ನವದೆಹಲಿ:ಕ್ರಿಕೆಟ್​ ಮೈದಾನದಲ್ಲಿ ಭರ್ಜರಿ ಬ್ಯಾಟಿಂಗ್​ ಮೂಲಕ ದಾಖಲೆಗಳ ಮೇಲೆ ದಾಖಲೆ ಬರೆದ ಸಚಿನ್​ ತೆಂಡುಲ್ಕರ್​, ಸೌರವ್​ ಗಂಗೂಲಿ ಮತ್ತು ರಾಹುಲ್​ ದ್ರಾವಿಡ್​ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಇವರೆಲ್ಲರೂ ಕ್ರಿಕೆಟ್​ಗಾಗಿ ಅಲ್ಲ ಬದಲಿಗೆ ಕರೊನಾ ವಿರುದ್ಧದ ಜಾಗೃತಿಗಾಗಿ ಮತ್ತೊಮ್ಮೆ ಕ್ಯಾಮರಾ ಮುಂದೆ ನಿಂತಿದ್ದಾರೆ.
ಹೌದು… ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ಆರಂಭಿಸಿರುವ #TeamMaskForceನ ಭಾಗವಾಗಿ ದಿಗ್ಗಜ ಆಟಗಾರರು ಸ್ವತಃ ತಾವೇ ವಿನ್ಯಾಸಗೊಳಿಸಿರುವ ಮಾಸ್ಕ್​ಗಳನ್ನು ಧರಿಸುವ ಮೂಲಕ ಕರೊನಾ ವಿರುದ್ಧದ ಹೋರಾಟದಲ್ಲಿ ಮಾಸ್ಕ್​ ಧರಿಸುವ ಮಹತ್ವವನ್ನು ಸಾರುತ್ತಿದ್ದಾರೆ.
ಈ ಮಾಸ್ಕ್​ಗಳ ಮೇಲೆ ತಮ್ಮ ಸಾಧನೆಯನ್ನು ಸಾರುವ, ತಮ್ಮ ಹೆಸರಿನೊಂದಿಗೆ ತಳಕು ಹಾಕಿಕೊಂಡಿರುವ ಚುಟುಕುಹೆಸರುಗಳು, ಅದೃಷ್ಟ ಸಂಖ್ಯೆ ಅಥವಾ ತಮ್ಮ ಹೆಸರಿನ ಲಾಂಛನವನ್ನು ಆಟಗಾರರು ಅಳವಡಿಸಿಕೊಂಡಿರುವುದು ಮತ್ತೊಂದು ವಿಶೇಷವಾಗಿದೆ.ಬಿಸಿಸಿಐ ಟ್ವೀಟ್​ ಮಾಡಿರುವ ವಿಡಿಯೋ ತುಣುಕಿನಲ್ಲಿ ಭಾರತದ ಪುರುಷ ಮತ್ತು ಮಹಿಳಾ ಕ್ರಿಕೆಟ್​ ತಂಡದ 10 ಸದಸ್ಯರು ಮಾಸ್ಕ್​ ಧರಿಸಿ, ಸುರಕ್ಷಿತವಾಗಿ ಇರುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ವಿರಾಟ್​ ಕೊಹ್ಲಿ ತಮ್ಮ ಮಾಸ್ಕ್​ ಮೇಲೆ ವಿ ಎಂಬ ಇಂಗ್ಲಿಷ್​ ಅಕ್ಷರ ಹಾಕಿಕೊಂಡಿದ್ದರೆ, ಗಂಗೂಲಿ ದಾದಾ ಎಂದು ಬರೆದುಕೊಂಡಿದ್ದಾರೆ. ರಾಹುಲ್​ ದ್ರಾವಿಡ್​ ವಾಲ್​ ಎಂದು ಬರೆದುಕೊಂಡಿದ್ದಾರೆ.
ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಅವರೊಂದಿಗೆ ಆರಂಭವಾಗುವ ವಿಡಿಯೋ ತುಣುಕಿನಲ್ಲಿ ಸೌರವ್​ ಗಂಗೂಲಿ, ಭಾರತೀಯ ಮಹಿಳಾ ಕ್ರಿಕೆಟ್​ ತಂಡದ ಸೆನ್ಷೇಷನ್​ ಸ್ಮೃತಿ ಮಂದನಾ, ರೋಹಿತ್​ ಶರ್ಮ, ಹರ್ಭಜನ್​ ಸಿಂಗ್​, ಮಹಿಳಾ ಕ್ರಿಕೆಟ್​ ತಂಡದ ನಾಯಕ ಹರ್ಮನ್​ಪ್ರೀತ್​ ಕೌರ್​​, ರಾಹುಲ್​ ದ್ರಾವಿಡ್​, ವೀರೇಂದ್ರ ಸೆಹ್ವಾಗ್​, ಮಿಥಾಲಿ ರಾಜ್​ ಹಾಗೂ ನಂ.10 ಸಚಿನ್​ ತೆಂಡುಲ್ಕರ್​ ಕ್ರಮವಾಗಿ ಕಾಣಿಸಿಕೊಳ್ಳುತ್ತಾರೆ.
#TeamIndiais now#TeamMaskForce!
Join#IndiaFightsCoronaand download@mygovindia's@SetuAarogyamobile application 📱@PMOIndia@narendramodi🇮🇳pic.twitter.com/M06okJhegt
— BCCI (@BCCI)April 18, 2020

ಹಲವು ಸನ್ಮಾನಗಳಿಗೆ ಪಾತ್ರನಾಗಿದ್ದ ಈ ‘ವೀರ ಯೋಧ’ ಈಗ ಜೈಲು ಸೇರಿದ್ದಾನೆ… ಯಾಕೆ ಅಂತೀರಾ? ಈ ಸ್ಟೋರಿ ಓದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + fourteen =
Remember me
