ನವದೆಹಲಿ:ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​​ ಯೋಗಕ್ಷೇಮ ಮತ್ತು ದೀರ್ಘಾಯುಷ್ಯ ನೀಡುವಂತೆ ಪ್ರಾರ್ಥಿಸಿ ಹಿಂದು ಸೇನೆಯು ಮಂಗಳವಾರ (ಜುಲೈ 16) ಹವನ ನಡೆಸಿದೆ. ದಿಲ್ಶಾದ್ ಗಾರ್ಡನ್‌ನಲ್ಲಿರುವ ಮಾಬಗ್ಲಾಮುಖಿ ಶಾಂತಿ ಪೀಠದಲ್ಲಿ ಜುಲೈ 16 ರಂದು ಆಚರಣೆ ನಡೆಸಿದ್ದಾರೆ.
ಇದನ್ನು ಓದಿ:ಕಾಶ್ಮೀರಿಗಳನ್ನು ಪಾಕಿಸ್ತಾನಿಗಳಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದಿದ್ದೇಕೆ ಮೆಹಬೂಬಾ ಮುಫ್ತಿ
ಟ್ರಂಪ್ ಅವರ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುತ್ತಿದ್ದೇವೆ. ಅವರನ್ನು ರಕ್ಷಿಸಲು ದೈವಿಕ ಹಸ್ತಕ್ಷೇಪದ ಅಗತ್ಯವಿದೆ ಎಂದು ಹಿಂದೂ ಸೇನೆಯ ವಕ್ತಾರರು ಹೇಳಿರುವುದಾಗಿ ಎಎನ್​ಐ ವರದಿ ಮಾಡಿದೆ. .ಹಿಂದೂ ಸೇನೆಯು ಬೃಹತ್ ಮಹಾಮೃತ್ಯುಂಜಯ್ ಜಪ ಹವನ ಯಾಗವನ್ನು ನಡೆಸಿದೆ. ಇದರಲ್ಲಿ 1.25 ಲಕ್ಷ ಪವಿತ್ರ ಮಹಾಮೃತ್ಯುಂಜಯ ಮಂತ್ರದ ಪಠಣ ಮಾಡಲಾಗಿದೆ. ಈ ಸೇನೆಯು ಬೃಹತ್ ಮಹಾಮೃತ್ಯುಂಜಯ್ ಜಪ ಹವನವು ರಕ್ಷಣಾತ್ಮಕ ಮತ್ತು ಗುಣಪಡಿಸುವ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ.
ಟ್ರಂಪ್​​ ಅವರ ದಾರಿಯಲ್ಲಿ ಉಂಟಾಗುವ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕುವ ಉದ್ದೇಶದಿಂದ ಈ ಹವನವನ್ನು ಮಾಡಲಾಗಿದೆ. ಹಾಗೂ ಅವರು ದೀರ್ಘಕಾಲ ಬದುಕುತ್ತಾರೆ ಎಂದು ಖಚಿತಪಡಿಸಿಕೊಳ್ಳುತ್ತಾರೆ. ಬಟ್ಲರ್ ಪೆನ್ಸಿಲ್ವೇನಿಯಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆದಿದ್ದು, ತಲೆಯನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಯಿತಾದರೂ ಟ್ರಂಪ್ ಅವರ ಬಲ ಕಿವಿಗೆ ಗಾಯವಾಯಿತು. ಕೂದಲೆಳೆ ಅಂತರದಲ್ಲಿ ಟ್ರಂಪ್​​ ಪಾರಾಗಿದ್ದಾರೆ. (ಏಜೆನ್ಸೀಸ್​​)
ಸುಪ್ರೀಂಕೋರ್ಟ್​​ಗೆ ಇಬ್ಬರು ಹೊಸ ನ್ಯಾಯಧೀಶರ ನೇಮಕ; ಅಧಿಕೃತ ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:11 − two =
Remember me
