ಲಖನೌ:ಭಾರತೀಯ ಜನತಾ ಪಕ್ಷ(ಬಿಜೆಪಿ) ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿತ್ತು. ಆದರೆ ಬದಲಿಗೆ ಬೆಲೆ ಏರಿಕೆಯನ್ನು ದುಪ್ಪಟ್ಟುಗೊಳಿಸಿದೆ ಎಂದು ಸಮಾಜವಾದಿ ಪಾರ್ಟಿ(ಎಸ್​​ಪಿ) ಮುಖ್ಯಸ್ಥ ಅಖಿಲೇಶ್​ ಯಾದವ್​ ವ್ಯಂಗ್ಯ ಮಾಡಿದ್ದಾರೆ.
ಚುನಾವಣೆಗೆ ಸಜ್ಜಾಗುತ್ತಿರುವ ಉತ್ತರಪ್ರದೇಶದ ಲಖನೌನಲ್ಲಿ ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, “ಬಿಜೆಪಿಯ ಕಮಲವು ಸುಳ್ಳು ಮತ್ತು ಮೋಸದ ಕೊಚ್ಚೆಯಲ್ಲಿ ಬೆಳೆಯುತ್ತದೆ” ಎಂದು ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:‘ರೆಬೆಲ್’ ನಡೆಯಿಂದಾಗಿ ಬಿಜೆಪಿಯಲ್ಲಿ ‘ಏಕಾಂಗಿ’ಯಾದ ಮಾಜಿ ಶಾಸಕ ಸುರೇಶ್​ಗೌಡ
ಬಿಜೆಪಿ ಸರ್ಕಾರ ತನ್ನ ಪ್ರಣಾಳಿಕೆಯನ್ನು ಮರೆತುಬಿಟ್ಟಿದೆ ಎಂದ ಯಾದವ್​, ರೈತರಿಗೆ ತಮ್ಮ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಲಖೀಂಪುರ್​ನ ಮಂಡಿಯಲ್ಲಿ ಒಬ್ಬ ರೈತ ತನ್ನ ಭತ್ತದ ಬೆಳೆಯನ್ನು ಸುಟ್ಟುಹಾಕಿದ. ತಮಗೆ ಸಿಗಬೇಕಾದ ಬೆಲೆ ಸಿಗುತ್ತದಾ ಎಂದು ರೈತರು ತಿಳಿಯಬಯಸಿದ್ದಾರೆ. ಆದರೆ ಅವರಿಗೆ ಉತ್ತರ ಕೊಡುವವರು ಯಾರೂ ಇಲ್ಲ” ಎಂದರು.
ಮುಂಬೈ ಡ್ರಗ್ಸ್​ ಕೇಸ್​: ‘ನನ್ನನ್ನು ಟಾರ್ಗೆಟ್​ ಮಾಡ್ತಿದಾರೆ, ಬೆದರಿಕೆ ಹಾಕ್ತಿದಾರೆ’ ಎಂದ ಎನ್​ಸಿಬಿ ಅಧಿಕಾರಿ

ಪ್ರತಿ ಬಾರಿ ವಿಮಾನ ನಿಲ್ದಾಣದಲ್ಲಿ ಹಿಂಸೆ! ಪ್ರಧಾನಿ ಮೋದಿಗೆ ಹಿರಿಯ ನಟಿಯ ದೂರು



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
