ಬೆಂಗಳೂರು:ಅಯೋಧ್ಯೆ ರಾಮ ಮಂದಿರದ ಗರ್ಭಗೃಹದಲ್ಲಿ ಇರಿಸಲಾದ ರಾಮ್ ಲಲ್ಲಾನ ವಿಗ್ರಹದ ಮೊದಲ ಚಿತ್ರಗಳು ಹೊರಬಂದಿವೆ. ಶ್ರೀರಾಮನ ವಿಗ್ರಹದಲ್ಲಿ ಸಹಸ್ರಾರು ದೇವತೆಗಳು ನೆಲೆಸಿದ್ದಾರೆ. ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೆ ಸಿದ್ದವಾಗಿರುವ ಈ ವಿಗ್ರಹದ ವಿಶೇಷತೆಯನ್ನು ತಿಳಿದುಕೊಳ್ಳೋಣ..
ಶ್ರೀರಾಮ ವಿಗ್ರಹದ ವಿಶೇಷತೆ:ರಾಮ್ ಲಲ್ಲಾನ ವಿಗ್ರಹವನ್ನು ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ್ದಾರೆ. 51 ಇಂಚಿನ ರಾಮ್ ಲಲ್ಲಾ ವಿಗ್ರಹವು 150 ಕೆಜಿಗಿಂತ ಹೆಚ್ಚು ತೂಕವಿದ್ದು, ಶಾಲಿಗ್ರಾಮ್ ಕಲ್ಲಿನಿಂದ ಮಾಡಲಾಗಿದೆ. ಬಾಲ ರಾಮನು ಕಾಲಿಗೆ ಗೆಜ್ಜೆ, ಹೊಯ್ಸಳ ಶೈಲಿಯ ಆಭರಣ ಕೆತ್ತನೆ ಉತ್ತರ ಭಾರತ ಶೈಲಿಯಲ್ಲಿ ಧೋತಿ ತೊಟ್ಟಿದ್ದಾನೆ.

ಐದು ವರ್ಷ ಬಾಲಕನ ಮಂದಸ್ಮಿತ ಮುಖ ಹೊಂದಿರುವ ರಾಮನ ಮೂರ್ತಿ ಪ್ರತಿಮೆಯ ಎತ್ತರ 51 ಇಂಚು. ಅಂದರೆ ಸುಮಾರು 4 ಅಡಿ. ಕೈಯಲ್ಲಿ ಬಲಗೈಯಲ್ಲಿ ಬಾಣ, ಎಡಗೈಯಲ್ಲಿ ಬಿಲ್ಲು ಹಿಡಿದಿರುವ ಭಂಗಿಯಲ್ಲಿದ್ದಾನೆ.
ರಾಮನ ಬಲಭಾಗದಲ್ಲಿ ನಿಂತಿರುವ ಹನುಮಂತ, ಮತ್ಸ್ಯ, ಕೂರ್ಮಾ, ನರಸಿಂಹ,ವಾಮನ, ಭ್ರಹ್ಮ, ಓಂ, ಆದಿಶೇಷ, ಚಕ್ರ, ಈಶ್ವರ ಬಲಭಾಗದಲ್ಲಿ ಗರುಡ ಪ್ರಭಾವಳಿಯಲ್ಲಿ ವಿಷ್ಣುವಿನ ದಶಾವತಾರ ಬಿಂಬಿಸುವ ಕೆತ್ತನೆ ಇದೆ. ಬಾಲರಾಮನ ಎಡಗಡೆ ಮೇಲ್ಗಡೆ ಶಂಕ,ಗಧೆ, ಸ್ವಸ್ತಿಕ್​​, ವಿಷ್ಣು, ಪರಶುರಾಮ, ರಾಮ, ಕೃಷ್ಣ, ಬುದ್ಧ, ಕಲ್ಕಿ, ನೆತ್ತಿಯ ಮೇಲೆ ಸೂರ್ಯನಿದ್ದಾನೆ.
ರಾಮಲಲಾನ ಪ್ರಾಣ ಪ್ರತಿಷ್ಠೆ ಜನವರಿ 22ಕ್ಕೆ ನಡೆಯಲಿದೆ. ರಾಮ ಮಂದಿರದ ಗರ್ಭಗುಡಿಯ ಕೂರ್ಮಪೀಠದಲ್ಲಿ ಬಾಲರಾಮನ ವಿಗ್ರಹವನ್ನು ಇಂದು (ಜ.18) ಕೂರಿಸಲಾಗುತ್ತದೆ. ವೈದಿಕರ ತಂಡಕ್ಕೆ ಬಾಲರಾಮನ ದರ್ಶನಕ್ಕಾಗಿ ಇಡೀ ದೇಶ ಹಾತೊರೆಯುತ್ತಿರುವ ಕ್ಷಣ ಇದು. ಬಾಲರಾಮ ವಿಗ್ರಹ ಮೊದಲ ನೋಟ ಇದಾಗಿದೆ.
ನೀವು ಶ್ರೀರಾಮನ ನೋಡಲು ಅಯೋಧ್ಯೆಗೆ ಹೋದರೆ, ಈ ತಿಂಡಿಗಳನ್ನು ಸವಿಯಲು ಮರೆಯದಿರಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
