‘ವಲಸಿಗರು: ಅಮೃತ ಕಾಲದಲ್ಲಿ ಭಾರತದ ಪ್ರಗತಿಗೆ ವಿಶ್ವಾಸಾರ್ಹ ಪಾಲುದಾರರು’ ಪ್ರಸಕ್ತ ವರ್ಷದ ಪ್ರವಾಸಿ ಭಾರತೀಯ ದಿವಸ ಆಚರಣೆಯ ತಿರುಳು. ಬಹು ಆಯಾಮದ ಅರ್ಥವನ್ನು ಸ್ಪುರಿಸುವ ಈ ಸಾಲುಗಳು ಅನನ್ಯ ದೇಶಗಳಲ್ಲಿ ನೆಲೆಸಿರುವ ಸಾಗರೋತ್ತರ ಭಾರತೀಯರಲ್ಲಿ ಅಭಿಮಾನದ ಸಾಗರದಲ್ಲಿ ಮಿಂದೇಳಿಸುತ್ತದೆ. ಎನ್​ಆರ್​ಐ ಅಂದರೆ ‘ನಾಟ್ ರೆಸ್ಪೆಕ್ಟಡ್ ಇಂಡಿಯಾ’ ಲಘು ಹಾಸ್ಯದಲ್ಲಿ ತಿವಿಯುತ್ತಿದ್ದ ವ್ಯಾಖ್ಯಾನ ಬದಲಾಗಿದೆ. ನೆಲೆ ಒದಗಿಸಿದ ದೇಶಕ್ಕೆ ಪ್ರತಿಭೆ, ಪರಿಶ್ರಮ, ತಲಾ ಆದಾಯ ವೃದ್ಧಿಗೆ ಪಾಲುದಾರರ ಜತೆಗೆ ತಾಯ್ನಾಡಿನ ಅಭಿಮಾನವನ್ನು ಕಾಪಿಟ್ಟುಕೊಂಡಿದ್ದಾರೆ.
ನನ್ನನ್ನೇ ಉದಾಹರಿಸುವುದಾದರೆ ಭಾರತೀಯ ಕಲಾವಿದರು, ವಿದ್ಯಾಭ್ಯಾಸ ಬಯಸಿ ಬಂದವರಿಗೆ ವಾರ್ಷಿಕ 10 ಸಾವಿರ ಡಾಲರ್ ಮೀಸಲಿರಿಸುತ್ತಿದ್ದೇವೆ. ಅತಿಥಿ ಸತ್ಕಾರದ ವಿಷಯದಲ್ಲಿ ನನ್ನ ಪತ್ನಿ ಕೂಡ ಕೈಜೋಡಿಸುತ್ತಾರೆ. ಅದೇ ರೀತಿ ಅಮೆರಿಕದಲ್ಲಿ ಬದುಕು ಕಟ್ಟಿಕೊಂಡ ಭಾರತೀಯರು ತಮ್ಮದೇ ಆದ ನೆರವು ನೀಡುತ್ತಿದ್ದಾರೆ. ಫೆಡರಲ್ ಬ್ಯಾಂಕ್​ನ ರಿಸರ್ವ್ ಫಂಡ್ ಪ್ರಮಾಣವು ಭಾರತದ ಸಾಲ ಪಡೆಯುವ ಅರ್ಹತಾ ಪ್ರಮಾಣ ಹೆಚ್ಚಿಸಿದೆ. ಭಾರತೀಯರ ಸಾಮರ್ಥ್ಯ, ಪ್ರತಿಭೆಗೆ ಮಾನ್ಯತೆ ನೀಡಿರುವ ಅಮೆರಿಕ ಮುಕ್ತ ಅವಕಾಶಗಳನ್ನು ಕಲ್ಪಿಸಿದ್ದು, ಅಮೆರಿಕ ಅವಕಾಶಗಳ ಅಮರಾವತಿ ಎಂಬ ಉಪಮೆಗೆ ಪಾತ್ರವಾಗಿದೆ. ಪಾಕಿಸ್ತಾನ ಪ್ರಭಾವದಿಂದ ಅಮೆರಿಕದ ಆಡಳಿತಗಾರರು, ರಾಜಕೀಯ ಪಕ್ಷಗಳು, ನಿವಾಸಿಗಳು ಹೊರ ಬಂದಿದ್ದು, ಭಾರತದ ಬಗೆಗಿನ ಪೂರ್ವಾಗ್ರಹ ತೊಡೆದುಹಾಕುವಲ್ಲಿ ಪ್ರವಾಸಿ ಭಾರತೀಯರ ನಿರಂತರ ಪರಿಶ್ರಮ ಅನನ್ಯವಾದುದು.
ನಿರಾಳತೆ:ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಿಗೆ ಈಗ ವೀಸಾ ಗೋಜಿಲ್ಲ. ಪಿಒಐ (ಭಾರತೀಯ ಮೂಲದ ವ್ಯಕ್ತಿ) ಬದಲಿಗೆ ಭಾರತೀಯ ನಾಗರಿಕ (ಒಸಿಐ) ಕಾರ್ಡ್ ನೀಡಿದ್ದು, ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ತೆಗೆದುಕೊಂಡ ಗಮನಾರ್ಹ ನಿರ್ಣಯವಿದು. ವಿವಿಧ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಸುಧಾರಣೆ, ತಾಪಮಾನ ಏರಿಕೆ ತಡೆಗೆ ಕ್ರಮ, ಕರೊನಾ ನಿರ್ವಹಣೆ ಮತ್ತು ನಿಯಂತ್ರಣ ವಿಚಾರದಲ್ಲಿ ಭಾರತ ಸರ್ಕಾರದ ನಡೆ ಅನುಪಮವಾಗಿದ್ದು, ಕರೊನಾ ನಿಯಂತ್ರಣದ ಕೆಲ ಉಪಕ್ರಮಗಳನ್ನು ಅಮೆರಿಕ ಒಪ್ಪಿ ಅನುಸರಿಸಿದ್ದೂ ಉಲ್ಲೇಖನೀಯ.
ಪ್ರಚಾರದ ಕೊರತೆ:ಮಹಾತ್ಮ ಗಾಂಧಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ ದಿನವನ್ನು (ಜ.9) ಪ್ರವಾಸಿ ಭಾರತೀಯ ದಿವಸ ಅಥವಾ ಅನಿವಾಸಿ ಭಾರತೀಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ಮಹತ್ವದ ಈ ದಿನಾಚರಣೆಗೆ ಪ್ರಚಾರದ ಕೊರತೆಯಿದೆ. ಪ್ರತಿಯೊಬ್ಬ ಪ್ರವಾಸಿ ಭಾರತೀಯನ ಮನೆಗೆ ಇನ್ನೂ ತಲುಪಿಲ್ಲ, ಉದ್ದೇಶ ಸಾರ್ಥಕವಾಗಿಸಲು ಇನ್ನಷ್ಟು ಪ್ರಯತ್ನ ಅಗತ್ಯವಾಗಿದೆ.
ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಭಾರತದ ಘನತೆ-ಗೌರವ ಜಗದಗಲ ವ್ಯಾಪಿಸಿದೆ. ದೊಡ್ಡಣ್ಣ ಅಮೆರಿಕ ಜತೆಗೆ ಹಲವು ದೇಶಗಳು ಭಾರತದ ಸಂಪತ್ತು-ತಾಕತ್ತು, ಉದಾತ್ತ ಮೌಲ್ಯ, ಮಾನವೀಯ ಗುಣಗಳನ್ನು ಚೆನ್ನಾಗಿ ಅರಿತುಕೊಂಡಿವೆ. ನ್ಯೂಯಾರ್ಕ್​ನ ವಿಮಾನ ನಿಲ್ದಾಣದಲ್ಲಿ ಭಾರತದ ಧ್ವಜ ರಾರಾಜಿಸಲಾರಂಭಿಸಿದೆ. ಕ್ಯಾಟ್​ಲಾಗ್​ನಲ್ಲಿ ಹಿಂದಿ, ಗುಜರಾತಿ, ಕನ್ನಡ, ತೆಲುಗು ಮುಂತಾದ ಭಾರತೀಯ ಭಾಷೆಗಳು ಸ್ಥಾನ ಪಡೆದುಕೊಂಡಿದ್ದು, ಭಾರತೀಯರೆಂಬ ಅಭಿಮಾನಕ್ಕೆ ಹೆಮ್ಮೆಯ ಕೋಡು ಮೂಡಿದೆ.
|ಕೆಂಟುಕಿ ಕರ್ನಲ್ ನಟರಾಜ್ ಕೋಟೆಅನಿವಾಸಿ ಭಾರತೀಯ.
ಕೃಷಿ, ತೋಟಗಾರಿಕೆಯಲ್ಲಿ ಅವಕಾಶವಿರಲಿ…:ಪ್ರವಾಸಿ ಭಾರತೀಯರಿಗೆ ಮತದಾನದ ಹಕ್ಕು ಕೊಡುವುದು ತಪು್ಪ. ಇದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗುತ್ತದೆ. ಉದ್ದೇಶವೂ ಈಡೇರದು. ವೋಟಿಂಗ್ ಹಕ್ಕು ಬದಲಿಗೆ ತೋಟಗಾರಿಕೆ, ಕೃಷಿಯಲ್ಲಿ ಹೂಡಿಕೆಗೆ ಅವಕಾಶ ಕಲ್ಪಿಸುವುದು ಸೂಕ್ತ. ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ಸಂಜಾತರು ಕೃಷಿಯಲ್ಲಿ ತಾಂತ್ರಿಕತೆ, ತಂತ್ರಜ್ಞಾನ ಪದವಿ ಜತೆಗೆ ಹತ್ತಾರು ಸಂಶೋಧನಗಳ ಮೂಲಕ ಪರಿಣತ ಸಾಧಿಸಿದ್ದಾರೆ. ಇಂತಹವರಿಗೆ ಭಾರತದ ಕೃಷಿ, ತೋಟಗಾರಿಕೆ ರಂಗದಲ್ಲಿ ಅವಕಾಶ ನೀಡಿದರೆ ಬಹು ಉದ್ದೇಶಿತ ಅನುಕೂಲಗಳಾಗಿವೆ. ಆರ್ಥಿಕ ಲಾಭದ ದೃಷ್ಟಿಯಿಂದ ಮಾತ್ರವಲ್ಲ, ಸುಸ್ಥಿರ ಅಭಿವೃದ್ಧಿ ಹಾಗೂ ದೇಶದ ಜಿಡಿಪಿಗೆ ಸಿಂಹಪಾಲು ನೀಡುವುದಕ್ಕೆ ಕೃಷಿ, ತೋಟಗಾರಿಕೆ ವಲಯ ಸಮರ್ಥವಾಗಲಿದೆ.
ಡಾ.ಬ್ರೋ ಯಾವಾಗ ವಿದೇಶಕ್ಕೆ ಹೋಗಲ್ಲ?; ಒಂದು ದೇಶಕ್ಕೆ ಹೊರಟಾಗ ಅವರ ಅಧ್ಯಯನ ಹೇಗಿರುತ್ತೆ?; ಇಲ್ಲಿದೆ ಮಾಹಿತಿ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − six =
Remember me
