ಗೋವಾ:ತಮ್ಮ ಮಗುವಿಗೆ ‘ಇಂಡಿಯಾ’ ಎಂದು ನಾಮಕರಣ ಮಾಡಿ ಭಾರತೀಯರ ಮನಗೆದ್ದಿದ್ದ ಖ್ಯಾತ ದಕ್ಷಿಣ ಆಫ್ರಿಕಾ ಕ್ರಿಕೆಟರ್ ಜೋಂಟಿ ರೋಡ್ಸ್ ಇದೀಗ ಭಾರತದಲ್ಲೇ ಮನೆ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ.

ಭಾರತ, ಇಲ್ಲಿನ ಜನತೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿಯ ಮೇಲೆ ಈ ಮೊದಲಿನಿಂದಲೂ ಆಕರ್ಷಿತರಿರುವ  ಜಾಂಟಿ ರೋಡ್ಸ್, ಇದೀಗ ಗೋವಾದಲ್ಲೇ ಮನೆ ಮಾಡುವ ಮೂಲಕ ಭಾರತದ ಬೆಳಗು ಕಾಣ ಹೊರಟಿದ್ದಾರೆ.

ಗೋವಾದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್ ಅನ್ನು ಬಾಡಿಗೆಗೆ ಗೋವಾದ ಬೀದಿಗಳಲ್ಲಿ ಸುತ್ತುತ್ತಾ‌ ಸಾಮಾಜಿಕ ಜಾಲತಾಣಗಳಲ್ಲಿ  ಜಾಂಟಿ ರೋಡ್ಸ್ ಪೋಸ್ಟ್ ಗಳನ್ನ ಹಂಚಿಕೊಂಡಿದ್ದು, ಈ ಪೋಸ್ಟ್​​ಗಳಿಗೆ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದೆ. ಪ್ರತಿ ಎಕ್ಸ್ ಪೋಸ್ಟ್​​ಗಳಿಗೆ ರಿಟ್ವೀಟ್ ಮಾಡಿ  ಜಾಂಟಿ ರೋಡ್ಸ್ ರಿಪ್ಲೈಗಳನ್ನ ನೀಡುತ್ತಿರುವುದು ಮತ್ತೊಂದು ವಿಶೇಷವಾಗಿದೆ.

ದಕ್ಷಿಣ ಗೋವಾದ ಕಾನಕೋಣದ ಅಗೊಂದಾದಲ್ಲಿ  ಜಾಂಟಿ ರೋಡ್ಸ್ ಮನೆ ಮಾಡಿದ್ದು, ಆಗೊಂದಾದ ರಸ್ತೆಗಳಲ್ಲಿ ಸುತ್ತಾಡುತ್ತಾ ಎಕ್ಸ್ ನಲ್ಲಿ ಟ್ವೀಟ್ ಮಾಡುತ್ತಿದ್ದಾರೆ.‌ ಅಗೊಂದಾದಲ್ಲಿ ಮನೆ ಮಾಡಿರುವ ಬಗ್ಗೆ ಖುದ್ದು ಜೋಂಟಿ ಎಕ್ಸ್ ನಲ್ಲಿ ಹಂಚಿಕೊಂಡಿದ್ದು, ಇದು ಸಮ್ಮರ್ ವೆಕೇಶನ್ ಅಲ್ಲ. ಆರು ತಿಂಗಳಿಗಾಗಿ ನಾನಿಲ್ಲಿಗೆ ಶಿಫ್ಟ್ ಆಗಿದ್ದೇನೆ ಎಂದು ತಿಳಿಸಿದ್ದಾರೆ.

ಇಬ್ಬರು ಮಕ್ಕಳನ್ನ ಹೊಂದಿರುವ  ಜಾಂಟಿ ರೋಡ್ಸ್, ಪುತ್ರನನ್ನು ಅಗೊಂದಾದ ರಿವರ್ ಹೌಸ್ ಅಕಾಡೆಮಿಗೆ ಸೇರಿಸಿದ್ದಾರೆ. ಈ ಬಗ್ಗೆ ಫೋಟೋ ಸಮೇತ  ಜಾಂಟಿ ರೋಡ್ಸ್ ಟ್ವೀಟ್ ಮಾಡಿದ್ದು, ನಮ್ಮ ಮಕ್ಕಳು ಎಷ್ಟು ಬೇಗ ಹೊಂದಿಕೊಳ್ಳುತ್ತಾರೆ ಎಂದು ಹೇಳಿಕೊಂಡಿದ್ದಾರೆ.ಗೋವಾದಲ್ಲಿ ಸುತ್ತಾಟ ನಡೆಸುತ್ತಿರುವ  ಜಾಂಟಿ ರೋಡ್ಸ್, ಗೋವಾ ಪೊಲೀಸ್ ಸಿಬ್ಬಂದಿಯೋರ್ವರೊಂದಿಗೆ ಫೋಟೋ ತೆಗೆಸಿಕೊಂಡು ಟ್ವೀಟ್ ಮಾಡಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೃತ್ತಿಜೀವನ :1992ರಿಂದ 2003ರವರೆಗಿನ ಜೋಂಟಿ ಕ್ರಿಕೆಟ್ ವೃತ್ತಿಜೀವನದಲ್ಲಿ 52 ಟೆಸ್ಟ್ ಮತ್ತು 245 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿದ್ದು, ಏಕದಿನ‌ ಪಂದ್ಯಗಳಲ್ಲಿ 5,935 ರನ್ ಮತ್ತು ಟೆಸ್ಟ್‌ಗಳಲ್ಲಿ 2,532 ರನ್‌ಗಳನ್ನು ಗಳಿಸಿದ್ದಾರೆ.
ಲ್ಯಾಪ್‌ಟಾಪ್ ಆಮದುಗಳ ಮೇಲೆ ಯಾವುದೇ ನಿರ್ಬಂಧವಿಲ್ಲ: ವಾಣಿಜ್ಯ ಕಾರ್ಯದರ್ಶಿ ಸುನಿಲ್ ಭರ್ತ್ವಾಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + fifteen =
Remember me
