ನವದೆಹಲಿ:ಸ್ಪೈಡರ್‌ ಮ್ಯಾನ್‌ನಂತೆ ವೇಷ ಭೂಷಣ ಧರಿಸಿದ ವ್ಯಕ್ತಿಯೊಬ್ಬರು ಕಾರಿನ ಬಾನೆಟ್‌ ಮೇಲೆ ಅಪಾಯಕಾರಿ ಸವಾರಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ದೆಹಲಿ ಟ್ರಾಫಿಕ್ ಪೊಲೀಸರು ತ್ವರಿತ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ:ದೆಹಲಿಯಲ್ಲಿ ವೈಎಸ್ ಜಗನ್ ಪ್ರತಿಭಟನೆಗೆ ‘ಇಂಡಿಯಾ’ ಮೈತ್ರಿಕೂಟ ನಾಯಕರ ಬೆಂಬಲ: ‘ಡ್ರಾಮ’ ಎಂದ ಟಿಡಿಪಿ
ಚಾಲಕ ಮತ್ತು ಸ್ಪೈಡರ್ ಮ್ಯಾನ್ ವೇಷಭೂಷಣವನ್ನು ಧರಿಸಿದ ವ್ಯಕ್ತಿಯ ಮೇಲೆ ಭಾರೀ ದಂಡ ವಿಧಿಸಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದ ಪೋಸ್ಟ್​​​ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗುತ್ತಿದೆ.
ದೆಹಲಿಯ ದ್ವಾರಕಾ ರಸ್ತೆಗಳಲ್ಲಿ ಸ್ಪೈಡರ್ ಮ್ಯಾನ್ ವೇಷಧಾರಿ ವ್ಯಕ್ತಿಯೊಬ್ಬರು ಚಲಿಸುತ್ತಿರುವ ಕಾರಿನ ಬಾನೆಟ್‌ನಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ದೂರನ್ನು ಸ್ವೀಕರಿಸಿದ ದಿಲ್ಲಿ ಟ್ರಾಫಿಕ್ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಸ್ಪೈಡರ್‌ಮ್ಯಾನ್‌ ವೇಷಭೂಷಣದಲ್ಲಿರುವ ವ್ಯಕ್ತಿಯನ್ನು ಆದಿತ್ಯ (20) ಗುರುತಿಸಲಾಗಿದ್ದು ಆತ ನಜಾಫ್‌ಗಢ ನಿವಾಸಿ. ಹಾಗೂ ಕಾರಿನ ಚಾಲಕನನ್ನು ಮಹಾವೀರ್ ಎನ್‌ಕ್ಲೇವ್‌ನಲ್ಲಿ ನೆಲೆಸಿರುವ ಗೌರವ್ ಸಿಂಗ್ (19) ಎಂದು ಗುರುತಿಸಲಾಗಿದೆ.
ಅಪಾಯಕಾರಿ ಚಾಲನೆ, ಮಾಲಿನ್ಯ ಪ್ರಮಾಣ ಪತ್ರವಿಲ್ಲದೆ ಚಾಲನೆ, ಮತ್ತು ಸೀಟ್‌ಬೆಲ್ಟ್ ಧರಿಸದಿದ್ದಕ್ಕಾಗಿ ಕಾನೂನು ಕ್ರಮ ಜರುಗಿಸಲಾಗಿದ್ದು, ಗರಿಷ್ಠ 26,000 ರೂ. ದಂಡ ಅಥವಾ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಲಾಗುತ್ತದೆ ಎಂದು ಸುದ್ದಿ ಸಂಸ್ಥೆ ಎಎನ್​ಐ ಪೋಸ್ಟ್​​​ ಒಂದನ್ನು ತನ್ನ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ.
ಅಮೆರಿಕ: ಐಫೋನ್ ವಿಚಾರವಾಗಿ ತಂಗಿಯನ್ನೇ ಕತ್ತು ಹಿಸುಕಿ ಹತ್ಯೆಗೈದ 12ರ ಬಾಲಕಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
