|ಮೃತ್ಯುಂಜಯ ಕಪಗಲ್ಬೆಂಗಳೂರು
ಕರ್ನಾಟಕ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ಕಾರಣ ಬಿಜೆಪಿ ವರಿಷ್ಠರು ರಾಜ್ಯದತ್ತ ಹೆಚ್ಚಿನ ಗಮನ ಹರಿಸಿದ್ದು, ಫೆ.1ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್ ಬಗ್ಗೆ ನಿರೀಕ್ಷೆ ಗರಿಗೆದರಿದೆ. ಕೇಂದ್ರದ ಮುಂಗಡಪತ್ರದಲ್ಲಿ ಕರ್ನಾಟಕದ ಜನರನ್ನು ಮೆಚ್ಚಿಸುವ ವಿಶೇಷ ಪ್ಯಾಕೇಜ್, ಯೋಜನೆಗಳನ್ನು ಘೋಷಿಸುವ ಮೂಲಕ ಪ್ರತಿಪಕ್ಷಗಳ ಓಟಕ್ಕೆ ಲಗಾಮು ಹಾಕುವ ಸಾಧ್ಯತೆಗಳಿವೆ ಎಂಬ ಲೆಕ್ಕಾಚಾರ ರಾಜ್ಯ ಬಿಜೆಪಿಯದಾಗಿದೆ.
ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಹೆಚ್ಚಿನ ಉದಾರತೆ ತೋರಬಹುದು ಎಂದು ಉದ್ಯಮ ಮತ್ತು ವಹಿವಾಟು ವಲಯ ಆಶಾಭಾವನೆ ಹೊಂದಿದೆ. ಬೂತ್ ಗೆದ್ದರೆ ರಾಜ್ಯವನ್ನು ಜಯಿಸುತ್ತೇವೆ ಎಂಬ ಗುಜರಾತ್ ತಂತ್ರಗಾರಿಕೆಯನ್ನು ಕರ್ನಾಟಕಕ್ಕೆ ಅನ್ವಯಿಸಿ, ಪೂರಕ ಕಾರ್ಯಯೋಜನೆ ಜಾರಿಗೊಳಿಸಲಾಗಿದೆ. ಚುನಾವಣಾ ರಣತಂತ್ರಗಳಿಗೂ ‘ಗುಜರಾತ್ ಮಾದರಿ’ ಅನುಕರಿಸಲಾಗುತ್ತಿದೆ. ಅಭಿವೃದ್ಧಿ ನಿಟ್ಟಿನಲ್ಲಿ ಇದೇ ಮಾದರಿ ಅನ್ವಯಿಸಿದರೆ ಬಿಜೆಪಿಗೆ ಅನುಕೂಲ. ಇದರಿಂದಾಗಿ ರಾಜ್ಯಕ್ಕೂ ವಿಶೇಷ, ಮಹತ್ವದ ಯೋಜನೆಗಳ ಕೊಡುಗೆ ಲಭ್ಯವಾಗಲಿವೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.
ಪ್ರತಿಯೊಂದು ಸಂದರ್ಭ, ಅವಕಾಶಗಳನ್ನು ಮತಗಳಾಗಿ ಪರಿವರ್ತಿಸಲು ಪಕ್ಷದ ವರಿಷ್ಠರು ಗಮನ ಹರಿಸುತ್ತಿದ್ದು, ಕೇಂದ್ರ ಬಜೆಟ್​ನಲ್ಲಿ ಕರ್ನಾಟಕಕ್ಕೆ ಬಂಪರ್ ಕೊಡುಗೆ ನೀಡಿ ಜನ ಮನಗೆಲ್ಲಲು ಬುನಾದಿ ಹಾಕಲಿದ್ದಾರೆ ಎಂದು ತರ್ಕಿಸಲಾಗುತ್ತಿದೆ.
ಡಬಲ್ ಇಂಜಿನ್ ಸರ್ಕಾರ:ಕೇಂದ್ರದ ಬಜೆಟ್ ಮೂಲಕ ವರಿಷ್ಠರು ರಾಜ್ಯದ ನೆರವಿಗೆ ಬಂದರೆ ‘ಡಬಲ್ ಇಂಜಿನ್’ ಸರ್ಕಾರದ ಪ್ರಯೋಜನಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬಿಂಬಿಸಬಹುದು. ಗುಜರಾತ್ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಹಸಿರು ಇಂಧನ, ಶಿಕ್ಷಣ, ಮೂಲಸವಲತ್ತು ಕ್ಷೇತ್ರಗಳಿಗೆ ಕೇಂದ್ರ ಸಹಭಾಗಿತ್ವದ 21 ಸಾವಿರ ಕೋಟಿ ರೂ. ಮೊತ್ತದ ಯೋಜನೆಗಳ ಘೋಷಣೆ, ಅನುಷ್ಠಾನವನ್ನು ಕರ್ನಾಟಕದ ಜನರು ಸೂಕ್ಷ್ಮವಾಗಿ ಅವಲೋಕಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಪದೆ ಪದೇ ಹೇಳುತ್ತಿರುವ ಡಬಲ್ ಇಂಜಿನ್ ಸರ್ಕಾರದ ಭರವಸೆ ಕರ್ನಾಟಕದ ಜನರ ಮೇಲೆ ಇನ್ನಷ್ಟು ಪ್ರಭಾವಬೀರಲಿದೆ. ಜನರ ಮನವೊಲಿಸಿ ಬಿಜೆಪಿ ಮತಗಳಾಗಿ ಪರಿವರ್ತಿಸಲು ಆಸರೆಯಾಗುತ್ತದೆ ಎಂಬ ಹಿಮ್ಮಾಹಿತಿ ದೆಹಲಿ ನಾಯಕರಿಗೆ ಈಗಾಗಲೇ ರವಾನೆಯಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ರಾಜ್ಯದ ಪ್ರಸ್ತಾವನೆ ಸಲ್ಲಿಕೆ:ಬಜೆಟ್ ಬೇಡಿಕೆ ಕುರಿತು ರಾಜ್ಯ ಸರ್ಕಾರ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು, ಜಲಸಂಪನ್ಮೂಲ ಹಾಗೂ ಹಣಕಾಸು ಇಲಾಖೆಗೆ ಸಂಬಂಧಿಸಿದ ಯೋಜನೆಗಳತ್ತ ಹೆಚ್ಚು ಗಮನಸೆಳೆದಿದೆ. ಮೂಲ ಸವಲತ್ತು ಅಭಿವೃದ್ಧಿ, ಕೃಷಿ ಉತ್ಪನ್ನಗಳ ರಫ್ತಿಗೆ ಉತ್ತೇಜನ, 15ನೇ ಹಣಕಾಸು ಯೋಜನೆ ಶಿಫಾರಸು ಪ್ರಕಾರ ಬಾಕಿ ಹಣ ಪಾವತಿ ಬಗ್ಗೆಯೂ ಪ್ರಸ್ತಾಪಿಸಿದೆ ಎಂದು ಮೂಲಗಳು ತಿಳಿಸಿವೆ.
– ಭವಿಷ್ಯದ ಆರ್ಥಿಕ ನಗರಿ ಎಂದೇ ಬಿಂಬಿತ ಬೆಂಗಳೂರಿಗೆ ಅಂತಾರಾಷ್ಟ್ರೀಯ ಫಿನ್​ಟೆಕ್ ಸಿಟಿ ಮಂಜೂರು
– ಮೆಟ್ರೋ ವಿಸ್ತರಣೆ, ಮೂಲ ಸವಲತ್ತು ಸುಧಾರಣೆ ಸೇರಿ ಬೆಂಗಳೂರಿಗೆ ವಿಶೇಷ ಪ್ಯಾಕೇಜ್
– ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್್ಸ) ಮಂಜೂರು
– ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆಯ ಮಾನ್ಯತೆ
– ನೀರಾವರಿ ಕಾಲುವೆಗಳ ಜಾಲಗಳ ನವೀಕರಣ, ಆಧುನೀಕರಣಕ್ಕೆ ನೆರವು
– ಸ್ಮಾರ್ಟ್​ಸಿಟಿ ಯೋಜನೆಗೆ ರಾಜ್ಯದ ಇನ್ನಷ್ಟು ನಗರಗಳ ಸೇರ್ಪಡೆ
– ಶಿವಮೊಗ್ಗ, ಕಲಬುರಗಿ, ವಿಜಯಪುರ ವಿಮಾನ ನಿಲ್ದಾಣಗಳು ಮೇಲ್ದರ್ಜೆಗೆ
– ಹಸಿರು ಇಂಧನ ಉತ್ಪಾದನೆಗೆ ಪ್ರೋತ್ಸಾಹಕಗಳು, ಹೆಚ್ಚಿನ ಅನುದಾನ
– ಮೈಸೂರು-ಬೆಂಗಳೂರು-ತುಮಕೂರಿಗೆ ಹೈಸ್ಪೀಡ್ ರೈಲ್ವೆ ಯೋಜನೆಗೆ ಅಸ್ತು
– ಆಹಾರ ಸಂಸ್ಕರಣೆ, ಬಲ್ಕ್ ಡ್ರಗ್ ಪಾರ್ಕ್, ಮೆಗಾ ಜವಳಿ ಪಾರ್ಕ್ ಮಂಜೂರು
– ಹಸಿರು ಬಂದರುಗಳ ಅಭಿವೃದ್ಧಿ, ಕರಾವಳಿ ಉದ್ಯೋಗ ವಲಯ ಸೃಷ್ಟಿ
– ಕಲ್ಯಾಣ-ಕರ್ನಾಟಕ ಪ್ರದೇಶ ವಿಶೇಷ ಹೂಡಿಕೆ ವಲಯವಾಗಿ ಪರಿಗಣನೆ
– ಬೆಳಗಾವಿ-ಧಾರವಾಡಕ್ಕೆ ಕೈಗಾರಿಕಾ ಹಾಗೂ ಸಮರ್ಪಿತ ಫೈ›ಟ್ ಕಾರಿಡಾರ್
– ಆಟೋಮೊಬೈಲ್, ತಯಾರಿಕಾ ವಲಯಗಳಿಗೆ ವಿಶೇಷ ಉತ್ತೇಜನಾ ಕ್ರಮ
8 ತಿಂಗಳ ಗರ್ಭಿಣಿಗೆ 1 ವಾರವೂ ಸಮಯ ಕೊಡದೆ ಕೆಲಸದಿಂದ ಕಿತ್ತು ಹಾಕಿದ ಗೂಗಲ್!

ಪಾನಮತ್ತ ಯುವತಿ ಮುಂಬೈನಲ್ಲಿ ಕುಳಿತು ಜೊಮ್ಯಾಟೊದಲ್ಲಿ ಬೆಂಗಳೂರಿನ 2,500 ರೂ. ಮೌಲ್ಯದ ಬಿರಿಯಾನಿ ಆರ್ಡರ್​ ಮಾಡಿದ್ಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
