|ರಾಘವ ಶರ್ಮ ನಿಡ್ಲೆ, ಅಯೋಧ್ಯೆ, ಉತ್ತರ ಪ್ರದೇಶ
ಕಳೆದ ಶತಮಾನದ80ರ ದಶಕದಲ್ಲಿ ಆರಂಭಗೊಂಡ ಅಯೋಧ್ಯೆ ಶ್ರೀರಾಮಜನ್ಮಭೂಮಿ ಚಳವಳಿ, ಮಂದಿರ-ಮಸೀದಿ ಮತ್ತು ಮಂಡಲ-ಕಮಂಡಲ ರಾಜಕಾರಣ ಉತ್ತುಂಗಕ್ಕೇರಿದ 90ರ ದಶಕದಿಂದ 2012ರವರೆಗೆ ಉತ್ತರ ಪ್ರದೇಶದ ಅಯೋಧ್ಯೆ ವಿಧಾನಸಭೆ ಕ್ಷೇತ್ರದದಲ್ಲಿ ಬಿಜೆಪಿ ಸೋಲು ಕಂಡಿರಲಿಲ್ಲ. ಆದರೆ, 2012ರ ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿಂದ ಸ್ಪಧಿರ್ಸಿದ್ದ ಎಸ್​ಪಿ ಅಭ್ಯರ್ಥಿ ತೇಜ್​ ನಾರಾಯಣ್​ ಪಾಂಡೆ ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್​ರನ್ನು 5405 ಮತಗಳ ಅಂತರದಲ್ಲಿ ಸೋಲಿಸಿದ್ದರು.
ಪ್ರತಿ ಚುನಾವಣೆಯಲ್ಲೂ ಮಂದಿರ ನಿರ್ಮಾಣ ಭರವಸೆ ನೀಡುತ್ತಿದ್ದ ಬಿಜೆಪಿ ಬಹುಶಃ ಈ ಸೋಲನ್ನು ನಿರೀಕ್ಷಿಸಿರಲಿಲ್ಲ. ಆದರೆ, 2014ರಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಮತ್ತೆ ಅಯೋಧ್ಯೆಯಲ್ಲಿ ಚಿತ್ರಣ ಬದಲಾಯಿತು. 2017ರ ವಿಧಾನಸಭೆ ಚುನಾವಣೆಯಲ್ಲಿ ಪ್ರಚಂಡ ಬಹುಮತ ಗಳಿಸಿದ ಬಿಜೆಪಿ, ಅಯೋಧ್ಯೆಯಲ್ಲೂ ವಿಜಯಿಯಾಗಿತ್ತು.
2017ರಲ್ಲಿ ಗೆದ್ದ ಬನಿಯಾ ಸಮಾಜದ ವೇದ್​ಪ್ರಕಾಶ್​ ಗುಪ್ತಾ ಈ ಬಾರಿ ಮತ್ತೊಮ್ಮೆ ಕಣದಲ್ಲಿದ್ದಾರೆ. ಅವರಿಗೆ ಟಿಕೆಟ್​ ನೀಡಬೇಡಿ ಎಂದು ಕ್ಷೇತ್ರದ ಬಹುಪಾಲು ನಾಯಕರು ವಿನಂತಿಸಿಕೊಂಡರೂ ಹೈಕಮಾಂಡ್​ ಕೇಳಲಿಲ್ಲ. ಗುಪ್ತಾ ಬಗ್ಗೆ ಪದ ಕಾರ್ಯಕರ್ತರಲ್ಲಿ ಮಾತ್ರವಲ್ಲ, ಸ್ಥಳಿಯ ಮತದಾರರಲ್ಲೂ ತೀವ್ರ ಅಸಮಾಧಾನವಿದೆ. “ಕಳೆದೈದು ವರ್ಷದಲ್ಲಿ ಶಾಸಕರು ಕಂಡೇ ಇಲ್ಲ. ಪಿಎಂ ಮೋದಿ ಮತ್ತು ಸಿಎಂ ಯೋಗಿ ಮುಖ ನೋಡಿ ನಾವು ಮತ ಹಾಕಬೇಕಿದೆ’ ಎಂಬ ಅತೃಪ್ತಿಯ ಧ್ವನಿಗಳೇ ನಗರದಲ್ಲೆಡೆ ಕೇಳುತ್ತಿದೆ. ಎಸ್​ಪಿ ಅಭ್ಯರ್ಥಿ ತೇಜ್​ನಾರಾಯಣ್​ ಪಾಂಡೆ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದು, ಇಲ್ಲಿನ ಬ್ರಾಹ್ಮಣ ಮತಗಳನ್ನು ವಿಭಜಿಸಲು ಯತ್ನಿಸಿರುವ ಜತೆಗೆ ಯೋಗಿ ಸರ್ಕಾರದಲ್ಲಿ ಬ್ರಾಹ್ಮಣರು ನಿರ್ಲ್ಯಕ್ಕೊಳಗಾಗಿದ್ದಾರೆ ಎಂದೂ ವ್ಯವಸ್ಥಿತ ಪ್ರಚಾರ ನಡೆಸಿದ್ದಾರೆ. ಬಿಜೆಪಿಯೂ ಬ್ರಾಹ್ಮಣರಿಗೆ ಟಿಕೆಟ್​ ನೀಡುವುದು ಸೂಕ್ತ ಎಂದು ಮನವಿ ನೀಡಲಾಗಿತ್ತಾದರೂ, ದಿಲ್ಲಿ ನಾಯಕರು ಕಿವಿಗೆ ಹಾಕಿಕೊಂಡಿರಲಿಲ್ಲ.
ಮೋದಿ ಮತ್ತು ಯೋಗಿ ಸಾಹಸದಿಂದ ಮಂದಿರ ನಿರ್ಮಾಣ ಕನಸು ನನಸಾಗಿದೆ, ಅಯೋಧ್ಯೆ ನಗರಿ ಪ್ರಗತಿಯ ಉತ್ತುಂಗಕ್ಕೇರಲಿದೆ ಎಂದು ಬಿಜೆಪಿ ಪ್ರಚಾರ ಮಾಡುತ್ತಿದೆ. ಆದರೆ, ವೇದ್​ ಪ್ರಕಾಶ್​ ಬಗ್ಗೆ ಅಸಮಾಧಾನ ಹೆಚ್ಚಿರುವುದರಿಂದಲೇ ಅವಧ್​ ಪ್ರದೇಶ (ಅಯೋಧ್ಯೆ ಇಲ್ಲಿ ಬರುತ್ತದೆ) ಉಸ್ತುವಾರಿ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಕೂಡ ಕಳೆದ ನಾಲ್ಕೆದು ದಿನಗಳಿಂದ ಅಯೋಧ್ಯೆಯಲ್ಲಿದ್ದುಕೊಂಡು, ವಾರ್ಡ್​, ಬೂತ್​ಗಳಿಗೆ ಭೇಟಿ ನೀಡುತ್ತಾ ಸ್ಥಳಿಯ ಪ್ರಮುಖರೊಂದಿಗೆ ತಂತ್ರ ರೂಪಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಸಂಟನಾ ಕಾರ್ಯದಶಿರ್ ಬಿ.ಎಲ್​. ಸಂತೋಷ್​ ಅವರೂ ಅಯೋಧ್ಯೆಗೆ ಭೇಟಿ ಸ್ಥಳಿಯ ಮುಖಂಡರೊಂದಿಗೆ ಸಭೆ ನಡೆಸಿದ್ದರು.
ಅಯೋಧ್ಯೆ ಗೆಲುವಿನ ಹಾದಿ ಕಠಿಣಗೊಂಡಿದೆ ಎಂದು ಸಿಎಂ ಯೋಗಿ ಆದಿತ್ಯನಾಥ ಕೂಡ ಪದ ಪ್ರಮುಖರಿಗೆ ತಿಳಿಸಿದ್ದಾರೆನ್ನಲಾಗಿದೆ. ಬಿಜೆಪಿಗೆ ಅಯೋಧ್ಯೆ ಪ್ರತಿಷ್ಠೆಯ ಪ್ರಶ್ನೆ. ರಾಮಮಂದಿರ ನಿರ್ಮಾಣವಾಗುತ್ತಿರುವ ಕ್ಷೇತ್ರದದಲ್ಲೆ ಸೋಲುಂಡರೆ ಇಡೀ ಸಂಟನೆಗೆ ತಪ್ಪು ಸಂದೇಶ ರವಾನೆಯಾಗಲಿದೆ. ಮುಖ್ಯಮಂತ್ರಿಯಾದ ಬಳಿಕ ಯೋಗಿ 46 ಬಾರಿ ಅಯೋಧ್ಯೆಗೆ ಪ್ರವಾಸ ಮಾಡಿದ್ದಾರೆ. ಅಯೋಧ್ಯೆಯನ್ನು ಜಿಲ್ಲೆ ಎಂದು ದೂಷಿಸಿದ್ದೇ ಯೋಗಿ ಸರ್ಕಾರ. ಹಿಂದೆ ಇದು ಫೈಜಾಬಾದ್​ ಜಿಲ್ಲೆಯಲ್ಲಿತ್ತು. “ಅಯೋಧ್ಯೆ ಅಥವಾ ಮಥುರಾದಿಂದ ಸ್ಪಧಿರ್ಸಬೇಕು ಎಂದು ಯೋಗಿ ಬಯಸಿದ್ದರು. ಆದರೆ, ಅಯೋಧ್ಯೆ ಅಭಿವೃದ್ಧಿ ಹೆಸರಲ್ಲಿ ಯೋಗಿ ಸರ್ಕಾರ ನಮ್ಮ ಅಂಗಡಿ, ಮುಂಗಟ್ಟುಗಳನ್ನು ನೆಲಸಮಗೊಳಿಸುತ್ತಿದೆ ಎಂಬ ಆತಂಕ ಸ್ಥಳಿಯರಲ್ಲಿದೆ. ಬ್ರಾಹ್ಮಣರೂ ಅಸಮಾಧಾನಗೊಂಡಿದ್ದಾರೆ ಎಂದು ಇಲ್ಲಿನ ಸ್ವಾಮೀಜಿ ವರ್ಗ ಹೈಕಮಾಂಡಿಗೆ ವರದಿ ನೀಡಿದ್ದರಿಂದ ಗೋರಖ್​ಪುರದಿಂದ ಟಿಕೆಟ್​ ನೀಡಿದ್ದು’ ಎನ್ನುತ್ತಾರೆ ಸ್ಥಳಿಯ ನಿವಾಸಿ ರಾಮ್​ ಅಜೋತ್​ ಯಾದವ್​.
“ಮಂದಿರ ನಿರ್ಮಾಣ ಕಾರ್ಯ ಆರಂಭಗೊಂಡಲ್ಲಿಂದ ಸುತ್ತಮುತ್ತ ರಸ್ತೆ ಅಭಿವೃದ್ಧಿಯಾಗಿದ್ದು, ನಗರ ಸ್ವಚ್ಛತೆಗೂ ಆದ್ಯತೆ ನೀಡಲಾಗುತ್ತಿದೆ. ಇದಕ್ಕೆಲ್ಲಾ ಯೋಗಿ-ಮೋದಿಯೇ ಕಾರಣ ಅಲ್ಲವೇ. ಹಿಂದೆ ಕಾಲಿಟ್ಟಲ್ಲೆಲ್ಲಾ ಚರಂಡಿ ನೀರು, ಕಸ ತುಂಬಿಕೊಂಡಿರುತ್ತಿದ್ದವು’ ಎನ್ನುತ್ತಾರೆ ಸಾಕೇತ್​ ಧರಂಕಾಟಾ ಎಂಬಲ್ಲಿ ಚಹಾ ಮಾರುವ ಬಾಬು ರಾಮ್​. ಅಭ್ಯರ್ಥಿ ವೇದ್​ಪ್ರಕಾಶ್​ ಮುಖ ನೋಡಿ ಮತಹಾಕುತ್ತಿಲ್ಲ. ಯೋಗಿ-ಮೋದಿಗೇ ನನ್ನ ಮತ ಎನ್ನುತ್ತಾರವರು.
ಕ್ಷೇತ್ರದದಲ್ಲಿ ಸುಮಾರು 3.79 ಲ ಮತದಾರರಿದ್ದು, ದಲಿತರು 65 ಸಾವಿರದಷ್ಟಿದ್ದಾರೆ. 40 ಸಾವಿರ ಬ್ರಾಹ್ಮಣರ ಮಧ್ಯೆ ಯಾದವ, ಮುಸ್ಲಿಮರು 1 ಲದಷ್ಟಿದ್ದಾರೆ. ಯೋಗಿ-ಮೋದಿ ಅಲೆಯಲ್ಲಿ ಬಿಜೆಪಿ ಕ್ಷೇತ್ರದ ಗೆಲ್ಲಲೂಬಹುದು. ಆದರೆ, “ವಿರೋಧ ಹೆಚ್ಚಿರುವ ವ್ಯಕ್ತಿಯನ್ನು ಆಯ್ಕೆ ಮಾಡಿದ ದಿಲ್ಲಿ ನಾಯಕರು ವಿನಾಕಾರಣ ನಮ್ಮ ಮುಂದೆ ಮುಳ್ಳಿನ ಹಾದಿ ಸೃಷ್ಟಿಸಿದರು’ ಎಂಬ ಮಾತುಗಳು ಸ್ಥಳಿಯ ಕಾರ್ಯಕರ್ತರ ಮಧ್ಯೆ ಕೇಳುತ್ತಿರುವುದು ಸುಳ್ಳಲ್ಲ.
ಮನೆ ಕಟ್ಟಲು ಕೊನೆಗೂ ದುಡ್ಡು ಸಿಕ್ಕಿತು!“ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನನಗೆ ಮನೆ ಕಟ್ಟಲು 2.5 ಲ ರೂ. ಹಣ ಸಿಕ್ಕಿದೆ. ಹೀಗಾಗಿ, ಮೊದಲ ಬಾರಿಗೆ ನನ್ನ ಕುಟುಂಬ ಬಿಜೆಪಿಗೇ ಮತ ಹಾಕಲಿದೆ’ ಎಂದು ಅಯೋಧ್ಯೆಯ ತೇಡಿ ಬಜಾರ್​ ಚೌರಾಹಾದ ನಿವಾಸಿ ಷರೀಫುದ್ದೀನ್​ ವಿಜಯವಾಣಿಗೆ ಮಾಹಿತಿ ಹಂಚಿಕೊಂಡರು. ಇದುವರೆಗೆ ಕಾಂಗ್ರೆಸ್​ ಬೆಂಬಲಿಸಿಕೊಂಡು ಬಂದಿದ್ದ ಷರೀಫುದ್ದೀನ್​ ಎಸ್​ಪಿ, ಬಿಎಸ್​ಪಿ ಸರ್ಕಾರಗಳಿದ್ದಾಗಲೂ ಮನೆ ಕಟ್ಟಲು ನೆರವು ನೀಡಿ ಎಂದು ಹಲವು ಬಾರಿ ಮನವಿ ನೀಡಿದ್ದರು. “ಸರಿಯಾದ ಮನೆಯಿಲ್ಲದೆ 50 ವರ್ಷಗಳಿಂದ ಒದ್ದಾಡಿದ್ದೇವೆ. ಸ್ಥಳಿಯ ಅಧಿಕಾರಿಗಳು, ಲೋಕಲ್​ ಗೂಂಡಾಗಳು ಸಹಕರಿಸುತ್ತಿರಲಿಲ್ಲ. ಕೊನೆಗೂ ಪ್ರಧಾನ್​ ಮಂತ್ರಿ ಆವಾಸ್​ ಯೋಜನೆ ಅಡಿಯಲ್ಲಿ ನೆರವು ಸಿಕ್ಕಿದೆ. ಮನೆ ನಿರ್ಮಾಣ ಕಾರ್ಯ ನಡೆಯುತ್ತಿದೆ’ ಎಂದು ಹರ್ಷವ್ಯಕ್ತಪಡಿಸುತ್ತಾರೆ.
ಗ್ರಾಮಗಳಲ್ಲಿ ಮುಸಲ್ಮಾನ ಮಹಿಳೆಯರು ಮೋದಿ-ಯೋಗಿ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡುತ್ತಾರೆ. ಕರೊನಾ ಕಾಲದಲ್ಲಿ ರೇಷನ್​ ಕೊಟ್ಟಿರುವುದಕ್ಕೆ ಅವರಿಗೆ ತುಂಬಾ ಖುಷಿಯಿದೆ. ಕಷ್ಟಕಾಲದಲ್ಲಿ ನೆರವಿಗೆ ಬಂದ ಪಿಎಂ-ಸಿಎಂ ಮೇಲೆ ನಮಗೆ ಉಪ್ಪಿನ ಋಣವಿದೆ ಎಂದೇ ಅನೇಕ ಮಹಿಳೆಯರು ಹೇಳಿದ್ದಾರೆ. ಕುಟುಂಬಸ್ಥರು ಮತ್ತು ಬಾಹ್ಯ ಶಕ್ತಿಗಳ ಒತ್ತಡಕ್ಕೆ ಬಿದ್ದು ಅವರು ಬಿಜೆಪಿಗೆ ಮತ ಹಾಕುತ್ತಾರೋ ಇಲ್ಲವೊ ಗೊತ್ತಿಲ್ಲ. ಸರ್ಕಾರದ ಯಾವುದೇ ಯೋಜನೆ ಧರ್ಮ ಅಥವಾ ಜಾತಿಗೆ ಸೀಮಿತವಾಗಿಲ್ಲ ಎನ್ನುವುದೇ ಜನಮೆಚ್ಚುಗೆಗೆ ಕಾರಣ.-ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ, ಉತ್ತರ ಪ್ರದೇಶದ ಅವಧ್​ ಪ್ರದೇಶ ಭಾಗದ ಬಿಜೆಪಿ ಉಸ್ತುವಾರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + five =
Remember me
