ಅಯೋಧ್ಯಾ:ಶ್ರೀರಾಮ ಮಂದಿರದ ಭೂಮಿ ಪೂಜೆ ಬುಧವಾರ (ಆ.5) ರಾಮಲಲ್ಲಾ ವಿಗ್ರಹಕ್ಕೆ ತೊಡಿಸಲು ವಿಶೇಷ ಉಡುಪು ತಯಾರಾಗಿದೆ. ಹಸಿರು ಮತ್ತು ಕಿತ್ತಳೆ ಬಣ್ಣದ ಎರಡು ಜೊತೆ ಬಟ್ಟೆಗಳನ್ನು ಹೊಲಿಯಲಾಗಿದೆ. ಶಿಲಾನ್ಯಾಸ ಸಮಾರಂಭ ನಡೆಯುವ ವೇಳೆ ರಾಮಲಲ್ಲಾ ಹಸಿರು ಉಡುಪಿನಲ್ಲಿ ಕಂಗೊಳಿಸಲಿದ್ದಾನೆ. ಆನಂತರ ಕಿತ್ತಳೆ ಉಡುಪನ್ನು ತೊಡಿಸಲಾಗುತ್ತದೆ. ಕಳೆದ ಮೂರುವರೆ ದಶಕಗಳಿಂದ ರಾಮಲಲ್ಲಾಗೆ ಅಪೂರ್ವವಾದ ಬಟ್ಟೆಗಳನ್ನು ಹೊಲಿಯುತ್ತಿದ್ದ ಶಂಕರ್​ಲಾಲ್ ಮತ್ತು ಭಗತ್​ಲಾಲ್ ‘ಪಹಾಡಿ’ ಸಹೋದರರು ಈ ವಿಶಿಷ್ಟ ಉಡುಪನ್ನು ತಯಾರಿಸಿದ್ದಾರೆ. ರ್ದಜಿಗಳು ವಸ್ತ್ರವನ್ನು ಭಾನುವಾರವೇ ಹಸ್ತಾಂತರಿಸಿದ್ದಾರೆ ಎಂದು ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ತಿಳಿಸಿದ್ದಾರೆ.
ಚಿನ್ನದ ದಾರದಿಂದ ಒಂಬತ್ತು ರತ್ನಗಳನ್ನು ಪೋಣಿಸಿ ಮೃದುವಾದ ಮಖ್ಮಲ್ (ವೆಲ್ವೆಟ್) ಬಟ್ಟೆಯಲ್ಲಿ ಈ ಉಡುಪುಗಳನ್ನು ಹೊಲಿಯಲಾಗಿದೆ. ರಾಮನ ಉಡುಪಿಗೆ ಬಳಸುವಂಥ ಬಟ್ಟೆಯನ್ನೇ ಲಕ್ಷ್ಮಣ, ಭರತ, ಶತ್ರುಘ್ನ, ಹನುಮಾನ್ ಬಳಸಲಾಗುತ್ತದೆ ಎಂದು ರ್ದಜಿಗಳು ಹೇಳಿದ್ದಾರೆ. ಅಯೋಧ್ಯೆಯ ಬಡೀ ಕುಟಿಯಾ ಪ್ರದೇಶದಲ್ಲಿ ತಂದೆ ದಿವಂಗತ ಬಾಬುಲಾಲ್ ಹೆಸರಿನಲ್ಲಿರುವ ‘ಬಾಬುಲಾಲ್ ಟೈಲರ್ಸ್’ ಅಂಗಡಿಯಲ್ಲಿ ಉಡುಪು ಹೊಲಿಯಲಾಗಿದೆ. ಇವರು ದೇವತಾ ಉಡುಪನ್ನು ಬಿಟ್ಟರೆ ಬೇರೆಯದ್ದನ್ನು ಹೊಲಿಯುವುದಿಲ್ಲ. ತಮ್ಮ ಹಾಗೂ ಕುಟುಂಬದ ಸದಸ್ಯರ ಉಡುಪುಗಳನ್ನು ಬೇರೆ ರ್ದಜಿಗಳಿಂದ ಹೊಲಿಸಿಕೊಳ್ಳುತ್ತಾರೆ. ಮಂದಿರ ಮಾದರಿಯ ರೈಲು ನಿಲ್ದಾಣ
ಅಯೋಧ್ಯೆಯ ರೈಲು ನಿಲ್ದಾಣವನ್ನು ರಾಮಮಂದಿರ ಮಾದರಿಯಲ್ಲಿ ಮರು ನಿರ್ಮಾಣ ಮಾಡಲಾಗುತ್ತಿದೆ. ಮೊದಲ ಹಂತದ ಕೆಲಸ 2021ರ ಜೂನ್ ವೇಳೆಗೆ ಪೂರ್ಣಗೊಳ್ಳಲಿದೆ. -ಠಿ; 104 ಕೋಟಿ ವೆಚ್ಚದ ಈ ಕಾಮಗಾರಿ 2019ರಲ್ಲಿ ಕಾಮಗಾರಿ ಆರಂಭವಾಗಿದೆ. ್ಞೋಮವಾರ ನಡೆಯಬೇಕಿದ್ದ ನಿಶಾನ್ ಪೂಜೆ ಸಮಾರಂಭವನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ. ಅಯೋಧ್ಯೆಯ ಹನುಮಗಿರಿಯಲ್ಲಿ ಬೆಳಿಗ್ಗೆ 10 ಗಂಟೆಗೆ ನಿಶಾನ್ ಪೂಜೆ ಆರಂಭವಾಗಲಿದೆ ಎಂದು ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ ತಿಳಿಸಿದ್ದಾರೆ. ್ಞರೊನಾ ವೈರಸ್ ಕಾರಣದಿಂದಾಗಿ ತಾವು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಬಿಜೆಪಿ ನಾಯಕಿ ಉಮಾ ಭಾರತಿ ಹೇಳಿದ್ದಾರೆ. ್ಞುಂದಿರ ನಿರ್ವಣಕ್ಕೆ ಶಿವಸೇನೆ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದೆ. ಶಿವಸೇನೆ ಸಂಸ್ಥಾಪಕ ಹಾಗೂ ತಮ್ಮ ತಂದೆ ಬಾಳಾ ಠಾಕ್ರೆ ಈ ಭರವಸೆ ನೀಡಿದ್ದರು ಎಂದು ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ.
151 ನದಿಗಳ ನೀರು ತಂದ ಸೋದರರು!:ಶಿಲಾನ್ಯಾಸಕ್ಕಾಗಿ ದೇಶದಾದ್ಯಂತದ 151 ನದಿಗಳು ಹಾಗೂ ಮೂರು ಸಮುದ್ರಗಳಿಂದ ಸಂಗ್ರಹಿಸಿದ ಜಲವನ್ನು ಅಯೋಧ್ಯೆಗೆ ತರಲಾಗಿದೆ. ಜವುನ್​ಪುರ ಜಿಲ್ಲೆಯ 70ರ ಹರೆಯದ ರಾಧೇ ಶ್ಯಾಮ್ ಪಾಂಡೆ ಮತ್ತು ಪಂಡಿತ್ ತ್ರಿಫಲ ಈ ಕಾರ್ಯ ಮಾಡಿದ್ದಾರೆ. 1968ರಿಂದಲೂ ಅವರು ಈ ಕಾರ್ಯದಲ್ಲಿ ನಿರತರಾಗಿದ್ದು, ಶ್ರೀಲಂಕಾದ 16 ಸ್ಥಳಗಳಿಂದ ಮಣ್ಣನ್ನು ಕೂಡ ಸಂಗ್ರಹಿಸಿದ್ದಾರೆ.
ಮಸೀದಿಗೆ ಜಮೀನು ಹಸ್ತಾಂತರ:ಹೊಸ ಮಸೀದಿಯೊಂದನ್ನು ಕಟ್ಟಿಕೊಳ್ಳಲು ಅಯೋಧ್ಯೆಯ ಬಳಿಯ ಧನ್ನಿಪುರದಲ್ಲಿ ಮಂಜೂರಾಗಿರುವ 5 ಎಕರೆ ಭೂಮಿಗೆ ಸಂಬಂಧಿಸಿದ ಕಾಗದಪತ್ರಗಳನ್ನು ಜಿಲ್ಲಾಧಿಕಾರಿ ಅನುಜ್ ಕುಮಾರ್ ಝಾ ಸುನ್ನಿ ವಕ್ಪ್ ಮಂಡಳಿಗೆ ಶನಿವಾರ ಹಸ್ತಾಂತರಿಸಿದರು. ಕಳೆದ ನವೆಂಬರ್ 9ರಂದು ಅಯೋಧ್ಯೆ ವಿವಾದದ ಕುರಿತು ಅಂತಿಮ ತೀರ್ಪು ನೀಡಿದ್ದ್ದ ಸುಪ್ರೀಂಕೋರ್ಟ್ ಜಮೀನು ಒದಗಿಸಲು ನಿರ್ದೇಶಿಸಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
