ಬೆಂಗಳೂರು:ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನವು (CSIF-CFTRI) ಈಚೆಗೆ ಅಭಿವೃದ್ಧಿ ಪಡಿಸಿರುವ ಸ್ಪಿರುಲಿನಾ ಚಿಕ್ಕಿಗಳು ಕರೊನಾಕ್ಕೆ ರಾಮಬಾಣ ಎಂಬಂತೆ ಕೆಲವು ಮಾಧ್ಯಮಗಳು ಪ್ರಸಾರ ಮಾಡಿವೆ. ಆದರೆ ಇದು ನಿಜಕ್ಕೂ ರಾಮಬಾಣವೆ? ಇದರ ಸತ್ಯಾಂಶ ಏನು?
ಇದು ಸುಳ್ಳು ಸುದ್ದಿ ಎಂದಿದ್ದಾರೆ  ಸಂಶೋಧನಾಯಲದ ನಿರ್ದೇಶಕ ಡಾ. ಕೆ.ಎಸ್​.ಎಂ.ಎಸ್​ ರಾಘವರಾವ್​. ತಾವು ಅಭಿವೃದ್ಧಿ ಪಡಿಸಿರುವ ಸ್ಪರುಲಿನಾ ಚಿಕ್ಕಿಗಳ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿವೆ. ಇದು ಕರೊನಾಕ್ಕೆ ರಾಮಬಾಣ ಎನ್ನುವಂತೆ ಅವು ವರದಿ ಮಾಡಿವೆ. ಆದರೆ ಇದು ಸತ್ಯಕ್ಕೆ ದೂರವಾಗಿರುವ ಸಂಗತಿ ಎಂದಿದ್ದಾರೆ ಅವರು.
ಇದನ್ನೂ ಓದಿ:ವಾಸನೆಯಿಂದಲೂ ಕಂಡುಹಿಡಿಯಬಹುದು ಕರೊನಾ: ಅದು ಹೇಗೆ?
ಸ್ಪಿರುಲಿನಾ ಚಿಕ್ಕಿಗಳಾಗಲಿ ಅಥವಾ ಇದೇ ರೀತಿಯಲ್ಲಿ ಪರಿಹಾರ ಆಹಾರವಾಗಿ ಸರಬರಾಜು ಮಾಡಿದ ಇತರ ಸಿಎಫ್​ಟಿಆರ್​ಐ ಉತ್ಪನ್ನಗಳಾಗಲೀ ಯಾವುದೇ ರೋಗ ಇಲ್ಲವೇ ಕಾಯಿಲೆಗೆ ಚಿಕಿತ್ಸೆ ಎಂದು ಸಂಶೋಧನಾಲಯ ಎಲ್ಲಿಯೂ ಹೇಳಿಲ್ಲ. ಸ್ಪಿರುಲಿನಾ ಚಿಕ್ಕಿಗಳು ದೇಹದ ರೋಗಪ್ರತಿರೋಧವನ್ನು ಹೆಚ್ಚಿಸಲು ಬಳಸಬಹುದಾದ ಪೂರಕ ಆಹಾರಗಳು ಅಷ್ಟೇ ಎಂದಿದ್ದಾರೆ ಅವರು.
ಮಕ್ಕಳಲ್ಲಿ ಕಾಡುವ ನ್ಯೂನಪೋಷಣೆಯನ್ನು ಸುಧಾರಿಸಲೆಂದು ಸ್ಪಿರುಲಿನಾ ಚಿಕ್ಕಿಯನ್ನು ಅಭಿವೃದ್ಧಿಪಡಿಸಲಾಗಿದೆಯೇ ಹೊರತು ಕರೊನಾ ರೋಗಕ್ಕೆ ಅಲ್ಲ ಎಂಬ ಸ್ಪಷ್ಟನೆಯನ್ನು ರಾಘವರಾವ್​ ನೀಡಿದ್ದಾರೆ.
ಇದನ್ನೂ ಓದಿ:ಅಕ್ಷಯ ಕುಮಾರನಿಗಾಗಿ ಟೆರೇಸ್​ ಮೇಲೆ ಕಾದು ಕುಳಿತು ಸುಸ್ತಾದ ಮದುಮಗಳು!
ಮೈಸೂರಿನಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಆಗುವುದಕ್ಕೆ ಇದೇ ಔಷಧ ಕಾರಣ ಎಂದು ವರದಿಯಾಗಿವೆ. ಇದು ತಪ್ಪು ಮಾಹಿತಿ. ಸೋಂಕು ಕಡಿಮೆ ಆಗಲು ಆರೋಗ್ಯ ಸಿಬ್ಬಂದಿ ಕಾರಣವೇ ಹೊರತು ಇದಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 3 =
Remember me
