ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಸಮಾನ ಗೌರವ, ಅವಕಾಶ ದೊರಕಬೇಕು ಎನ್ನುವ ನಿಟ್ಟಿನಲ್ಲಿ ಶತಮಾನಗಳಿಂದಲೂ ಪ್ರಯತ್ನಗಳು ನಡೆದೇ ಇವೆ. ‘ಮಹಿಳೆಯೊಬ್ಬಳು ಮಧ್ಯರಾತ್ರಿಯಲ್ಲಿ ನಿರ್ಭಿಡೆಯಿಂದ ನಡೆದು ಹೋಗುವಂತಾದರೆ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ್ದಕ್ಕೆ ಸಾರ್ಥಕ’ ಎಂದು ಮಹಾತ್ಮಾ ಗಾಂಧೀಜಿ ಹೇಳಿದ್ದರು. ಭಾರತದಲ್ಲಿ ಬಾಲ್ಯವಿವಾಹ, ಸತಿ ಪದ್ಧತಿಯಂಥ ಅನಿಷ್ಠಗಳನ್ನು ಹೋಗಲಾಡಿಸಲು ಸಮಾಜ ಸುಧಾರಕರು, ನೀತಿ ನಿರೂಪಕರು, ಧಾರ್ವಿುಕ ಮುಖಂಡರು ಶ್ರಮಿಸಿದ್ದಾರೆ. ವಿಶ್ವದ ಬುದ್ಧಿವಂತರೆಲ್ಲ ಸೇರಿ ನಿರ್ವಿುಸಿದ ರಾಷ್ಟ್ರ ಎನ್ನಲಾಗುವ ಅಮೆರಿಕದಲ್ಲಿ 1920ರವರೆಗೆ ಮಹಿಳೆಯರಿಗೆ ಮತದಾನದ ಹಕ್ಕು ಇರಲಿಲ್ಲ. ಅನೇಕ ದಶಕಗಳ ಹೋರಾಟದ ಫಲವಾಗಿ ಈ ಹಕ್ಕನ್ನು ಪಡೆಯಲಾಯಿತು. ಹೆಣ್ಣುಮಕ್ಕಳು ಹಾಗೂ ಮಹಿಳೆಯರಿಗೆ ಸಮಾನ ಅವಕಾಶ ನೀಡುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ಪ್ರತಿ ವರ್ಷ ಅಕ್ಟೋಬರ್ 11ರಂದು ‘ಅಂತಾರಾಷ್ಟ್ರೀಯ ಹೆಣ್ಣುಮಗು ದಿನ’ವಾಗಿ ಆಚರಿಸುತ್ತದೆ. ಭಾರತದಲ್ಲಿ ಈ ಕುರಿತು ಮತ್ತಷ್ಟು ಜಾಗೃತಿ ಮೂಡಿಸುವ ಸಲುವಾಗಿ ಜನವರಿ 24ರಂದು (2008ರಿಂದ) ರಾಷ್ಟ್ರೀಯ ಹೆಣ್ಣುಮಗು ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಇಷ್ಟೆಲ್ಲ ಬದಲಾವಣೆಗಳ ನಂತರವೂ ದೇಶದಲ್ಲಿ ಹೆಣ್ಣುಮಕ್ಕಳ ಸುರಕ್ಷತೆ ದೃಷ್ಟಿಯಿಂದ ಕೈಗೊಳ್ಳಬೇಕಾದ ಹೆಜ್ಜೆ, ಸಾಗಬೇಕಾದ ಮಾರ್ಗ ಬಹಳಷ್ಟಿದೆ.
ಫಲ ನೀಡುತ್ತಿರುವ ಜಾಗೃತಿ:ಹೆಣ್ಣು ಮತ್ತು ಗಂಡಿನ ನಡುವೆ ಲಿಂಗಾನುಪಾತ ಅಳೆಯಲು ಮಾನದಂಡವೊಂದಿದೆ. ದೇಶದಲ್ಲಿ ಪ್ರತಿ 1000 ಗಂಡುಮಕ್ಕಳಿಗೆ ಪ್ರತಿಯಾಗಿ ಎಷ್ಟು ಹೆಣ್ಣುಮಕ್ಕಳಿವೆ ಎನ್ನುವುದನ್ನು ವಿಶ್ವಾದ್ಯಂತ ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಈ ಅಂಶ 2015-16ರಲ್ಲಿ ದೇಶದಲ್ಲಿ 991 ಇತ್ತು. ಇದೀಗ 2019-2021ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ 1,020ಕ್ಕೆ ಹೆಚ್ಚಳವಾಗಿದೆ. ಅಂದರೆ ಗಂಡುಮಕ್ಕಳ ಸಂಖ್ಯೆಗಿಂತ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಹೆಣ್ಣುಮಕ್ಕಳ ಅಭಿವೃದ್ಧಿಗಾಗಿ ಜಾರಿಗೊಳಿಸಿದ ಅನೇಕ ಯೋಜನೆಗಳು, ನೀತಿಯಲ್ಲಿನ ಬದಲಾವಣೆಗಳು ಹಾಗೂ ಸಾಮಾಜಿಕ ಜಾಗೃತಿಯ ಕಾರ್ಯಕ್ರಮಗಳು ಸಫಲವಾಗಿರುವುದು ಈ ಬದಲಾವಣೆಗೆ ಕಾರಣ. ಕೇಂದ್ರ ಸರ್ಕಾರವು ‘ಬೇಟಿ ಬಚಾವೋ ಬೇಟಿ ಪಢಾವೋ’ ಹೆಸರಿನಲ್ಲಿ ಹೆಣ್ಣುಮಕ್ಕಳನ್ನು ಉಳಿಸಿ ಮತ್ತು ಹೆಣ್ಣುಮಕ್ಕಳನ್ನು ಓದಿಸಲು ಯೋಜನೆ ರೂಪಿಸಿತು.
ಪರಿಸ್ಥಿತಿ ಸುಧಾರಿಸಬೇಕಿದೆ:ಹೆಣ್ಣುಮಕ್ಕಳ ಕುರಿತು ಅಸಮಾನತೆಯು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿದೆ. ಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ನಗರ ಪ್ರದೇಶದಲ್ಲಿ ಪರಿಸ್ಥಿತಿ ಉತ್ತಮಗೊಳ್ಳುತ್ತದೆ ಎಂಬ ಅಭಿಪ್ರಾಯಗಳು ಸಾಮಾನ್ಯವಾಗಿದ್ದವು. ಸದ್ಯ ದೇಶಾದ್ಯಂತ ಸಿಎಸ್​ಆರ್ 1,020 ಇದ್ದರೂ 13 ರಾಜ್ಯಗಳಲ್ಲಿ ಇನ್ನೂ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯೇ ಇದೆ. ಅದರಲ್ಲೂ ಗ್ರಾಮೀಣ ಪ್ರದೇಶಕ್ಕಿಂತಲೂ ನಗರ ಪ್ರದೇಶದಲ್ಲಿ ಲಿಂಗಾನುಪಾತ ಕಡಿಮೆ ಇದೆ. ಗ್ರಾಮೀಣ ಪ್ರದೇಶದಲ್ಲಿ 1,037 ಇದ್ದರೆ ನಗರ ಪ್ರದೇಶಗಳಲ್ಲಿ 985 ಇದೆ. ವೈದ್ಯಕೀಯ ಸೌಲಭ್ಯಗಳು ಕಡಿಮೆ ಇರುವ ಗುಡ್ಡಗಾಡು ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಲಿಂಗಾನುಪಾತ ಉತ್ತಮವಾಗಿದೆ. ಅಂದರೆ, ಲಿಂಗಪತ್ತೆ ಮಾಡುವ ವಿಧಾನಗಳನ್ನು ನಿಷೇಧಿಸಲಾಗಿದೆಯಾದರೂ ವೈದ್ಯಕೀಯ ವ್ಯವಸ್ಥೆ ಉತ್ತಮಗೊಂಡಿರುವ ಪ್ರದೇಶಗಳಲ್ಲಿ ಇನ್ನೂ ಲಿಂಗಪತ್ತೆ, ಗರ್ಭಪಾತ ನಡೆದಿದೆಯೇ ಎಂಬ ಅನುಮಾನವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಸಮಾಧಾನದ ಸಂಗತಿ ಯೆಂದರೆ ಕರ್ನಾಟಕದಲ್ಲಿ ಗ್ರಾಮೀಣ ಹಾಗೂ ನಗರದ ನಡುವಣ ವ್ಯತ್ಯಾಸ ಅತ್ಯಲ್ಪ. ನಗರ ಪ್ರದೇಶದಲ್ಲಿ 1,034, ಗ್ರಾಮೀಣದಲ್ಲಿ 1,035 ಹಾಗೂ ಸರಾಸರಿ 1,034ರೊಂದಿಗೆ ದೇಶದ ಸರಾಸರಿಗಿಂತಲೂ ಉತ್ತಮ ಸ್ಥಿತಿಯಲ್ಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
