ನವದೆಹಲಿ:ಲಾಕ್​ಡೌನ್​ನಿಂದಾಗಿ ವಿವಿಧ ರಾಜ್ಯಗಳಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಹಾಗೂ ವಲಸಿಗರನ್ನು ಸುರಕ್ಷಿತವಾಗಿ ಅವರವರ ರಾಜ್ಯಗಳಿಗೆ ತಲುಪಿಸಲು ವಿವಿಧ ರಾಜ್ಯಗಳು ವಿಶೇಷ ರೈಲುಗಳನ್ನು ವ್ಯವಸ್ಥೆಗೊಳಿಸಿವೆ. ಅದರಂತೆ ತೆಲಂಗಾಣದಿಂದ ಜಾರ್ಖಂಡ್​ಗೆ ವಲಸೆ ಕಾರ್ಮಿಕರನ್ನು ರವಾನಿಸಲು ರೈಲ್ವೆ ಇಲಾಖೆ ವ್ಯವಸ್ಥೆಗೊಳಿಸಿದ್ದ ವಿಶೇಷ ರೈಲು ತೆಲಂಗಾಣದ ಲಿಂಗಂಪಲ್ಲಿಯಿಂದ ಜಾರ್ಖಂಡ್​ನತ್ತ ಶುಕ್ರವಾರ ಪ್ರಯಾಣ ಬೆಳೆಸಿತು.
ತೆಲಂಗಾಣ ರಾಜ್ಯ ಸರ್ಕಾರದ ಕೋರಿಕೆ ಮೇರೆಗೆ ವ್ಯವಸ್ಥೆಗೊಳಿಸಲಾಗಿದ್ದ ಈ ರೈಲಿನ 22 ಬೋಗಿಗಳಲ್ಲಿ 1 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಪ್ರಯಾಣ ಬೆಳೆಸಿದ್ದಾಗಿ ದಕ್ಷಿಣ ಮಧ್ಯ ರೈಲ್ವೆ ವಕ್ತಾರ ಸಿ.ಎಚ್​. ರಾಜೇಶ್ ತಿಳಿಸಿದ್ದಾರೆ.
ಇದು ಒಂದು ವಿಶೇಷ ರೈಲು. ಸಧ್ಯಕ್ಕೆ ಹೆಚ್ಚುವರಿ ರೈಲುಗಳನ್ನು ಓಡಿಸಲು ಸಚಿವಾಲಯದಿಂದ ಯಾವುದೇ ನಿರ್ದೇಶನಗಳಿಲ್ಲ ಎಂದು ತಿಳಿಸಿದ್ದಾರೆ.
ಲಾಕ್​ಡೌನ್​​ನಿಂದಾಗಿ ಜಾರ್ಖಂಡ್ ಮೂಲದ 1200 ಜನ ವಲಸೆ ಕಾರ್ಮಿಕರು ಹೈದರಾಬಾದ್​ನ ಸಂಗಾರೆಡ್ಡಿ ಜಿಲ್ಲೆಯ ಐಐಟಿ ಕ್ಯಾಂಪಸ್ ನಲ್ಲಿ ಸಿಲುಕಿಕೊಂಡಿದ್ದರು.
ಅತ್ತ ತಮ್ಮ ಊರಿಗೂ ಹೋಗಲಾರದೆ, ಇತ್ತ ಗುತ್ತಿಗೆದಾರನಿಂದ ವೇತನವೂ ಸಿಗದ ಹಿನ್ನೆಲೆಯಲ್ಲಿ ಹತಾಶರಾಗಿದ್ದ ಬಿಹಾರ ಮತ್ತು ಜಾರ್ಖಂಡ್​ ಮೂಲದ ಈ ಕಾರ್ಮಿಕರು ಪೊಲೀಸರ ಮೇಲೆ ಬುಧವಾರ ಹಲ್ಲೆ ನಡೆಸಿದ್ದರು.
ತಕ್ಷಣವೇ ಮಧ್ಯಪ್ರವೇಶಿಸಿದ್ದ ಸಂಗಾರೆಡ್ಡಿ ಜಿಲ್ಲಾಡಳಿತ ಪ್ರತಿಭಟನಾನಿರತರನ್ನು ಸಮಾಧಾನಗೊಳಿಸಿದ್ದರು. ಅಲ್ಲದೆ, ತಮ್ಮ ತಮ್ಮ ಊರುಗಳಿಗೆ ತೆರಳಲು ಸೂಕ್ತ ಏರ್ಪಾಡು ಮಾಡುವ ಭರವಸೆ ನೀಡಿ, ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು.
ಲಾಕ್​ಡೌನ್​ನಲ್ಲಿ ವಿವಿಧ ರಾಜ್ಯಗಳಲ್ಲಿ ಸಿಲುಕಿರುವ ಕಾರ್ಮಿಕರು, ವಿದ್ಯಾರ್ಥಿ, ಪ್ರವಾಸಿಗರಿಗೆ ಸಿಹಿ ಸುದ್ದಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:18 + 1 =
Remember me
