ಮುಂಬೈ:ಬಾಲಿವುಡ್​ ತಾರಾಜೋಡಿ ರಣವೀರ್​ ಸಿಂಗ್​ ಮತ್ತು ದೀಪಿಕಾ ಪಡುಕೋಣೆಯವರ ಈ ವಾರಾಂತ್ಯದ ಡಿನ್ನರ್​ ಔಟಿಂಗ್​ಗೆ ಮತ್ತಷ್ಟು ಮೆರುಗು ಕಟ್ಟಿತ್ತು. ಏಕೆಂದರೆ ಒಲಿಂಪಿಕ್ಸ್​ನಲ್ಲಿ ಎರಡು ಪದಕಗಳನ್ನು ಗೆದ್ದಿರುವ ವಿಶ್ವ ಬ್ಯಾಡ್ಮಿಂಟನ್​ ತಾರೆ ಪಿ.ವಿ.ಸಿಂಧು ಅವರು, ಈ ತಾರಾ ದಂಪತಿಯ ವಿಶೇಷ ಅತಿಥಿಯಾಗಿದ್ದರು.

ಮುಂಬೈನ ವರ್ಲಿಯಲ್ಲಿರುವ ಬಾಸ್ಟಿಯನ್ ಎಂಬ ರೆಸ್ಟೊರೆಂಟಿನಲ್ಲಿ ಶನಿವಾರ ಈ ತಾರೆಗಳ ಸಂಗಮ ಮಾಧ್ಯಮದವರ ಕ್ಯಾಮೆರಾಗಳ ಕಣ್ಣು ಕಟ್ಟಿದ್ದು ವರದಿಯಾಗಿದೆ. ದೀಪಿಕಾ ಬಿಳಿಯ ಟಾಪ್​ ಮತ್ತು ಕಪ್ಪು ಪ್ಯಾಂಟ್ಸ್​ ಧರಿಸಿದ್ದರೆ, ಸಿಂಧು ಅವರು ಬಿಳಿಯ ಬಣ್ಣದ ಸುಂದರ ಡ್ರೆಸ್​ ಧರಿಸಿ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಡಿನ್ನರ್​ನ ನಂತರ ಒಟ್ಟಿಗೆ ನಿಂತು ಫೋಟೋಗೆ ಪೋಸ್​ ಮಾಡಿದ ಈರ್ವರೂ ನಾರಿಮಣಿಯರನ್ನು ರಣವೀರ್​ ಕಾರುಗಳತ್ತ ಕರೆದೊಯ್ದ ಚಿತ್ರವೂ ವೈರಲ್​ ಆಗಿದೆ.

ಈ ಸಂದರ್ಭದ ಸೆಲ್ಫಿಯನ್ನು ರಣವೀರ್​ ಸಿಂಗ್​ ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿದ್ದಾರೆ. ಚಿತ್ರಕ್ಕೆ ‘ಸ್ಮಾಶಿಂಗ್​ ಟೈಮ್​’ ಎಂದು ಕ್ಯಾಪ್ಟನ್​ ನೀಡಿದ್ದಾರೆ. ಒಲಿಂಪಿಕ್ಸ್​ನಲ್ಲಿ ಎರಡು ಬಾರಿ ಪದಕಗಳನ್ನು ಗೆದ್ದಿರುವ ಭಾರತದ ಏಕೈಕ ಅಥ್ಲೀಟ್​ ಆಗಿರುವ ಸಿಂಧು, ಬ್ಯಾಂಡ್ಮಿಂಟನ್​​ನಲ್ಲಿ 2016 ರ ರಿಯೋ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರೆ, ಇತ್ತೀಚೆಗೆ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದರು.

A post shared by Ranveer Singh (@ranveersingh)
ರಣವೀರ್​​ರ ಈ ಪೋಸ್ಟ್​ಗೆ ಕಾಮೆಂಟ್​ ಮಾಡಿರುವ ಸಿಂಧು, “ರಣವೀರ್​-ದೀಪಿಕಾ, ನಿಮ್ಮೊಂದಿಗೆ ಸಮಯ ಕಳೆದದ್ದು ತುಂಬಾ ಚೆನ್ನಾಗಿತ್ತು. ನಿಮ್ಮನ್ನು ಮತ್ತೆ ನೋಡಲು ಕಾತರಳಾಗಿದ್ದೇನೆ” ಎಂದು ಬರೆದಿದ್ದಾರೆ. ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಇದೇ ಚಿತ್ರವನ್ನು ಶೇರ್​ ಮಾಡಿರುವ ಸಿಂಧು, “ನಮ್ಮ ಮುಖದ ಮೇಲಿನ ನಗು ನಾವು ಕಳೆದ ಒಳ್ಳೇ ಸಮಯವನ್ನು ಹೇಳುತ್ತದೆ” ಎಂದು ಟಿಪ್ಪಣಿ ಬರೆದಿದ್ದಾರೆ.(ಏಜೆನ್ಸೀಸ್)
VIDEO| ಮಹಿಳೆಯರ ಟಿ20 ಕ್ರಿಕೆಟ್​ ನಡುವೆ ಫೀಲ್ಡ್​ಗಿಳಿದ ನಾಯಿ!

ನಟಿ ಕಂಗನಾ ರಣಾವತ್​ ಅರ್ಜಿ ತಿರಸ್ಕರಿಸಿದ ಹೈಕೋರ್ಟ್​

VIDEO| 5 ಭಾಷೆಗಳಲ್ಲಿ 777 ಚಾರ್ಲಿಯ ‘ಟಾರ್ಚರ್ ಸಾಂಗ್’ ರಿಲೀಸ್! ಚಿತ್ರದ ಬಿಡುಗಡೆಗೂ ದಿನಾಂಕ ನಿಗದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + three =
Remember me
