ಮುಂಬೈ:ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ಕನ್ನಡಕ ಖರೀದಿ ಮಾಡುವ ಸಂಬಂಧ 50 ಸಾವಿರ ರೂಪಾಯಿಗಳ ವಿಶೇಷ ಭತ್ಯೆಯನ್ನು ಮಹಾರಾಷ್ಟ್ರ ಸರ್ಕಾರ ನಿಗದಿಪಡಿಸಿದೆ.
ಮುಂಬೈ ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ಅನ್ವಯ ಆಗುವಂತೆ ಈ ಆದೇಶ ಹೊರಡಿಸಲಾಗಿದೆ. ಪ್ರತಿವರ್ಷ ವಾರ್ಷಿಕವಾಗಿ 50 ಸಾವಿರ ರೂಪಾಯಿಗಳ ವಿಶೇಷ ಭತ್ಯೆ ಇದಾಗಿದೆ.
ಕಾನೂನು ಮತ್ತು ನ್ಯಾಯಾಂಗ ಇಲಾಖೆ ಈ ಆದೇಶ ಹೊರಡಿಸಿದೆ. ಹೈಕೋರ್ಟ್‌ ನ್ಯಾಯಮೂರ್ತಿ ಹಾಗೂ ಅವರ ಪತಿ/ಪತ್ನಿ ಮತ್ತು ಕುಟುಂಬ ಸದಸ್ಯರಿಗೆ ಈ ಭತ್ಯೆ ಅನ್ವಯ ಆಗುತ್ತದೆ. ನ್ಯಾಯಮೂರ್ತಿಗಳ ಅವಲಂಬಿತರು ಯಾರು ಬೇಕಾದರೂ ಈ ಹಣವನ್ನು ಖರೀದಿಯ ಉದ್ದೇಶಕ್ಕೆ ಬಳಸಬಹುದಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಜುಲೈ 10ರಂದು ಹೊರಬಿದ್ದ ಈ ಆದೇಶಕ್ಕೆ ಕಾನೂನು ಸಲಹೆಗಾರ ಹಾಗೂ ಜಂಟಿ ಕಾರ್ಯದರ್ಶಿ ಯೋಗೇಶ್‌ ಅಮೇತಾ ಸಹಿ ಮಾಡಿದ್ದಾರೆ.
ಮತ್ತೆ ಬರ್ತಿದ್ದಾರೆ ದತ್ತಾ ಮೇಸ್ಟ್ರು: ಗಣಿತ, ವಿಜ್ಞಾನ ಬೋಧನೆ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:7 + 17 =
Remember me
