ಖ್ಯಾತ ಗಾಯಕ ಎಸ್​.ಪಿ. ಬಾಲಸುಬ್ರಹ್ಮಣ್ಯಂ ನಿಧನರಾಗಿ ಇಂದಿಗೆ ಒಂದು ವರ್ಷ. ಕಳೆದ ವರ್ಷದ ಆಗಸ್ಟ್​ನಲ್ಲಿ ಕರೊನಾಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾದ ಅವರು, ಒಂದು ತಿಂಗಳ ಹೋರಾಟದ ನಂತರ ಸೆ.25ಕ್ಕೆ ಕೊನೆಯುಸಿರೆಳೆದರು. ಎಸ್​ಪಿಬಿ ನಿಧನರಾದರೂ ಅವರ ಹಾಡುಗಳ ಮೂಲಕ ಮತ್ತೆಮತ್ತೆ ನೆನಪಾಗುತ್ತಾರೆ. ಎಸ್​ಪಿಬಿ ಇಲ್ಲದ ಈ ಒಂದು ವರ್ಷ ಹೇಗಿತ್ತು ಎಂಬುದನ್ನು ಅವರಿಂದ ಹಾಡಿಸಿದ ಮೂವರು ಜನಪ್ರಿಯ ಸಂಗೀತ ನಿರ್ದೇಶಕರು “ವಿಜಯವಾಣಿ’ ಜತೆಗೆ ಹಂಚಿಕೊಂಡಿದ್ದಾರೆ.
ಅವರಿಲ್ಲದೆ ಅದು ಸಾಧ್ಯವಿಲ್ಲಎಸ್​.ಪಿ. ಬಾಲಸುಬ್ರಹ್ಮಣ್ಯಂ ನಿಧನರಾಗುವುದಕ್ಕೆ ಎಂಟು ತಿಂಗಳ ಮುನ್ನ ಏರ್​ಪೋರ್ಟ್​ ಬಳಿ ಇಳಯರಾಜ ಅವರ ಸಂಗೀತ ಸಂಜೆ ನಡೆಯಿತು. ಈ ಸಂಗೀತ ಸಂಜೆಯಲ್ಲಿ ನಾನು ಅವರನ್ನು ಕೊನೆಯದಾಗಿ ನೋಡಿದ್ದು. ಈ ಕಾರ್ಯಕ್ರಮದಲ್ಲಿ ತಮಾಷೆ ಮಾಡಿಕೊಂಡು 20ರ ಹುಡುಗನ ತರಹ ಓಡಾಡಿಕೊಂಡಿದ್ದರು. ಅದೇ ಧ್ವನಿ, ಯಾವುದೇ ಬದಲಾವಣೆಯಿಲ್ಲ. ಆ ಧ್ವನಿಗೆ ಇನ್ನೂ 20 ವರ್ಷ ಯಾವುದೇ ತೊಂದರೆ ಇಲ್ಲ ಎಂದನಿಸುವಂತಿತ್ತು. ಆದರೆ, ಅನ್ಯಾಯ ಆಯಿತು. ಅವರು ಇಲ್ಲ ಅಂತ ಒಪ್ಪಿಕೊಳ್ಳೋಕೆ ಆಗುತ್ತಿಲ್ಲ. ಅವರೊಂದಿಗೆ ಭಕ್ತೀಗಿತೆಗಳ ಪ್ರಾಜೆಕ್ಟ್​ ಮಾಡಬೇಕಿತ್ತು. ಅವರು ಸಹ ಒಪ್ಪಿದ್ದರು. ಆದರೆ, ಅವರಿಲ್ಲದೆ ಅದು ಈಗ ಸಾಧ್ಯವಿಲ್ಲ.| ವಿ. ಮನೋಹರ್​
ಪುಣ್ಯದಿನವಲ್ಲ ಜನ್ಮದಿನಎಸ್​ಪಿಬಿ ನಮ್ಮ ಜತೆಗೆ ದೈಹಿಕವಾಗಿ ಇರದಿರಬಹುದು. ಆದರೆ, ಮಾನಸಿಕವಾಗಿ ಜತೆಗಿದ್ದಾರೆ. ಅವರ ಸ್ಮರಣೆ ಇಲ್ಲದೆ ಬೆಳಗಾಗುವುದಿಲ್ಲ. ಜನ ಒಬ್ಬ ಸಾಧಕನನ್ನು ಮರೆಯಬಹುದು. ಆದರೆ, ಆ ಸಾಧಕ ಹೃದಯವಂತನಾಗಿದ್ದರೆ ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಎಸ್​ಪಿಬಿ ಒಬ್ಬ ಹೃದಯವಂತ ಸಾಧಕರಾಗಿದ್ದರು. ಹಾಗಾಗಿ, ಎಸ್​ಪಿಬಿ ನಮ್ಮ ಜತೆಗೆ ಸದಾ ಇರುತ್ತಾರೆ. ಇಂದು ಅವರ ಪುಣ್ಯದಿನ ಎನ್ನುವುದಕ್ಕಿಂತ ಜನ್ಮದಿನ ಎನ್ನುವುದು ಹೆಚ್ಚು ಸರಿ. ಯಾರೇ ಗಾಯಕರಿರಲಿ, ಏರಿಳಿತ, ಮನಸ್ಥಿತಿ, ಎನಜಿರ್ ವಿಷಯಕ್ಕೆ ಬಂದಾಗ ಖಂಡಿತ ಎಸ್​ಪಿಬಿ ಅವರನ್ನು ನೋಡಿ ಕಲಿತಿರುತ್ತಾರೆ. ಪ್ರತಿಯೊಬ್ಬ ಗಾಯಕನಿಗೂ ಅವರೊಂಥರ ಶಾಲೆ ಇದ್ದಂತೆ. ಅವರನ್ನು ಸಂಗೀತದ ವಿಶ್ವೇಶ್ವರಯ್ಯ ಅಂತ ಕರೆದರೆ ಅದು ಉತೆೆ ಇಲ್ಲ.|ಕೆ.ಕಲ್ಯಾಣ್​
ಅದ್ಭುತ ಶಕ್ತಿರಿಯಾಲಿಟಿ ಶೋಗಳಿರಬಹುದು, ರೆಕಾಡಿರ್ಂಗ್​ ಆಗಿರಬಹುದು, ಊಟದ ಸಮಯದಲ್ಲಿ ಅವರೊಂದಿಗೆ ಸಾಕಷ್ಟು ಸಮಯ ಕಳೆಯುವ ಅವಕಾಶ ನಮಗೆಲ್ಲ ಸಿಕ್ಕಿತು. ಅದೇ ನಮಗೆ ಆಸ್ತಿ. ಆದರೆ, ಹೊಸಬರು ಅವರನ್ನು ತುಂಬ ಮಿಸ್​ ಮಾಡಿಕೊಳ್ಳುತ್ತಾರೆ. ಏಕೆಂದರೆ, ಒಂದು ಸಾಧಾರಣ ಹಾಡನ್ನು ಚೆನ್ನಾಗಿ ಕೇಳುವ ಹಾಗೆ ಹಾಡುವ ಶಕ್ತಿ ಅವರಿಗಿತ್ತು. ಅವರು ಹಾಡಿದರೆ, ಆ ಹಾಡಿನ ಕಲರ್​ ಬೇರೆಯಾಗುತ್ತಿತ್ತು. ಒಂದು ಹಾಡು ಹೇಗೆ ಹಾಡಬೇಕು, ಪಾತ್ರಕ್ಕೆ ಹೇಗೆ ಸೂಟ್​ ಆಗಬೇಕು ಎನ್ನುವುದರಲ್ಲಿ ಅವರು ಮಾಸ್ಟರ್​. ನವರಸಗಳನ್ನು ಧ್ವನಿ ಮೂಲಕ ಕೊಡುವುದು ಬಹಳ ಕಷ್ಟ. ಅದನ್ನವರು ಮಾಡುತ್ತಿದ್ದರು. ಆ ಅನುಭವ ಮತ್ತು ಪರಿಣತಿ ಹೊಸಬರಿಗೆ ಸಿಗುವುದಿಲ್ಲ ಎಂಬುದು ಬೇಸರದ ಸಂಗತಿ.|ಗುರುಕಿರಣ್​
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − four =
Remember me
