ನವದೆಹಲಿ:ಕಳೆದ ವರ್ಷ ಬರದಿಂದ ಕಂಗೆಟ್ಟಿದ್ದ ರೈತರಿಗೆ ಪ್ರಸಕ್ತ ಹಂಗಾಮಿಗೆ ಶುಭ ಸುದ್ದಿ ಹೊರಬಿದ್ದಿದೆ. ಕೇಂದ್ರ ಹವಾಮಾನ ಇಲಾಖೆ ಪ್ರಕಾರ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ.
ಇದನ್ನೂ ಓದಿ:ಕಲುಷಿತ ನೀರು ಖಾಲಿ ಆಗುತ್ತಿಲ್ಲ; ರೈತರಿಂದ ಅಧಿಕಾರಿಗಳಿಗೆ ಗೇರಾವು ಹಾಕಿ ಪ್ರತಿಭಟನೆ
ಲಾ ನಿನಿ ಪರಿಸ್ಥಿತಿಯಿಂದಾಗಿ ಪೆಸಿಫಿಕ್ ಸಾಗರದ ತಂಪಾಗುವಿಕೆಯು ಈ ವರ್ಷ ಉತ್ತಮ ಮಳೆಯಾಗಲು ಕಾರಣವಾಗುತ್ತದೆ. ನೈರುತ್ಯ ಮುಂಗಾರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಈಗಾಗಲೇ ತಲುಪಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬಹಿರಂಗಪಡಿಸಿದೆ.
ಇನ್ನು ನೈಋತ್ಯ ಮಾನ್ಸೂನ್ ಮಾಲ್ಡೀವ್ಸ್, ಕೊಮೊರಿನ್ ಪ್ರದೇಶ, ದಕ್ಷಿಣ ಬಂಗಾಳ ಕೊಲ್ಲಿ, ನಿಕೋಬಾರ್ ದ್ವೀಪಗಳು ಮತ್ತು ದಕ್ಷಿಣ ಅಂಡಮಾನ್ ಸಮುದ್ರದ ಭಾಗಗಳನ್ನು ಭಾನುವಾರ(ಮೇ 19) ತಲುಪಿದೆ ಎಂದು ಹವಾಮಾನ ಅಧಿಕಾರಿಗಳು ತಿಳಿಸಿದ್ದಾರೆ.
ಇದರೊಂದಿಗೆ ಮೇ 31ರೊಳಗೆ ಕೇರಳಕ್ಕೆ ಮುಂಗಾರು ಆಗಮಿಸುವ ಸಾಧ್ಯತೆ ಇದೆ. ಕಳೆದ 150 ವರ್ಷಗಳಲ್ಲಿ ಕೇರಳದಲ್ಲಿ ಮಾನ್ಸೂನ್ ಆಗಮನದ ದಿನಾಂಕಗಳಲ್ಲಿ ಗಣನೀಯ ವ್ಯತ್ಯಾಸ ಕಂಡುಬಂದಿದೆ.
1918 ರಲ್ಲಿ ಮಾನ್ಸೂನ್ ಅದೇ ಮೊದಲ ಬಾರಿಗೆ ಮೇ 11ಕ್ಕೆ ಆಗಮಿಸಿತ್ತು. ಆದರೆ 1972 ರಲ್ಲಿ ಜೂನ್ 18 ರಂದು ಕೇರಳವನ್ನು ತಲುಪಿತ್ತು. ಕಳೆದ ವರ್ಷ ಜೂನ್ 8ರಂದು ಕೇರಳಕ್ಕೆ ಮುಂಗಾರು ಆಗಮಿಸಿತ್ತು. 2022 ರಲ್ಲಿ ಮೇ 29, 2021 ರಲ್ಲಿ ಜೂನ್ 3 ಮತ್ತು 2020 ರಲ್ಲಿ ಜೂನ್ 1 ರಂದು ಮಾನ್ಸೂನ್ ಕೇರಳವನ್ನು ತಲುಪಿತ್ತು. ಭಾರತದ ಆರ್ಥಿಕತೆಯು ಕೃಷಿಯನ್ನು ಆಧರಿಸಿರುವುದರಿಂದ, ದೇಶದಲ್ಲಿ ಮಾನ್ಸೂನ್ ಆಧಾರದ ಮೇಲೆ ಬೆಳೆಗಳನ್ನು ಬೆಳೆಯಲಾಗುತ್ತದೆ.
ದೇಶದ ಹಲವೆಡೆ ಸದ್ಯ ತೀವ್ರ ಬಿಸಿಲಿನ ವಾತಾವರಣವಿದೆ. ಹಲವೆಡೆ ಗರಿಷ್ಠ ತಾಪಮಾನ 48 ಡಿಗ್ರಿ ಸೆಲ್ಸಿಯಸ್‌ ತಲುಪಿದೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ವರ್ಷದ ಏಪ್ರಿಲ್‌ನಲ್ಲಿ ದಕ್ಷಿಣ ಭಾರತದಲ್ಲಿ ಬಿಸಿಗಾಳಿ ಆರಂಭವಾಗಿತ್ತು. ವಿಪರೀತ ಶಾಖವು ವಿದ್ಯುತ್ ಜಾಲದ ಮೇಲೆ ಒತ್ತಡವನ್ನು ಉಂಟುಮಾಡುತ್ತಿತ್ತು. ಅಷ್ಟೇ ಅಲ್ಲ ಜಲ ಮೂಲಗಳು ಸಹ ಬತ್ತಿ ಹೋಗುತ್ತಿವೆ.
ಇಂತಹ ಪರಿಸ್ಥಿತಿಯಲ್ಲಿ ಭಾರತಕ್ಕೆ ಮುಂಗಾರುಗಳು ಮುಂಚಿತವಾಗಿ ಆಗಮನವಾಗಿರುವುದು ಇದಕ್ಕೆಲ್ಲ ದೊಡ್ಡ ಪರಿಹಾರ ಎಂದು ಹೇಳಬಹುದು. ಶೇ.52 ರಷ್ಟು ಭಾರತದ ಕೃಷಿಯು ಮಳೆಯ ಮೇಲೆ ಅವಲಂಬಿತವಾಗಿದೆ. ಜೂನ್ ಮತ್ತು ಜುಲೈನಲ್ಲಿ ಮುಂಗಾರು ಮಳೆ ಖಾರಿಫ್ ಬೆಳೆಗೆ ಅತ್ಯಗತ್ಯ.
ಮತ್ಸ್ಯ ಕನ್ಯೆಯಾದ ಕಿಯಾರಾ.. ಕೇನ್ಸ್​ ಗಾಲಾದಲ್ಲಿ ಗುಲಾಬಿ, ಕಪ್ಪು ಸಿಲ್ಕ್ ಗೌನ್‌ನಲ್ಲಿ ಮಿಂಚಿದ್ದು ಹೀಗೆ​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
