ಮುಂಬೈ:ಲೈವ್​ ಸ್ಟ್ರೀಮಿಂಗ್​ ಮಾಡುವ ವೇಳೆ ದಕ್ಷಿಣ ಕೊರಿಯಾ ಮೂಲದ ಮಹಿಳಾ ಯೂಟ್ಯೂಬರ್​ಗೆ ಕಿರುಕುಳ ನೀಡಿದ ಯುವಕರಿಬ್ಬರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಕಳೆದ ರಾತ್ರಿ (ನ.30) ಈ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಯುವಕರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ಸಹ ವ್ಯಕ್ತವಾಗಿದೆ.
ಮುಂಬೈ ಬೀದಿಯಲ್ಲಿ ಲೈವ್​ ಸ್ಟ್ರೀಮಿಂಗ್​ ಮಾಡುತ್ತಿದ್ದ ಕೊರಿಯಾ ಯುವತಿಯ ಬಳಿ ಬಂದ ಯುವಕನೊಬ್ಬ ಆಕೆ ವಿರೋಧಿಸಿದರೂ ಕೈಹಿಡಿದುಕೊಳ್ಳುತ್ತಾನೆ. ಬಳಿಕ ಬೈಕ್​ ಮೇಲೆ ಏರುವಂತೆ ಒತ್ತಾಯ ಮಾಡುತ್ತಾನೆ. ಎಲ್ಲಿಗೆ ಎಂದು ಪ್ರಶ್ನಿಸುತ್ತಾಳೆ. ಬಳಿಕ ನನ್ನ ಡ್ರೆಸ್ ಸರಿಯಿಲ್ಲ ನಾಳೆ ಬರುತ್ತೇನೆ ಎಂದು ಹೇಳುತ್ತಾಳೆ. ನಂತರ ಯುವಕ ಆಕೆಯ ತಲೆ ಹಿಡಿದು ಮುತ್ತು ಕೊಡಲು ಯತ್ನಿಸುತ್ತಾನೆ. ಈ ವೇಳೆ ಆಕೆ ಹೇಗೋ ಉಪಾಯದಿಂದ ಬಿಡಿಸಿಕೊಳ್ಳುತ್ತಾಳೆ.
ಇಷ್ಟಕ್ಕೆ ಸುಮ್ಮನಾಗದ ಯುವಕರು ಕೊರಿಯಾ ಯುವತಿ ನಡೆದು ಹೋಗುವಾಗ ಹಿಂಬಾಲಿಸಿಕೊಂಡು ಬಂದು ಬೈಕ್​ ಮೇಲೆ ಕೂರುವಂತೆ ಕೇಳುತ್ತಾರೆ. ಬಳಿಕ ಅವರ ಕೈಯಿಂದ ತಪ್ಪಿಸಿಕೊಂಡು ಕೊರಿಯಾ ಯುವತಿ ಮನೆ ಸೇರಿಕೊಳ್ಳುತ್ತಾಳೆ. ಇದಿಷ್ಟು ಘಟನೆ ಸಾವಿರಾರು ಜನರ ಮುಂದೆಯೇ ನಡೆದಿದೆ. ದೂರದ ಊರಿನಿಂದ ಭಾರತಕ್ಕೆ ಬಂದ ಅತಿಥಿಯನ್ನು ಈ ರೀತಿನಾ ನಡೆಸಿಕೊಳ್ಳೋದು ಎಂಬ ಟೀಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ. ಯುವಕರಿಬ್ಬರಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ.
Last night on stream, there was a guy who harassed me. I tried my best not to escalate the situation and leave because he was with his friend. And some people said that it was initiated by me being too friendly and engaging the conversation. Makes me think again about streaming.https://t.co/QQvXbOVp9F
— Mhyochi in 🇮🇳 (@mhyochi)November 30, 2022

ಅಂದಹಾಗೆ ಸಂತ್ರಸ್ತ ಕೊರಿಯಾ ಯುವತಿಯನ್ನು ಮ್ಹ್ಯೋಚಿ ಎಂದು ಗುರುತಿಸಲಾಗಿದೆ. ಘಟನೆಯ ಬಗ್ಗೆ ಟ್ವೀಟ್​ ಮಾಡಿರುವ ಮ್ಹ್ಯೋಚಿ, ಕಳೆದ ರಾತ್ರಿ ಲೈವ್​ ಸ್ಟ್ರೀಮ್​ ಮಾಡುತ್ತಿದೆ. ಅಲ್ಲೊಬ್ಬ ಯುವಕ ನನಗೆ ಕಿರುಕುಳ ನೀಡಿದೆ. ಪರಿಸ್ಥಿತಿಯನ್ನು ಪ್ರಕೋಪಕ್ಕೆ ತೆಗೆದುಕೊಂಡು ಹೋಗದಂತೆ ಹೇಗೋ ನಿಭಾಯಿಸಿದೆತುಂಬಾ ಸ್ನೇಹಪರ ಮತ್ತು ಆಪ್ತವಾಗಿ ಸಂಭಾಷಣೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಇದು ಪ್ರಾರಂಭವಾಯಿತು ಎಂದು ಕೆಲವು ಜನರು ಹೇಳಿದರು. ಇದೀಗ ಸ್ಟ್ರೀಮಿಂಗ್ ಮಾಡುವ ಮುನ್ನ ಮತ್ತೊಮ್ಮೆ ಯೋಚಿಸುವಂತೆ ಈ ಘಟನೆ ಪ್ರಭಾವ ಬೀರಿದೆ ಎಂದು ಹೇಳಿದ್ದಾರೆ.
ಯುವಕರಿಬ್ಬರನ್ನು ಬಂಧಿಸಿರುವ ಮುಂಬೈ ಪೊಲೀಸರು ವಿಡಿಯೋ ಆಧಾರದ ಮೇಲೆ ಇಬ್ಬರ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣವನ್ನು ದಾಖಲಿಸಿದ್ದಾರೆ.(ಏಜೆನ್ಸೀಸ್​)
ಮುಸ್ಲಿಂ ಕಾಲೇಜು ವಿವಾದ ಬೆನ್ನಲ್ಲೇ ಮತ್ತೊಂದು ವಿವಾದ: ಕೇಸರಿ ಕಾಲೇಜು ಬೇಕೆಂದು ಹಿಂದು ಸಂಘಟನೆಗಳ ಪಟ್ಟು

ಬೀದಿ ಬದಿ ವ್ಯಾಪಾರಿಗಳನ್ನು ಒಟ್ಟುಗೂಡಿಸಿರುವುದು ಹಸಿವೇ ವಿನಃ ಧರ್ಮ, ಜಾತಿಯಲ್ಲ: ವ್ಯಾಪಾರಿ ಸಂಘಟನೆಗಳ ಆಕ್ರೋಶ

ಕರ್ತವ್ಯ ನಿರತ ಪೊಲೀಸ್​ ಪೇದೆ ಹೃದಯಾಘಾತದಿಂದ ಠಾಣೆಯಲ್ಲೆ ಸಾವು: ಕೋಲಾರದಲ್ಲಿ ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 2 =
Remember me
