ನವದೆಹಲಿ:ಎರಡು ದಿನಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ಅಪ್ಪಳಿಸಿದ ಅಂಫಾನ್​ ಚಂಡಮಾರುತಕ್ಕೆ ಸಿಲುಕಿ ಬುಡಮೇಲಾಗಿ ಬಿದ್ದಿದ್ದ ಮಾವಿನಹಣ್ಣಿನ ಮರವನ್ನು ಮರುನಾಟಿ ಮಾಡಿಸುವ ಮೂಲಕ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಪರಿಸರ ಪ್ರೇಮ ಮೆರೆದಿದ್ದಾರೆ.
ಸೌರವ್​ ಗಂಗೂಲಿ ಕೋಲ್ಕತಾದ ಬೆಹಲಾ ಬಡಾವಣೆಯಲ್ಲಿರುವ ಐಷಾರಾಮಿ ಮನೆಯಲ್ಲಿ ವಾಸವಾಗಿದ್ದಾರೆ. ಮನೆಯ ಸುತ್ತ ಹಲವು ಮರಗಿಡಗಳನ್ನು ಬೆಳೆಸಿದ್ದಾರೆ. ಎರಡು ದಿನಗಳ ಹಿಂದೆ ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿದ್ದ ಅಂಫಾನ್​ ಚಂಡಮಾರುತಕ್ಕೆ ಸಿಲುಕಿ ಗಂಗೂಲಿ ಅವರ ಮನೆ ತೋಟದಲ್ಲಿದ್ದ ಹಳೆಯ ಮಾವಿನಮರ ಬುಡಮೇಲಾಗಿ ಬಿದ್ದಿತ್ತು.
ತಕ್ಷಣವೇ ಅದರ ಮರುನಾಟಿಗೆ ಕ್ರಮ ಕೈಗೊಂಡ ಅವರು, ಮರುನಾಟಿ ಪ್ರಕ್ರಿಯೆಯ ತಾವೂ ಸಹಿತ ಪಾಲ್ಗೊಂಡಿದ್ದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಆ ಮರವನ್ನು ಮೇಲಕ್ಕೆ ಎತ್ತಿ, ಲಂಬಾಕಾರವಾಗಿ ನಿಲ್ಲಿಸಿ, ಮರುನಾಟಿ ಮಾಡಬೇಕಾಯಿತು. ಅದು ತುಂಬಾ ದೊಡ್ಡದಾಗಿದ್ದರಿಂದ, ಅದನ್ನು ಮರುನಾಟಿ ಮಾಡಲು ತುಂಬಾ ಪ್ರಯಾಸಪಡಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.
The mango tree in the house had to be lifted, pulled back and fixed again .. strength at its highest 😂😂pic.twitter.com/RGOJeaqFx1— Sourav Ganguly (@SGanguly99)May 21, 2020
The mango tree in the house had to be lifted, pulled back and fixed again .. strength at its highest 😂😂pic.twitter.com/RGOJeaqFx1
ರೆಪೋ ದರವನ್ನು 40 ಮೂಲಾಂಶ ಕಡಿತಗೊಳಿಸಿದ ಆರ್​ಬಿಐ, ಗ್ರಾಹಕರಿಗೆ ಏನೆಲ್ಲ ಲಾಭ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
