ನವದೆಹಲಿ:ಆಂಧ್ರಪ್ರದೇಶದಲ್ಲಿ ಎನ್​ಡಿಎ ಮೈತ್ರಿಕೂಟದಿಂದ ತೆಲುಗುದೇಶಂ ಪಾರ್ಟಿ ದೂರ ಸರಿದ ನಂತರ ಬಿಜೆಪಿ ಆ ರಾಜ್ಯದಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿಲ್ಲ. ಈ ನಡುವೆ, ವೈಎಸ್​ಆರ್ ಕಾಂಗ್ರೆಸ್​ ಎನ್​ಡಿಎ ಮೈತ್ರಿಕೂಟ ಸೇರಬಹುದೆಂಬ ಕ್ಷೀಣ ಧ್ವನಿ ಕೇಳಿಬಂದಿತ್ತು. ಈಗ ಅದಕ್ಕೆ ಪುಷ್ಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಿಎಂ ವೈ.ಎಸ್​. ಜಗನ್​ಮೋಹನ್ ರೆಡ್ಡಿ ಭೇಟಿ ಮಾಡಿದ್ದು ರಾಜಕೀಯ ಚಾವಡಿಯ ಕುತೂಹಲ ಕೆರಳಿಸಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ದೆಹಲಿಯಲ್ಲಿ ಮಂಗಳವಾರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಆದರೆ ಮಾತುಕತೆ ವಿಷಯವೇನು ಎಂಬುದು ಬಹಿರಂಗವಾಗಿಲ್ಲ. ಏತನ್ಮಧ್ಯೆ, ಎನ್​ಡಿಎ ಸೇರ್ಪಡೆ ಬಗ್ಗೆ ಜಗನ್ ಇನ್ನೂ ಗೊಂದಲದಲ್ಲಿ ಇದ್ದಾರೆಂದು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಬಾಕ್ಸರ್​ ಸುನಿಲ್​, ಆರ್ಚರ್ ನೀರಜ್​ಗೆ ಕ್ರೀಡಾ ಸಚಿವಾಲಯ ನೆರವು; ತಲಾ 5 ಲಕ್ಷ ರೂ. ಮಂಜೂರು
ಜಗನ್ ಇತ್ತೀಚೆಗೆ ಗೃಹ ಸಚಿವ ಅಮಿತ್ ಷಾರನ್ನು ಭೇಟಿಯಾದ ಸಂದರ್ಭದಲ್ಲಿ ಅವರು ಎನ್​ಡಿಎ ಸೇರ್ಪಡೆ ಬಗ್ಗೆ ಮಾತನಾಡಿದ್ದರು ಎಂದು ವರದಿಯಾಗಿತ್ತು. ಜತೆಗೆ ಪ್ರಧಾನಿ ಮೋದಿ ಕೂಡ ವೈಎಸ್​ಆರ್ ಕಾಂಗ್ರೆಸ್ ಎನ್​ಡಿಎಗೆ ಸೇರ ಬಯಸಿದ್ದಾರೆ. 2018ರಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಎನ್​ಡಿಎಯಿಂದ ಹೊರ ಹೋದ ಬಳಿಕ ವೈಎಸ್​ಆರ್ ಕಾಂಗ್ರೆಸ್​ಗೆ ಬಿಜೆಪಿ ಆಹ್ವಾನ ನೀಡಿದೆ ಎಂದು ಹೇಳಿದ್ದು ವರದಿಯಾಗಿತ್ತು.
ಇದನ್ನೂ ಓದಿ:ಕೇರಳ ಚಿನ್ನ ಕಳ್ಳಸಾಗಣೆ ಕೇಸ್​ ಆರೋಪಿಗಳಾದ ಫರೀದ್​, ರಾಬಿನ್ಸ್ ದುಬೈನಲ್ಲಿ ಅರೆಸ್ಟ್: ಸ್ವಪ್ನಾಗೆ ಜಾಮೀನು
40 ನಿಮಿಷದ ಭೇಟಿ ವೇಳೆ ಪೊಲಾವರಂ ನೀರಾವರಿ ಯೋಜನೆಗೆ ಬಾಕಿ ಇರುವ ಹಣ, ಕಡಪಾ ಉಕ್ಕು ಘಟಕದ ಯೋಜನೆಯ ಬಾಕಿ ಅನುದಾನ ಬಿಡುಗಡೆ ಮಾಡುವುದು ಸೇರಿದಂತೆ ರಾಜ್ಯಕ್ಕೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ಜಗನ್ ಚರ್ಚಿಸಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ. (ಏಜೆನ್ಸೀಸ್)
ಮುತ್ತಪ್ಪ ರೈ ಮನೆಗೆ ಇಂದು ಬೆಳಗ್ಗೆಯೇ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು: ಮಾಹಿತಿ ಏನಾದ್ರೂ ಸಿಕ್ತಾ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen − 2 =
Remember me
