ಬೆಳಗಾವಿ:ರಾಜ್ಯದಲ್ಲಿ ವಿಮಾನವೊಂದಕ್ಕೆ ಹಕ್ಕಿ ಡಿಕ್ಕಿ ಹೊಡೆದು, ವಿಮಾನದ ಇಂಜಿನ್ ಬ್ಲೇಡ್​ಗೆ ಹಾನಿಯಾದ ಪ್ರಕರಣವೊಂದು ವರದಿಯಾಗಿದೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಈ ಪ್ರಕರಣ ನಡೆದಿದ್ದು, ಸ್ಪೈಸ್​ಜೆಟ್​​ನ ವಿಮಾನಕ್ಕೆ ಧಕ್ಕೆಯಾಗಿದೆ.
ಬೆಳಗಾವಿಯಿಂದ ದೆಹಲಿಗೆ ಹೊರಟಿದ್ದ ಸ್ಪೈಸ್​ಜೆಟ್​ ಬಿ737 ವಿಮಾನದಲ್ಲಿ ಇಂದು 187 ಪ್ರಯಾಣಿಕರಿದ್ದರು. ಆದರೆ ಇದು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವಾಗ ಹಕ್ಕಿಯೊಂದು ಡಿಕ್ಕಿ ಹೊಡೆದಿದೆ. ಅದಾಗ್ಯೂ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
ಆದರೆ ಈ ಡಿಕ್ಕಿಯಿಂದಾಗಿ ವಿಮಾನದ ಇಂಜಿನ್ ಬ್ಲೇಡ್​ಗೆ ಹಾನಿ ಆಗಿ ತಾಂತ್ರಿಕ ಅಡಚಣೆ ಉಂಟಾಗಿತ್ತು. ಇದೇ ವಿಮಾನ ಒಡಿಶಾದ ಝರ್ಸುಗುಡಗೆ ಬೆಳಗ್ಗೆ 11.55ರ ಸುಮಾರಿಗೆ ಹೊರಡಬೇಕಿತ್ತು. ಆದರೆ ಹಕ್ಕಿ ಡಿಕ್ಕಿಯಿಂದಾದ ತಾಂತ್ರಿಕ ಅಡಚಣೆ ಕಾರಣ ಬೇರೆ ವಿಮಾನ ವ್ಯವಸ್ಥೆ ಮಾಡಬೇಕಾದ್ದರಿಂದ ಈ ಪ್ರಯಾಣ ಮಧ್ಯಾಹ್ನ 2 ಗಂಟೆಗೆ ಆರಂಭವಾಯಿತು ಎಂದು ಸ್ಪೈಸ್​ ಜೆಟ್​ ಅಧಿಕಾರಿಗಳು ತಿಳಿಸಿದ್ದಾರೆ.
ಒಂದು ಮುತ್ತಿನ ಕಥೆ: ಮದುವೆಯಂತೂ ತ್ವರಿತ, ಅದು ಬಿಂದುವಲ್ಲ ಹರಿತ!; ಖ್ಯಾತ ನಟನ ಸ್ಪಷ್ಟೀಕರಣ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
