ಒಂದು ದೇಶ ಒಂದು ಚುನಾವಣೆ, ದೇಶಕ್ಕೆ ಭಾರತ್ ಅನ್ನೋ ಒಂದೇ ಹೆಸರು. ಇಂತಾ ಐತಿಹಾಸಿಕ ಬದಲಾವಣೆಯ ಚರ್ಚೆಗೆ ಹೊಸಾ ಸಂಸತ್​ ಭವನವೇ ವೇದಿಕೆ ಆಗುತ್ತಾ? ಸೂಚನೆಗಳು ಹಾಗೇ ಸಿಗ್ತಾಯಿದೆ. ಸೆಪ್ಟೆಂಬರ್​ 18ರಿಂದ ಕರೆದಿರುವ ವಿಶೇಷ ಸಂಸತ್​ ಅಧಿವೇಶನ ಸೆಂಟ್ರಲ್ ವಿಸ್ತಾದಲ್ಲೇ ನಡೆಯೋದು ಖಚಿತವಾಗಿದೆ.
ಸೆಪ್ಟೆಂಬರ್ 18 ರಂದು ಅಧಿವೇಶನ ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 19 ರಂದು ಗಣೇಶ ಚತುರ್ಥಿಯ ದಿನದಂದು ಸಣ್ಣ ಪೂಜೆಯ ಬಳಿಕ ಹೊಸ ಸಂಸತ್ ಭವನಕ್ಕೆ ಔಪಚಾರಿಕ ಪ್ರವೇಶ ನಡೆಯಲಿದೆ.
ಮಾರ್ಷಲ್​ಗಳಿಗೆ ಕುರ್ತಾ, ಭದ್ರತಾ ಅಧಿಕಾರಿಗಳಿಗೆ ಹೊಸ ಸಮವಸ್ತ್ರ, ಮಹಿಳಾ ಉದ್ಯೋಗಿಗಳಿಗೆ ಹೊಸ ವಿನ್ಯಾಸದ ಸೀರೆಯನ್ನು ಸಮವಸ್ತ್ರವಾಗಿಸಲಾಗುತ್ತಿದೆ. ಹೊಸ ಸಂಸತ್‌ನಲ್ಲಿ ಹೊಸ ಡ್ರೆಸ್ ಕೋಡ್‌ನೊಂದಿಗೆ ಸಿಬ್ಬಂದಿ ಕಾಣಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ. ಸಂಸತ್ ಭವನದ ಸಿಬ್ಬಂದಿ ಗಾಢ ಗುಲಾಬಿ ಬಣ್ಣದ ನೆಹರು ಜಾಕೆಟ್ ಮತ್ತು ಖಾಕಿ ಬಣ್ಣದ ಪ್ಯಾಂಟ್ ಧರಿಸಲಿದ್ದಾರೆ.
ಮೂಲಗಳ ಪ್ರಕಾರ, ಸೆಪ್ಟೆಂಬರ್ 19 ರಂದು ಗಣೇಶ ಚತುರ್ಥಿಯ ದಿನದಂದು ಪೂಜೆ ಮಾಡಿ ಹಳೆಯ ಸಂಸತ್ ಭವನದಿಂದ ಹೊಸ ಸಂಸತ್ ಭವನಕ್ಕೆ ಪ್ರವೇಶ ಮಾಡಲಾಗುತ್ತದೆ.
ಇನ್ನು ಮೂಲಗಳ ಪ್ರಕಾರ, ಸಂಸತ್ ಭವನದ ನೌಕರರಿಗೆ ಹೊಸ ಸಮವಸ್ತ್ರವನ್ನು ವಿನ್ಯಾಸಗೊಳಿಸಲಾಗಿದೆ. ಇದನ್ನು NIFT ವಿನ್ಯಾಸಗೊಳಿಸಿದೆ. ಸಂಸತ್ತಿನ ಈ ಅಧಿವೇಶನದಲ್ಲಿ ಸರ್ಕಾರ ಒಂದು ರಾಷ್ಟ್ರ, ಒಂದು ಚುನಾವಣೆ ಎಂಬ ಮಸೂದೆಯನ್ನು ತರಬಹುದು.
ಮಾರ್ಷಲ್​ಗಳು ಸಫಾರಿ ಸೂಟ್​ನ ಬದಲಿಗೆ ಕೆನೆ ಬಣ್ಣದ ಕುರ್ತಾ ಪೈಜಾಮವನ್ನು ಧರಿಸುತ್ತಾರೆ. ಅವರ ತಲೆಯ ಮೇಲೆ ಟರ್ಬನ್ ಬದಲಿಗೆ ಮಣಿಪುರಿ ಟೋಪಿ ಇರಲಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 + five =
Remember me
