ಚಂಡೀಗಢ:ವೇಗವಾಗಿ ಬಂದ ಮರ್ಸಿಡೀಸ್​ ಕಾರು ಸೈಕಲ್​ ಸವಾರರು ಹಾಗೂ ಆಫೀಸ್​ ಕ್ಯಾಬ್​ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ದಾರುಣವಾಗಿ ಮೃತಪಟ್ಟಿರುವ ಘಟನೆ ಪಂಜಾಬ್​ನ ಮೊಹಾಲಿಯಲ್ಲಿ ಶನಿವಾರ ಬೆಳಗ್ಗೆ ನಡೆದಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಬಗ್ಗೆ ಮಾಧ್ಯಮಗಳಲ್ಲಿ ಭಾನುವಾರ ವರದಿಯಾಗಿದ್ದು, ಮೂವರಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಉಳಿದ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಕಪ್ಪು ಬಣ್ಣದ ಮರ್ಸಿಡೀಸ್​ ಕಾರು ಚಂಡೀಗಢ ನೋಂದಣಿ ಸಂಖ್ಯೆಯನ್ನು ಹೊಂದಿದೆ.
ಕಾರಿನ ನಿಯಂತ್ರಣ ಕಳೆದುಕೊಂಡು ಚಾಲಕ ಕ್ಯಾಬ್​ಗೆ ಡಿಕ್ಕಿ ಹೊಡೆಯುವ ಮುನ್ನ ಸೈಕಲ್​ ಸವಾರರಿಬ್ಬರಿಗೆ ಡಿಕ್ಕಿ ಹೊಡೆದನು. ಕೊನೆಗೆ ಕಾರು ಕಬ್ಬಿಣದ ಸರಪಳಿಗೆ ಹೋಗಿ ಸಿಲುಕಿಕೊಂಡಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದರು.
ಇದನ್ನೂ ಓದಿರಿ:ಕಸದ ತೊಟ್ಟಿ ಬಳಿ ಬೀದಿ ನಾಯಿ ಜತೆ ಕಾಣಿಸಿಕೊಂಡ ದಿಗ್ಗಜರು ಚಿತ್ರದ ಖಳನಾಯಕ: ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಾ!
ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಕ್ಯಾಬ್​ನಲ್ಲಿದ್ದವರನ್ನು ಮೊಹಾಲಿಯ ರಾಧಾ ಸೋಮಿ ಚೌಕ್​ನಲ್ಲಿರುವ ಕಚೇರಿಯೊಂದರ ಉದ್ಯೋಗಿಗಳು ಎಂದು ಗುರುತಿಸಲಾಗಿದೆ. ಮೂವರು ಮೃತಪಟ್ಟಿರುವುದಲ್ಲದೆ, ಇತರೆ ಮೂವರಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾತ್ರಿ ಪಾಳಿಯ ಉದ್ಯೋಗಿಗಳನ್ನು ಮನೆಗೆ ಡ್ರಾಪ್​ ಮಾಡಲು ತೆರಳಿದ್ದಾಗ ಈ ಅವಗಢ ಸಂಭವಿಸಿದೆ.
ಮರ್ಸಿಡೀಸ್​ ಕಾರಿನಲ್ಲಿದ್ದವರಿಗೂ ಗಾಯಗಳಾಗಿವೆ. ಆದರೆ, ಏರ್​ ಬ್ಯಾಗ್​ನಿಂದಾಗಿ ಸಣ್ಣಪುಟ್ಟ ಗಾಯಗಳಾಗಿದ್ದು, ಮತ್ತೊಂದು ವಾಹನದಲ್ಲಿ ಪರಾರಿಯಾದರು ಎಂದು ಪ್ರತ್ಯಕ್ಷದರ್ಶಿ ತಿಳಿಸಿದರು. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಮೊಹಾಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
6 ತಿಂಗಳ ಬಳಿಕ ಕೆರೆಯ ಆಳದಲ್ಲಿ ಪತ್ತೆಯಾಯ್ತು ಮೊಬೈಲ್​ ಫೋನ್​: ಸ್ವಿಚ್​ ಆನ್​ ಮಾಡಿದಾಗ ಕಾದಿತ್ತು ಶಾಕ್​!

ಸಲೂನ್​ ಹುಡುಗನ ಮರ್ಮಾಂಗ ಸ್ಪರ್ಶಿಸಿದ ಲಾಯರ್​: ದೂರಿನಲ್ಲಿ ವಕೀಲನ ಕರಾಳ ಮುಖ ಅನಾವರಣ!

ಹೀಗೊಂದು ಆಶಾವಾದ; ನಾನು ಪಕ್ಕದ್ಮನೆ ಹುಡುಗಿ ಅಲ್ಲ, ನಿಮ್ಮನೆ ಹುಡುಗಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + eighteen =
Remember me
