| ಆರ್. ತುಳಸಿಕುಮಾರ್ ಬೆಂಗಳೂರು
ಕೃಷಿಕಾರ್ಯಕ್ಕೆ ಮಣ್ಣೇ ಆಧಾರಸ್ತಂಭ. ಬೆಳಗಳ ಇಳುವರಿ ಹಾಗೂ ಗುಣಮಟ್ಟ ಹೆಚ್ಚಳಕ್ಕೆ ಮಣ್ಣಿನ ಫಲವತ್ತತೆ ಪರಿಗಣಿಸಲ್ಪಡುತ್ತದೆ. ಇಂತಹ ನೈಸರ್ಗಿಕ ಸಂಪತ್ತಾಗಿರುವ ಮಣ್ಣು ಈಗ ತನ್ನ ಸಾರವನ್ನು ಕಳೆದುಕೊಳ್ಳುತ್ತಿದೆ. ಅತಿಯಾದ ರಾಸಾಯನಿಗಳನ್ನು ಬಳಸುತ್ತಿರುವ ಪರಿಣಾಮ ಮಣ್ಣಿನ ಮೂಲ ಸ್ವರೂಪವೇ ಬದಲಾಗುತ್ತಿದೆ. ಬೇಕಾಬಿಟ್ಟಿಯಾಗಿ ಕೈಗೊಳ್ಳುತ್ತಿರುವ ಬೇಸಾಯದ ಕ್ರಮಗಳಿಂದಾಗಿಯೂ ಮಣ್ಣಿನಲ್ಲಿರುವ ಪೋಷಕಾಂಶಗಳ ಪ್ರಮಾಣ ವ್ಯತ್ಯಾಸವಾಗುತ್ತಿದೆ. ಇದರ ನೇರ ಪರಿಣಾಮ ಆಹಾರ ಉತ್ಪಾದನೆ ಮೇಲೆ ಆಗಿದೆ.
ಭಾರತದಂತಹ ಕೃಷಿ ಪ್ರಧಾನ ರಾಷ್ಟ್ರದಲ್ಲಿ ಹೆಚ್ಚಿನ ವರ್ಗಗಳ ಜನ ವ್ಯವಸಾಯವನ್ನೇ ಕುಲಕಸುಬನ್ನಾಗಿಸಿಕೊಂಡಿದ್ದಾರೆ. ಪ್ರತಿಶತ 60 ಕುಟುಂಬಗಳು ಕೃಷಿ ಅವಲಂಬಿತರು. ಇತ್ತೀಚೆಗೆ ಕೃಷಿ ಲಾಭದಾಯಕ ಅಲ್ಲ ಎಂಬ ಕಾರಣಕ್ಕೆ ಈ ಪ್ರಮಾಣ ಶೇ.50ಕ್ಕೆ ಇಳಿದಿದೆ. ಸಾಂಪ್ರದಾಯಿಕ ಬೇಸಾಯ ಪದ್ಧತಿಗಳು ಕ್ರಮೇಣ ಬದಿಗೆ ಸರಿಯುತ್ತಿವೆ. ಅಗಾಧ ಜನಸಂಖ್ಯೆಗೆ ಆಹಾರ ಒದಗಿಸುವ ಭರದಲ್ಲಿ ಹೆಚ್ಚು ರಾಸಾಯನಿಕ ಬಳಸಿ ಬೇಸಾಯ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಪಲ್ಲಟದಿಂದಾಗಿ ಮಣ್ಣಿನ ಫಲವತ್ತತೆ ಕುಸಿಯತೊಡಗಿದ್ದು, ಸಾರವಿಲ್ಲದ ಜಮೀನಿನಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ರೈತರು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಜಗತ್ತಿನ ಬಹುತೇಕ ಕೃಷಿಪ್ರಧಾನ ದೇಶಗಳಲ್ಲಿ ಈ ಸಮಸ್ಯೆ ಕಾಡುತ್ತಿದೆ. ಇದರ ಜತೆಗೆ ಜಾಗತಿಕ ತಾಪಮಾನ ಏರಿಕೆ ಹಾಗೂ ಪ್ರಾಕೃತಿಕ ವಿಕೋಪಗಳು ಕೂಡ ಕೃಷಿ ಕ್ಷೇತ್ರ ಹಾಗೂ ರೈತಾಪಿ ಜನರನ್ನು ಇಕ್ಕಟ್ಟಿಗೆ ಸಿಲುಕಿಸಿವೆ.
ವಿವಿಧ ಕಾರ್ಯಕ್ರಮರಾಜ್ಯದಲ್ಲಿ ಈ ಬಾರಿ ವಿಶ್ವ ಮಣ್ಣು ದಿನ ಆಚರಣೆಯನ್ನು ಅರ್ಥಪೂರ್ಣವಾಗಿ ನಡೆಸುವ ಉದ್ದೇಶದಿಂದ ಎಲ್ಲ ಶಾಲಾ-ಕಾಲೇಜುಗಳಲ್ಲಿ ಮಣ್ಣಿನ ಮಹತ್ವ, ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವಂತೆ ಸರ್ಕಾರದ ಮುಖ್ಯ ಕಾಯ ದರ್ಶಿಯವರು ಇಲಾಖೆ ಮುಖ್ಯಸ್ಥರಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ, ಜಿಲ್ಲೆ, ತಾಲೂಕು ಮಟ್ಟದಲ್ಲಿ ವಿವಿಧ ಕಾರ್ಯಕ್ರಮ ಏರ್ಪಡಿಸಲಾಗಿದೆ.
ನಿರ್ವಹಣೆ ಏಕೆ ಅಗತ್ಯ?ಮಣ್ಣಿನ ಆರೋಗ್ಯ ಹಾಗೂ ಪೌಷ್ಠಿಕತೆಯು ಬೆಳೆಗಳ ಇಳುವರಿಗೆ ಅತ್ಯಾವಶ್ಯಕ. ಮಣ್ಣಿನಿಂದ ಉಪಯೋಗಿಸಿದ ಪೋಷಕಾಂಶ ಹಾಗೂ ಜೀವಾಣುಗಳನ್ನು ಅದೇ ಪ್ರಮಾಣದಲ್ಲಿ ಮತ್ತೆ ಸೇರ್ಪಡೆಗೊಳಿಸಿದರೆ ಮಣ್ಣಿನ ಗುಣಲಕ್ಷಣದ ಸಂರಕ್ಷಣೆಯಾಗುತ್ತದೆ. ಜತೆಗೆ ಮಣ್ಣಿನ ಆರೋಗ್ಯ ಹಾಗೂ ಗುಣಲಕ್ಷಣದ ಮಿತಿ ಅರಿತು ಅದಕ್ಕೆ ಪೂರಕ ವಿಧಾನಗಳಿಂದ ಬೇಸಾಯ ಮಾಡಿದರೆ ಹೆಚ್ಚು ಅನುಕೂಲ.
ಹಲವು ಸಮಸ್ಯೆಇತ್ತೀಚಿನ ಸಮೀಕ್ಷೆಯ ಪ್ರಕಾರ ದೇಶದಲ್ಲಿ ಕೃಷಿ ಜಮೀನಿನ ಮಣ್ಣು ಶೇ.19 ಪ್ರಮಾಣದಷ್ಟು ಕಲುಷಿತವಾಗಿದ್ದು, ಭಾರಲೋಹಗಳ ಆಗರವಾಗುತ್ತಿದೆ. ಪರಿಸರ ಸಂಬಂಧಿತ ಸಮಸ್ಯೆಯಿಂದ ಆಹಾರ ಭದ್ರತೆಗೆ ಹೊಡೆತ ಬಿದ್ದಿದೆ. 2022ರಲ್ಲಿ ಪ್ರಕಟಿಸಿರುವ ವರದಿ ಅನ್ವಯ ಒಟ್ಟು ಜನಸಂಖ್ಯೆಯ ಶೇ. 14.37 (194.4 ದಶಲಕ್ಷ) ಮಂದಿ ಅಪೌಷ್ಟಿಕತೆಗೆ ಒಳಗಾಗಿದ್ದಾರೆ. ಮಣ್ಣಿನ ಫಲವತ್ತತೆ ಕ್ಷೀಣತೆಯು ಮಾನವನ ಆರೋಗ್ಯದ ಮೇಲೆ ಪರೋಕ್ಷ ಪರಿಣಾಮ ಬೀರಿದೆ.
ಸವಕಳಿ ಹೆಚ್ಚಳಭಾರತದಲ್ಲಿ ಮಣ್ಣಿನ ಸವಕಳಿ ಪ್ರಮಾಣ ಹೆಚ್ಚುತ್ತಿದೆ. 2017ರಲ್ಲಿ ನಡೆಸಿದ ಅಧ್ಯಯನದ ವೇಳೆ ವಾರ್ಷಿಕ ಪ್ರತಿ ಹೆಕ್ಟೇರ್​ಗೆ 16.35 ಟನ್ ಪ್ರಮಾಣದಷ್ಟು ಸವಕಳಿಯಾಗುತ್ತಿದೆ. ಇದು ಜಾಗತಿಕ ಸರಾಸರಿಗಿಂತ ಎಂಟು ಪಟ್ಟು ಅಧಿಕವಾಗಿದೆ. ಇದು ಮಣ್ಣಿನ ಫಲವತ್ತತೆ ಮೇಲೆ ನೇರ ಪರಿಣಾಮ ಬೀರಿದ್ದು, ಆಹಾರ ಉತ್ಪಾದನೆ ಹಾಗೂ ಗುಣಮಟ್ಟಕ್ಕೂ ಪೆಟ್ಟು ನೀಡಿದೆ. ಕಳವಳಕಾರಿ ಸಂಗತಿ ಏನೆಂದರೆ, ‘ಮಣ್ಣಿನ ಸಾವಯವ ಇಂಗಾಲದ ಅಂಶ’ ಕುಸಿತ ಕಾಣುತ್ತಿದೆ. ಕಳೆದ 70 ವರ್ಷದಿಂದೀಚಿಗೆ ಈ ಪ್ರಮಾಣ ಪ್ರತಿಶತ 1ರಿಂದ ಶೇ.0.3ಕ್ಕೆ ಇಳಿದಿದೆ. ಈ ಸಮಸ್ಯೆಯಿಂದ ಹೊರಬರಲು ಸುಸ್ಥಿರ ಮಣ್ಣು ನಿರ್ವಹಣೆಗೆ ಒತ್ತು ನೀಡಬೇಕಿದೆ ಎನ್ನುತ್ತಾರೆ ಕೃಷಿ ವಿಜ್ಞಾನಿಗಳು.

ಹೊಸ ಆಶಾಕಿರಣಭವಿಷ್ಯದ ದೃಷ್ಟಿಯನ್ನು ಗಮನಿಸಿ ಇತ್ತೀಚೆಗೆ ಕೈಗೊಂಡಿರುವ ಮಣ್ಣು ಸಂರಕ್ಷಣಾ ಕ್ರಮಗಳು ನಿಧಾನವಾಗಿ ರೈತರ ಹೊಲದಲ್ಲಿ ಸಫಲತೆ ಕಾಣತೊಡಗಿವೆ. ನವೀನ ಬಗೆಯ ಬೇಸಾಯ ಕ್ರಮಗಳು, ತಂತ್ರಜ್ಞಾನ ಆಧಾರಿತ ಸಲಕರಣೆಗಳ ಮೂಲಕ ಕೃಷಿ ಕೃಶಗೊಳ್ಳದಂತೆ ನಿಗಾ ಇಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ಸರ್ಕಾರಗಳು ಕೆಲ ಯೋಜನೆಗಳನ್ನು ರೂಪಿಸಿ ಮಣ್ಣಿನ ಸಂರಕ್ಷಣೆಗೆ ಬೆನ್ನೆಲುಬಾಗಿ ನಿಂತಿದೆ. ಇದಕ್ಕೆ ಹೆಗಲು ನೀಡುವಲ್ಲಿ ರೈತ ಸಮುದಾಯ ಕೂಡ ಮುಂದಾಗಿದ್ದು, ಮಣ್ಣಿನ ಫಲವತ್ತತೆ ಹೆಚ್ಚಿಸುವ ಹೊಣೆ ವಹಿಸಿರುವುದು ಮಣ್ಣು ಸಂಪತ್ತು ಉಳಿಸುವಲ್ಲಿ ಹೊಸ ಆಶಾಕಿರಣ ಮೂಡಿಸಿದೆ.
ಮಣ್ಣು ಹಾಗೂ ನೀರು ಕೃಷಿ ಚಟುವಟಿಕೆಗೆ ಬೇಕೇ ಬೇಕು. ಈ ಎರಡೂ ಉತ್ತಮ ಮಟ್ಟದಲ್ಲಿ ಲಭ್ಯವಿದ್ದರೆ ಬೇಸಾಯ ಸುಲಭ. ಇತ್ತೀಚಿನ ಬರಗಾಲದಿಂದಾಗಿ ಮಣ್ಣಿನಲ್ಲಿ ನೀರಿನಾಂಶ ಕುಸಿತ ಕಂಡಿದೆ. ತ್ಯಾಜ್ಯನೀರಿನಿಂದಾಗಿ ಅಂತರ್ಜಲ ಕಲುಷಿತವಾಗುತ್ತಿದೆ. ಮಣ್ಣಿಗೆ ಹೆಚ್ಚು ಗೊಬ್ಬರ, ರಾಸಾಯನಿಕ ಬಳಸಿ ಹಾಳುಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಿ ಮಣ್ಣಿನ ಫಲವತ್ತತೆ ಹೆಚ್ಚಿಸಲು ರೈತರು ಗಮನ ಹರಿಸಬೇಕಿದೆ.
| ಡಾ. ಎನ್.ಬಿ. ಪ್ರಕಾಶ್ ಕೃಷಿ ವಿಜ್ಞಾನಿ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ
ರಮೇಶ್​ ಜಾರಕಿಹೊಳಿ ಆಪ್ತನಿಗೆ ಚಾಕು ಇರಿತ: ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರನ ಬೆಂಬಲಿಗರ ವಿರುದ್ಧ ಆರೋಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 2 =
Remember me
