಯ ರಜನಿಕಾಂತ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಉದ್ಯಮಿ ವಿಶಾಗನ್​ ಅವರನ್ನು ಸೌಂದರ್ಯ ವರಿಸಿದ್ದು, ಇದೀಗ ಈ ದಂಪತಿಗೆ ಎರಡನೇ ಮಗುವಾಗಿದೆ. ವೀರ ರಜನಿಕಾಂತ್ ವನಂಗಮುಡಿ ಎಂದು ಹೆಸರಿಟ್ಟಿದ್ದಾರೆ. ಇವರಿಗೆ ಈಗಾಗಲೇ ವೇದ ಕೃಷ್ಣ ಎಂಬ ಗಂಡು ಮಗುವಿದೆ.
ಎರಡನೇ ಬಾರಿಗೆ ತಾಯಿಯಾಗಿರುವ ಖುಷಿ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಗರ್ಭಿಣಿಯಾಗಿದ್ದಾಗಿನ ಫೋಟೋ ಶೇರ್ ಮಾಡಿ, ದೇವರ ಅನುಗ್ರಹ ಮತ್ತು ಹೆತ್ತವರ ಆಶೀರ್ವಾದದೊಂದಿಗೆ ವೀರ ರಜನಿಕಾಂತ್​​ನನ್ನು ಸ್ವಾಗತಿಸಲು ನಾವು ಪುಳಕಿತರಾಗಿದ್ದೇವೆ ಎಂದು ಸೌಂದರ್ಯ ಬರೆದುಕೊಂಡಿದ್ದಾರೆ. ಡಾ. ಸುಮನಾ ಮನೋಹರ್, ಡಾ. ಶ್ರೀವಿದ್ಯಾ ಶೇಷಾದ್ರಿ ಹಾಗೂ ಶೇಷಾದ್ರಿ ಸುರೇಶ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಸೌಂದರ್ಯ ರಜನಿಕಾಂತ್ 2017ರಲ್ಲಿ ಅಶ್ವಿನ್ ರಾಮ್​ಕುಮಾರ್ ಅವರಿಂದ ಮನೆಯವರ ಸಮ್ಮತಿಯೊಂದಿಗೆ ವಿಚ್ಛೇದನ ಪಡೆದಿದ್ದರು. ನಂತರ 2019ರಲ್ಲಿ ನಟ, ಉದ್ಯಮಿ ವಿಶಾಗನ್ ವನಂಗಮುಡಿ ಅವರನ್ನು ವಿವಾಹವಾಗಿದ್ದರು.(ಏಜೆನ್ಸೀಸ್)
With gods abundant grace and our parents blessings 🙏🏻😇Vishagan,Ved and I are thrilled to welcome Ved’s little brother 💙💙💙 VEER RAJINIKANTH VANANGAMUDI today 11/9/22#Veer#Blessed😇🥰thank you to our amazing doctors@sumana_manoharDr.Srividya Seshadri@SeshadriSuresh3🙏🏻pic.twitter.com/a8tXbqmTxf— soundarya rajnikanth (@soundaryaarajni)September 11, 2022
With gods abundant grace and our parents blessings 🙏🏻😇Vishagan,Ved and I are thrilled to welcome Ved’s little brother 💙💙💙 VEER RAJINIKANTH VANANGAMUDI today 11/9/22#Veer#Blessed😇🥰thank you to our amazing doctors@sumana_manoharDr.Srividya Seshadri@SeshadriSuresh3🙏🏻pic.twitter.com/a8tXbqmTxf
ಹೈದರಾಬಾದ್​ನಲ್ಲಿ ಪ್ರವಾಹದ ನೀರಿನಲ್ಲಿ ಕೊಚ್ಚಿ ಬಂದ ಡೆವಿಲ್​ ಫಿಶ್ ನೋಡಲು ಮುಗಿಬಿದ್ದ ಜನರು!
ಸ್ನೇಹಿತರ ಜೊತೆ ಈಜಲು ಹೋಗಿದ್ದ ಯುವವೈದ್ಯ ನಾಪತ್ತೆ: ಕನಕಪುರದಲ್ಲಿ ಘಟನೆ, ಮೃತಪಟ್ಟಿರುವ ಶಂಕೆ
ಇಲ್ಲಿ ಕೋತಿಗಳಿಗೂ ಸಿಗುತ್ತೆ ಓಣಂ ಹಬ್ಬದ ಊಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 10 =
Remember me
