ಲಕನೌ:ಉತ್ತರ ಪ್ರದೇಶ ಸರ್ಕಾರ ಕೋವಿಡ್ 19 ಸಾವಿನ ಅಂಕಿಅಂಶಗಳನ್ನು ಮರೆಮಾಡಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭಾನುವಾರ ಆರೋಪಿಸಿದ್ದಾರೆ. ಸರ್ಕಾರ ಜನರಿಗೆ ಸಹಾಯ ಮಾಡಲು ಇಚ್ಛಿಸುತ್ತಿಲ್ಲವಾದ್ದರಿಂದು ಅದು ನಿಜ ಅಂಕಿ ಅಂಶವನ್ನು ಬಯಲು ಮಾಡಲು ಹಿಂಜರಿಯುತ್ತಿದೆ ಎಂದು ಅವರು ದೂರಿದ್ದಾರೆ.
ರಾಜ್ಯದಲ್ಲಿ ಪಂಚಾಯತ್ ಮತದಾನದ ಸಮಯದಲ್ಲಿ ಶಿಕ್ಷಕರು ಸಾಯುತ್ತಿರುವ ವಿಷಯವನ್ನೂ ಅವರು ಎತ್ತಿ ಹೇಳಿದರು. ಪಂಚಾಯತ್ ಮತದಾನ ಕರ್ತವ್ಯಕ್ಕೆ ಹೋದಾಗ ಕೇವಲ 3 ಶಿಕ್ಷಕರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ಹೇಳಿತ್ತು. ನಂತರ ಸಂಘಸಂಸ್ಥೆಗಳು ಮತ್ತು ನಾವು ಸರಿಯಾದ ವರದಿಗಾಗಿ ಒತ್ತಾಯಿಸಿದ ನಂತರ ಸರ್ಕಾರ ನಿಜಾಂಶ ಒಪ್ಪಿಕೊಂಡಿದೆ. ಕರೊನಾ ಕಾರಣದಿಂದ ಏಪ್ರಿಲ್ ಮೊದಲ ವಾರದಿಂದ ಈವರೆಗೆ ರಾಜ್ಯದಲ್ಲಿ 1,600 ಕ್ಕೂ ಹೆಚ್ಚು ಶಿಕ್ಷಕರು ಮತ್ತು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಶಿಕ್ಷಣ ಇಲಾಖೆ ಈ ಹಿಂದೆ ಹೇಳಿಕೊಂಡಿತ್ತು ಮತ್ತು ಅವರಲ್ಲಿ 90 ಪ್ರತಿಶತ ಜನರು ಪಂಚಾಯತ್ ಮತದಾನದ ಕರ್ತವ್ಯದಲ್ಲಿದ್ದವರು ಎಂದು ತಿಳಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಆದರೆ, ಚುನಾವಣಾ ಕರ್ತವ್ಯದಲ್ಲಿದ್ದು ಸತ್ತವರೆಲ್ಲರಿಗೂ ಕರೊನಾವೇ ಕಾರಣ ಎಂದು ಹೇಳಲಾಗುವುದಿಲ್ಲ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಕೋವಿಡ್ 19 ಕಾರಣದಿಂದಾಗಿ ಕೇವಲ ಮೂವರು ಶಿಕ್ಷಕರು ಸಾವನ್ನಪ್ಪಿದ್ದಾರೆ ಎಂದು ಉತ್ತರ ಪ್ರದೇಶ ಸಚಿವ ಸತೀಶ್ ಚಂದ್ರ ದ್ವಿವೇದಿ ಹೇಳಿದ್ದಾರೆ. (ಏಜೆನ್ಸೀಸ್)
ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ತವರು ರಾಜ್ಯದ ಜನರಿಗೆ ಶುಭ ಸುದ್ದಿ ನೀಡಿದ ಜ್ಯೋತಿರಾದಿತ್ಯ ಸಿಂಧ್ಯಾ

ಉತ್ತರಾಖಂಡದಲ್ಲೂ ಉಚಿತ ವಿದ್ಯುತ್ ಭರವಸೆ ನೀಡಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + eight =
Remember me
